13ನೇ ಆವೃತ್ತಿಯ ಐಪಿಎಲ್‌ ಫೈನಲ್‌ ಪಂದ್ಯ ಮುಂದೂಡಿದ ಬಿಸಿಸಿಐ?

ಹೊಸದಿಲ್ಲಿ: ಇದೇ ಸೆಪ್ಟೆಂಬರ್‌ 19 ರಿಂದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ಆರಂಭವಾಗಲಿದ್ದು, ಟೂರ್ನಿಯ ಫೈನಲ್‌ ಪಂದ್ಯವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮುಂದೂಡಿದೆ. ಈ ತಿಂಗಳ ಆರಂಭದಲ್ಲಿ ಟೂರ್ನಿಯನ್ನು ಐಸಿಸಿ ಮುಂದೂಡಿದ್ದರಿಂದ 13ನೇ ಆವೃತ್ತಿಯ ಶ್ರೀಮಂತ ಫ್ರಾಂಚೈಸಿ ಲೀಗ್‌ ಆಯೋಜನೆಯ ಹಾದಿ ಸುಗಮವಾಯಿತು. ಆಸ್ಟ್ರೇಲಿಯಾ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ನಿಗದಿ ಮಾಡಲಾಗಿತ್ತು. ಆದರೆ, ಕೋವಿಡ್‌-19 ಸಾಂಕ್ರಾಮಿಕ ರೋಗ ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಐಸಿಸಿಯು ಚುಟುಕು ವಿಶ್ವಕಪ್‌ ಟೂರ್ನಿಯನ್ನು ಮುಂದೂಡಿದೆ. ಆದ್ದರಿಂದ ಕಳೆದ ಮಾರ್ಚ್‌- ಮೇನಲ್ಲಿ ನಿಗದಿಯಾಗಿದ್ದ ಐಪಿಎಲ್‌ 13ನೇ ಆವೃತ್ತಿಯನ್ನು ಸೆಪ್ಟೆಂಬರ್‌ 19ಕ್ಕೆ ನಿಗದಿ ಮಾಡಿದೆ. ಈ ಬಾರಿ ನಡೆಯುವ ಐಪಿಎಲ್‌ ಟೂರ್ನಿಯ ಫೈನಲ್‌ ಹಣಾಹಣಿಯನ್ನು ಕೆಲ ದಿನಗಳಿಗೆ ಮುಂದೂಡುವ ಸಾಧ್ಯತೆ ಇದೆ ಎಂದು ಟೈಮ್ಸ್ ಆಫ್‌ ಇಂಡಿಯಾ ವರದಿ ತಿಳಿಸಿದೆ. ಇತ್ತೀಚಿನ ವರದಿಗಳ ಪ್ರಕಾರ 13ನೇ ಆವೃತ್ತಿಯ ಟೂರ್ನಿಯು ನವೆಂಬರ್‌ 8 ರಂದು ಫೈನಲ್‌ ಪಂದ್ಯದ ಮೂಲಕ ಅಂತ್ಯವಾಗುತ್ತಿತ್ತು. ಆದರೆ, ಇದೀಗ, ಮುಂದಕ್ಕೆ ಹಾಕಿರುವುದರಿಂದ ಫೈನಲ್‌ ಹಣಾಹಣಿಯು ನವೆಂಬರ್‌ 10 ರಂದು ನಡೆಯಲಿದೆ. ಭಾರತೀಯ ಕ್ರಿಕೆಟ್ ತಂಡವು ಯುಎಇಯಿಂದ ನೇರವಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಬದಲು ಆಟಗಾರರನ್ನು ಸ್ವದೇಶಕ್ಕೆ ಮರಳಲು ಅನುಮತಿಸುವ ಸಲುವಾಗಿ ಈ ಬದಲಾವಣೆಯನ್ನು ಆಲೋಚಿಸಲಾಗುತ್ತಿದೆ. ಮತ್ತೊಂದು ಕಾರಣವೆಂದರೆ ಪಾಲುದಾರರಿಗೆ, ವಿಶೇಷವಾಗಿ ಸ್ಟಾರ್ ಸ್ಪೋರ್ಟ್ಸ್‌ಗೆ ದೀಪಾವಳಿ ವಾರವನ್ನು ಮತ್ತಷ್ಟು ಬಳಸಿಕೊಳ್ಳಲು ಅವಕಾಶ ನೀಡುವುದಾಗಿದೆ. ನಿಗದಿಯಂತೆ ಸೆಪ್ಟೆಂಬರ್‌ 19ರಿಂದ ಐಪಿಎಲ್‌ ಟೂರ್ನಿ ಆರಂಭವಾದರೆ, ಸಾಮಾನ್ಯವಾಗಿ ನವೆಂಬರ್‌ 8ಕ್ಕೆ ಮುಗಿಯಬೇಕಾಗಿತ್ತು. ಆದರೆ ಇದೀಗ ಫೈನಲ್‌ ಹಣಾಹಣಿಯನ್ನು ನ. 10ಕ್ಕೆ ಮುಂದೂಡಿರುವ ಕಾರಣದಿಂದ ಟೂರ್ನಿಯ ದಿನಗಳು 51 ರಿಂದ 53ಕ್ಕೆ ಏರಿಕೆಯಾಗಿದೆ. ಸದ್ಯ ಮಾತುಕತೆ ಪ್ರಾಥಮಿಕ ಹಂತದಲ್ಲಿದ್ದು, ಆಗಸ್ಟ್ 02 ರಂದು ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ದಿನಾಂಕಗಳ ಬದಲಾವಣೆಯ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಐಪಿಎಲ್ ನ.10 ಮಂಗಳವಾರವಾದಂದು ಕೊನೆಗೊಂಡರೆ, ಲೀಗ್ ಫೈನಲ್‌ ಪಂದ್ಯ ಮೊದಲ ಬಾರಿಗೆ ಭಾನುವಾರ ಬಿಟ್ಟು ಇತರೆ ದಿನ ಮೊದಲ ಬಾರಿ ನಡೆಸಿದಂತಾಗುತ್ತದೆ. "ಇಡೀ ದೀಪಾವಳಿ ವಾರವು ವಾರಾಂತ್ಯದಂತೆಯೇ ಕಾಣುಲಿದೆ, ಆದ್ದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ," ಮೂಲಗಳು ತಿಳಿಸಿವೆ. "ಯಾವುದೇ ಐಪಿಎಲ್ ಪಂದ್ಯಗಳಿಲ್ಲದೆ ಆಟಗಾರರು ಯುಎಇಯಲ್ಲಿಯೇ ಇರುತ್ತಾರೆ ಮತ್ತು ಅಲ್ಲಿನ ಶಿಬಿರದಲ್ಲಿ ಭಾಗವಹಿಸುತ್ತಾರೆ" ಎಂದು ಸುದ್ದಿವಾಹಿನಿಗಳು ಮೂಲಗಳನ್ನು ಉಲ್ಲೇಖಿಸಿವೆ. "ಉಳಿದ ಆಟಗಾರರು ಲೀಗ್‌ನ ಅಂತಿಮ ನಾಕೌಟ್ ಪಂದ್ಯಗಳನ್ನು ಆಡುವಲ್ಲಿ ನಿರತರಾಗುತ್ತಾರೆ ಮತ್ತು ಉಳಿದವರು ಸೇರಿಕೊಳ್ಳುತ್ತಾರೆ. ಐಪಿಎಲ್ ಮುಗಿದ ತಕ್ಷಣ ಇಡೀ ತಂಡವು ಅಲ್ಲಿಂದ ಆಸ್ಟ್ರೇಲಿಯಾಗೆ ಒಟ್ಟಿಗೆ ಹಾರಲಿದೆ," ಎಂದು ಮೂಲಗಳು ತಿಳಿಸಿವೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3hPSjZI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...