ಚೀನಾದೊಂದಿಗೆ ಸಂಬಂಧ ಕಡಿತಕ್ಕೆ ತಯಾರಿಲ್ಲ: ಅಮೆರಿಕಕ್ಕೆ ಆಸ್ಟ್ರೇಲಿಯಾ ಸ್ಪಷ್ಟನೆ!

ವಾಷಿಂಗ್ಟನ್: ಜಾಗತಿಕವಾಗಿ ಚೀನಾದ ಪ್ರಸ್ತುತ ಸ್ಥಾನಮಾನದ ಕುರಿತಂತೆ ಹಾಗೂ ನಡುವೆ ಮಹತ್ವದ ರಾಜತಾಂತ್ರಿಕ ಮಾತುಕತೆ ನಡೆದಿರುವುದು ವಿಶ್ವದ ಗಮನ ಸೆಳೆದಿದೆ. ಕೊರೊನಾ ವೈರಸ್ ಹಾವಳಿ ಹಾಗೂಹಾಂಕಾಂಗ್ ವಿವಾದಾತ್ಮಕ ರಾಷ್ಟ್ರೀಯ ಕಾನೂನು ಜಾರಿ ಕುರಿತಂತೆ, ಚೀನಾದ ತಪ್ಪು ಹೆಜ್ಜೆಗಳು ಜಾಗತಿಕವಾಗಿ ಖಂಡನೆಗೊಳಪಟ್ಟಿವೆ ಎಂದು ಉಭಯ ರಾಷ್ಟ್ರಗಳೂ ಅಭಿಪ್ರಾಯಪಟ್ಟಿವೆ. ಆದರೆ ಈ ಕಾರಣಗಳಿಗೆ ಚೀನಾದೊಂದಿಗೆ ಸಂಪೂರ್ಣವಾಗಿ ರಾಜತಾಂತ್ರಿಕ ಹಾಗೂ ವಾಣಿಜ್ಯ ಸಂಬಂಧವನ್ನು ಕಡಿದುಕೊಳ್ಳಲು ತಾನು ಸಿದ್ಧವಿಲ್ಲ ಎಂದು ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ. ಆಸ್ಟ್ರೇಲಿಯಾ-ಚೀನಾ ನಡುವಿನ ರಾಜತಾಂತ್ರಿಕ ಹಾಗೂ ವಾಣಿಜ್ಯ ಸಂಬಂಧಕ್ಕೆ ಸುದೀರ್ಘ ಇತಿಹಾಸವಿದ್ದು, ಪ್ರಸ್ತುತ ಬೆಳವಣಿಗೆಗಳ ಕಾರಣಕ್ಕೆ ಈ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಳ್ಳಲು ತಯಾರಿಲ್ಲ ಎಂದು ಆಸಿಸ್ ವಿದೇಶಾಂಗ ಸಚಿವೆ ಮಾರಿಸೆ ಪೈನೆ ಸ್ಪಷ್ಟಪಡಿಸಿದ್ದಾರೆ. ಅಮರಿಕ-ಚೀನಾ ಸಂಬಂಧಗಳಲ್ಲಿ ಸುಧಾರಣೆ ಕಾಣಬೇಕು ಎಂದು ಆಸ್ಟ್ರೇಲಿಯಾ ಬಯಸುವುದಾಗಿ ಮಾರಿಸೆ ಪೈನೆ ಹೇಳಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ಹೇಳುವ ಎಲ್ಲ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಹಾಂಕಾಂಗ್‌ನಲ್ಲಿ ಜಾರಿಗೆ ತಂದಿರುವ ವಿವಾದಾತ್ಮಕ ರಾಷ್ಟ್ರೀಯ ಭದ್ರತಾ ಕಾನೂನನ್ನು ಅಮಾನವೀಯ ಎಂದು ಬಣ್ಣಿಸಿರುವ ಮಾರಿಸೆ ಪೈನೆ, ಇದನ್ನು ಅಮೆರಿಕ ಹಾಗೂ ಆಸ್ಟ್ರೇಲಿಯಾ ಜಂಟಿಯಾಗಿ ವಿರೋಧಿಸಲಿವೆ ಎಂದು ಭರವಸೆ ನೀಡಿದ್ದಾರೆ. ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕ್ ಪಾಂಪಿಯೋ, ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ಆಸ್ಟ್ರೇಲಿಯಾ ವಿದೇಶಾಂಗ ಸಚಿವೆ ಮಾರಿಸೆ ಪೈನೆ ಹಾಗೂ ರಕ್ಷಣಾ ಕಾರ್ಯದರ್ಶಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


from India & World News in Kannada | VK Polls https://ift.tt/2CVxwow

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...