ಆಫಘಾನಿಸ್ತಾನದಲ್ಲಿ‌ ಸಿಖ್ಖರೇ ಉಗ್ರರ ಟಾರ್ಗೆಟ್, ಗುರುದ್ವಾರಗಳ ಮೇಲೆಯೇ ಹೆಚ್ಚು ದಾಳಿ!

ಕಾಬೂಲ್‌: ಅಫಘಾನಿಸ್ತಾನದಲ್ಲಿ ಇಸ್ಲಾಮಿಕ್ ‌ ಉಗ್ರರು ಈ ವರ್ಷ ಸಿಖ್‌ ಸಮುದಾಯ ಮತ್ತು ಶಿಯಾ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಹೆಚ್ಚಿನ ದಾಳಿ ನಡೆಸಿದ್ದಾರೆ ಎಂದು ಅಫಘಾನಿಸ್ತಾನದಲ್ಲಿನ ವಿಶ್ವಸಂಸ್ಥೆಯ ಪ್ರತಿನಿಧಿ ಕಾರ್ಯಾಲಯದ ವರದಿ ತಿಳಿಸಿದೆ. ಉಗ್ರರು 3,458 ನಾಗರಿಕರ ಮೇಲೆ ಕ್ರೌರ್ಯ ಎಸಗಿದ್ದಾರೆ. ಆ ಪೈಕಿ 2,176 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 1,282 ಜನ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. 2020ರ ಮೊದಲಾರ್ಧದಲ್ಲಿ ಸಂಭವಿಸಿರುವ ಸರಕಾರ ವಿರೋಧಿ ಗುಂಪುಗಳು ಹಾಗೂ ಬಂಡುಕೋರರಿಂದ ಹತ್ಯೆಯಲ್ಲಿ 58% ನಾಗರಿಕರು ಬಲಿಯಾಗಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಭಾರಿ ಶಸ್ತ್ರಾಸತ್ರಗಳನ್ನು ಹೊಂದಿದ್ದ ಆತ್ಮಾಹುತಿ ದಾಳಿಕೋರರ ಗುಂಪೊಂದು ರಾಜಧಾನಿ ಕಾಬೂಲ್‌ನ ಶೋರ್‌ ಬಜಾರ್‌ನಲ್ಲಿನ ಸಿಖ್‌ ಗುರುದ್ವಾರದ ಮೇಲೆ ಭಾರಿ ದಾಳಿ ನಡೆಸಿತ್ತು. ಪ್ರಾರ್ಥನೆ ನಿರತರಾಗಿದ್ದ 25 ಮಂದಿ ದಾಳಿಗೆ ಬಲಿಯಾಗಿದ್ದರು. ಜತೆಗೆ ಮಹಿಳೆಯರು ಮತ್ತು ಮಕ್ಕಳು ಸೇರಿ 80 ಮಂದಿ ಗಾಯಗೊಂಡಿದ್ದರು. ಈ ದಾಳಿಯ ಮಾಸ್ಟರ್‌ಮೈಂಡ್‌ ಪಾಕಿಸ್ತಾನ ಪ್ರಜೆ ಹಾಗೂ ಇಸ್ಲಾಮಿಕ್‌ ಸ್ಟೇಟ್‌ ಇರಾಕ್‌ ಆ್ಯಂಡ್‌ ಲೆವಾಂತ್‌- ಖೋರಾಸನ್‌ ಪ್ರಾಂತ್ಯ(ಐಎಸ್‌ಐಎಲ್‌-ಕೆ) ಉಗ್ರ ಸಂಘಟನೆ ಮುಖ್ಯಸ್ಥ ಅಸ್ಲಾಂ ಫಾರೂಕಿ ಎಂದು ತಿಳಿದುಬಂದಿತ್ತು. ಇಂತಹ ಹತ್ತು ಹಲವು ದಾಳಿಗಳು ಅಫ್ಘಾನಿಸ್ತಾನದಲ್ಲಿ ನಡೆಯುತ್ತಲೆ ಇರುತ್ತದೆ. ಅಲ್ಲಿನ ಜನ ದಿನ ನಿತ್ಯ ಬಾಂಬ್‌ ಶಬ್ಧಗಳಿಂದಲೇ ಏಳುವಂತೆ ಆಗಿದೆ.


from India & World News in Kannada | VK Polls https://ift.tt/3faM54C

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...