ಮಂಡ್ಯ: ಕೆ.ಆರ್.ಪೇಟೆಯ ಪ್ರಸಿದ್ದ ವ್ಯೆದ್ಯ ಕೊರೊನಾ ಸೋಂಕಿಗೆ ಬಲಿ!

: ಕೆ.ಆರ್.ಪೇಟೆ ಪಟ್ಟಣದ ಪ್ರಸಿದ್ದ ವ್ಯೆದ್ಯರೊಬ್ಬರು ಕೊರೊನ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಡಾ.ಪ್ರಕಾಶ್ ಅವರು ಕೊರೊನಾ ಸೋಂಕಿನಿಂದ ಸಾವನಪ್ಪಿದ . ಮೂಲತಃ ಮೈಸೂರಿನವರಾದ ಇವರು ಕೆ.ಆರ್.ಪೇಟೆ ಪಟ್ಟಣದಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಪಟ್ಟಣದಲ್ಲಿ ಇದ್ದುಕೊಂಡು ಮೈಸೂರಿಗೆ ಹೋಗಿ ಬರುತ್ತಿದ್ದರು. ಈ ಮಧ್ಯೆ ಕಳೆದ ಒಂದು ವಾರದ ಹಿಂದೆ ಜ್ವರ ಪೀಡಿತರಾಗಿದ್ದ ಇವರು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಇನ್ನು ಚಿಕಿತ್ಸೆ ವೇಳೆ ಪ್ರಕಾಶ್‌ ಅವರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು, ವರದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆ ಡಾ. ಪ್ರಕಾಶ್ ಅವರು ಕೆ.ಆರ್. ಪೇಟೆ ಪಟ್ಟಣದಲ್ಲಿ ನಡೆಸುತ್ತಿದ್ದ ವಾಸಲ್ಯ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದವರು ಕೊರೋನಾ ಪರೀಕ್ಷೆಗೆ ಒಳಗಾಗುವಂತೆ ಕೆ.ಆರ್.ಪೇಟೆ ತಹಸಿಲ್ದಾರ್ ಶಿವಮೂರ್ತಿ ಸೂಚಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ.


from India & World News in Kannada | VK Polls https://ift.tt/2DadQx1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...