ರಾಮ ಮಂದಿರ ನಿರ್ಮಾಣದಿಂದ ಭಾರತ-ಬಾಂಗ್ಲಾ ಸಂಬಂಧಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ: ಬಾಂಗ್ಲಾದೇಶ

ಢಾಕಾ: ನಿರ್ಮಾಣದಿಂದ ಭಾರತ-ಬಾಂಗ್ಲಾ ನಡುವಿನ ಸುಮಧುರ ಬಾಂಧವ್ಯಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸುವ ಅಗತ್ಯ ಇದೆ ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್‌ ಮೊಮೆನ್‌ ಸೋಮವಾರ ಹೇಳಿದ್ದಾರೆ. ''ಉಭಯ ದೇಶಗಳ ನಡುವೆ ಕೋಮು ಸಾಮರಸ್ಯ ಕಾಯುವ ಒಪ್ಪಂದಗಳಿವೆ. ಅವು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ವಿಶೇಷವಾಗಿ ಮಂದಿರ ನಿರ್ಮಾಣದ ವೇಳೆ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಹೆಚ್ಚಿನ ಹೊಣೆ ಭಾರತದ ಹೆಗಲ ಮೇಲಿದೆ. ಪ್ರಧಾನಿ ಶೇಖ್‌ ಹಸೀನಾ ಅವರು ಈಗಾಗಲೇ ನರೇಂದ್ರ ಮೋದಿ ಅವರ ಜತೆ ಮಾತನಾಡಿ ಈ ಕುರಿತು ಸಲಹೆ ನೀಡಿದ್ದಾರೆ,'' ಎಂದು ಮೊಮೆನ್‌ ವಿವರಿಸಿದ್ದಾರೆ. ''ಮಂದಿರ ನಿರ್ಮಾಣವು ಭಾರತದ ಆಂತರಿಕ ವಿಷಯವೇ ಆಗಿದ್ದರೂ ಅದರಿಂದ ಬಾಂಗ್ಲಾದ ಜನರ ಭಾವನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಅದು ಹೆಚ್ಚು ಘಾಸಿಗೆ ದಾರಿ ಮಾಡಿಕೊಡದ ರೀತಿಯಲ್ಲಿ ನಿಭಾಯಿಸಬೇಕಾದ ಅನಿವಾರ್ಯತೆ ಇದೆ. ಈ ಒಂದು ವಿಷಯದಿಂದ ನಮ್ಮ ನಡುವಿನ ಅತ್ಯುತ್ತಮ ಬಾಂಧವ್ಯ ಹಾಳಾಗಬಾರದು ಎನ್ನುವುದು ನಮ್ಮ ಕಳಕಳಿಯಾಗಿದೆ,'' ಎಂದು ಮೆಮೊನ್‌ ಹೇಳಿದ್ದಾರೆ. ಮುಂದಿನ ತಿಂಗಳು ಆಗಸ್ಟ್ 5 ರಂದು ರಾಮಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರೆವೇರಿಸಲಿದ್ದಾರೆ ಈ ಬಗ್ಗೆ ಸಮಿತಿ ಘೋಷಣೆ ಮಾಡಿದೆ. ಈ ಬೆನ್ನಲ್ಲೆ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್‌ ಮೊಮೆನ್ ಮನವಿ ಮಾಡಿದ್ದಾರೆ.


from India & World News in Kannada | VK Polls https://ift.tt/2P410mN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...