ವಿವಾದಿತ ಟ್ವೀಟ್‌ಗೆ ಹಿಂದೂಗಳ ಕ್ಷಮೆ ಕೋರಿದ ಇಸ್ರೇಲ್‌ ಪ್ರಧಾನಿ ಪುತ್ರ!

ಜೆರುಸಲೇಂ: ಭಾರತೀಯರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಟ್ವೀಟ್‌ ಮಾಡಿದ್ದಕ್ಕೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಹಿರಿಯ ಮಗ ಯೇರ್‌ ಭಾರತೀಯರ ಕ್ಷಮೆ ಕೋರಿದ್ದಾರೆ. 29 ವರ್ಷದ ಯೇರ್‌ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು ತಮ್ಮ ತಂದೆ ಪ್ರಧಾನಿ ನೆತನ್ಯಾಹು ಅವರ ನೀತಿಗಳನ್ನು ಸಮರ್ಥಿಸಿಕೊಂಡಿದ್ದರು. ಈ ವೇಳೆ ಅವರು ಹಿಂದೂ ದೇವತೆ ದುರ್ಗಾ ಮಾತೆಯ ಫೋಟೊವನ್ನು ಪೋಸ್ಟ್‌ ಮಾಡಿ ತಮ್ಮ ತಂದೆಯ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಪ್ರಾಸಿಕ್ಯೂಟರ್‌ ಲಿಯಾಟ್‌ ಬೆನ್‌ ಆರಿ ಅವರ ಮುಖವನ್ನು ದೇವಿಯ ಮುಖದ ಮೇಲೆ ಚಿತ್ರಿಸಿ ಹಾಗೂ ದೇವಿ ಕುಳಿತ ಹುಲಿಯ ಮುಖದಲ್ಲಿ ಇಸ್ರೇಲಿ ಅಟಾರ್ನಿ ಜನರಲ್‌ ಅವಿಚೈ ಮ್ಯಾಂಡೆಲ್ಬಿಟ್‌ ಅವರ ಫೋಟೊ ಜೋಡಿಸಿ ವಿಡಂಬನಾತ್ಮಕ ಚಿತ್ರ ಪ್ರಕಟಿಸಿದ್ದರು. ಈ ಟ್ವೀಟ್‌ಗೆ ಭಾರತೀಯರು ಅಸಮಾಧಾನ ವ್ಯಕ್ತಪಡಿಸಿದ್ದರು ಆ ಬಳಿಕ ಮೆತ್ತಗಾದ ಅವರು, ''ಇಸ್ರೇಲಿನ ರಾಜಕೀಯ ವ್ಯಕ್ತಿಗಳನ್ನು ಟೀಕಿಸಲು ನಾನು ಹೀಗೆ ವಿಡಂಬನೆ ಮಾಡಿದೆ. ಆದರೆ ನನ್ನ ಈ ಚಿತ್ರ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದೆ. ಇದಕ್ಕಾಗಿ ನಾನು ಭಾರತೀಯರ ಕ್ಷಮೆಯಾಚಿಸುತ್ತೇನೆ,'' ಎಂದು ಟ್ವೀಟ್‌ ಮಾಡಿದ್ದಾರೆ.


from India & World News in Kannada | VK Polls https://ift.tt/2X6KLcT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...