'ಚಹಾ ಕೂಟಕ್ಕೆ ಬರಲಾಗಲಿಲ್ಲ, ನೀವು ಭೋಜನ ಕೂಟಕ್ಕೆ ಬನ್ನಿ'; ಪ್ರಿಯಾಕ ಗಾಂಧಿಗೆ ಬಿಜೆಪಿ ಸಂಸದ ಆಹ್ವಾನ

ಹೊಸದಿಲ್ಲಿ: ದಿಲ್ಲಿಯ ಲೋಧಿ ಎಸ್ಟೇಟ್‌ನಲ್ಲಿ ವಾಸ ಮಾಡುತ್ತಿರುವ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸುವಂತೆ ಈ ಹಿಂದೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಅದರಂತೆ ಜುಲೈ ಅಂತ್ಯದಲ್ಲಿ ತಾನು ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವುದಾಗಿ ಸರ್ಕಾರಕ್ಕೆ ತಿಳಿಸಿದ್ದರು. ಈ ಮಧ್ಯೆ ತಾನು ಸರ್ಕಾರಿ ಬಂಗಲೆ ತೆರವು ಮಾಡುವ ಮುನ್ನ ಅದೇ ಬಂಗಲೆಗೆ ವಾಸ್ತವ್ಯ ಹೂಡಲು ಬರುವ ಬಿಜೆಪಿ ಮುಖಂಡ ಅವರನ್ನು ಚಹಾ ಕೂಟಕ್ಕೆ ಪ್ರಿಯಾಂಕ ಗಾಂಧಿ ಆಹ್ವಾನಿಸಿದ್ದರು. ಆದರೆ ಚಹಾ ಕೂಟವನ್ನು ತಿರಸ್ಕರಿಸಿರುವ ಅನಿಲ್ ಬಲೂನಿ, ಪ್ರಿಯಾಂಕ ಗಾಂಧಿ ಅವರನ್ನೇ ಭೋಜನ ಕೂಟಕ್ಕೆ ಆಹ್ವಾನಿಸಿದ್ದಾರೆ. ಈ ಬಗ್ಗೆ ಪ್ರಿಯಾಂಕ ಗಾಂಧಿಗೆ ಬಲೂನಿ ಆಹ್ವಾನ ನೀಡಿದ್ದು, ನೀವು ಆಹ್ವಾನಿಸಿದ ಚಹಾ ಕೂಟಕ್ಕೆ ನನಗೆ ಬರಲಾಗಲಿಲ್ಲ, ಹೀಗಾಗಿ ನೀವು ಭೋಜನ ಕೂಟಕ್ಕೆ ಬನ್ನಿ. ನಿಮಗಾಗಿ ಉತ್ತರಖಾಂಡ್ ಶೈಲಿಯ ಎಲ್ಲಾ ಸಾಂಪ್ರದಾಯಿಕ ಆಹಾರದ ವ್ಯವಸ್ಥೆ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ನಾನು ಇತ್ತೀಚೆಗಷ್ಟೇ ಕ್ಯಾನ್ಸರ್ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದೇನೆ. ಡಾಕ್ಟರ್ಸ್ ಮನೆಯಿಂದ ಹೊರಹೋಗದಂತೆ ತಿಳಿಸಿದ್ದಾರೆ. ಇದರಿಂದ ನಾನು ಚಹಾಊಟಕ್ಕೆ ಬರಲಾಗಲಿಲ್ಲ. ಹೀಗಾಗಿ ನೀವು ನಮ್ಮ ಮನೆಗೆ ಭೋಜನ ಕೂಟಕ್ಕೆ ಬನ್ನಿ ಎಂದು ಅನಿಲ್ ಬಲೂನಿ ಪ್ರಿಯಾಕ ಗಾಂಧಿಗೆ ಪತ್ರದ ಮೂಲಕ ಆಹ್ವಾನ ನೀಡಿದ್ದಾರೆ. ಆಗಸ್ಟ್ ಒಂದರ ಒಳಗೆ ಬಂಗಲೆ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಪ್ರಿಯಾಂಕ ಗಾಂಧಿಗೆ ನೋಟಿಸ್ ನೀಡಿತ್ತು. ಈ ಮಧ್ಯೆ ಪ್ರಿಯಾಂಕ ಮನೆ ತೆರವು ಮಾಡಲು ಒಪ್ಪಿಗೆ ನೀಡಿಲ್ಲ ಎಂಬ ಸುಳ್ಳು ಸುದ್ದಿ ಹರಿದಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ಪ್ರಿಯಾಂಕ, ಇದು ಸುಳ್ಳು ಸುದ್ದಿಯಾಗಿದ್ದು, ಜುಲೈ ಅಂತ್ಯದಲ್ಲಿ ಮನೆ ತೆರವು ಮಾಡುವುದಾಗಿ ಸೂಚಿಸಿದ್ದರು. ಅದರಂತೆ ಆ ಮನೆಯಲ್ಲಿ ವಾಸ್ತವ್ಯ ಹೂಡಲಿರುವ ಅನಿಲ್ ಬಲೂನಿ ಜೊತೆ ಏರ್ಪಡಿಸಲು ಬಯಸಿದ್ದರು.


from India & World News in Kannada | VK Polls https://ift.tt/2P42aOZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...