ಜೈಪುರ್: ರಾಜಸ್ಥಾನ ಬಂಡಾಯದ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಬೇಕಿದ್ದು, ಇದಕ್ಕೂ ಮೊದಲೇ ಈ ಅರ್ಜಿಯನ್ನು ಹಿಂಪಡೆಯಲು ರಾಜಸ್ಥಾನ ಕಾಂಗ್ರೆಸ್‌ನ ಒಂದು ಗುಂಪು ಒತ್ತಾಯ ಮಾಡತೊಡಗಿದೆ. ಸುಪ್ರೀಂಕೋರ್ಟ್‌ನಲ್ಲಿರುವ ಅರ್ಜಿಯನ್ನು ಹಿಂಪಡೆದು ಬಂಡಾಯವನ್ನು ಆಂತರಿಕವಾಗಿಯೇ ಶಮನ ಮಾಡಲು ಪ್ರಯತ್ನಿಸಬೇಕು ಎಂದು ಕಾಂಗ್ರೆಸ್‌ನ ಒಂದು ಬಣ ಆಗ್ರಹಿಸತೊಡಗಿದೆ. ಈಗಾಗಲೇ ಹೈಕೋರ್ಟ್‌ನಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗಿದ್ದು, ಇದೀಗ ಸುಪ್ರೀಂಕೋರ್ಟ್‌ನಲ್ಲೂ ಹಿನ್ನಡೆಯಾದರೆ ಮುಜುಗರ ಅನುಭವಿಸಬೇಕಾಗುತ್ತದೆ ಎಂದು ಕಾಂಗ್ರೆಸ್‌ನ ಕೆಲವು ನಾಯಕರು ಎಚ್ಚರಿಸಿದ್ದಾರೆ. ಈ ಕಾರಣಕ್ಕೆ ಸುಪ್ರೀಂಕೋರ್ಟ್‌ನಲ್ಲಿರುವ ಅರ್ಜಿಯನ್ಮು ಹಿಂಪಡೆದು ಪೈಲಟ್ ಬಣದ ಬಂಡಾಯವನ್ನು ಆಂತರಿಕ ರಾಜಕೀಯ ನಿರ್ಣಯಗಳ ಮೂಲಕ ಇತ್ಯರ್ಥಗೊಳಿಸುವುದೇ ಉತ್ತಮ ಎಂದು ಹಲವು ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಪೈಲಟ್ ಬಣವನ್ನು ಮಣಿಸುವುದನ್ನೇ ಗುರಿ ಮಾಡಿಕೊಂಡಿರುವ ಮತ್ತವರ ಬೆಂಬಲಿಗರು, ಅರ್ಜಿಯನ್ನು ಹಿಂಪಡೆಯದೇ ಬಂಡಾಯಗಾರರ ವಿರುದ್ಧ ಕಾನೂನು ಹೋರಾಟ ಮತ್ತು ರಾಜಕೀಯ ಹೋರಾಟವನ್ನು ಮುಂದುವರೆಸುವ ಇರಾದೆಯಲ್ಲಿದೆ. ವಿಧಾನಸಭೆ ವಿಶೇಷ ಅಧಿವೇಶನ ಕರೆದು ಬಹುಮತ ಸಾಬೀತಿಗೆ ಪಟ್ಟು ಹಿಡಿದಿರುವ ಗೆಹ್ಲೋಟ್ ಬಣ, ಸುಪ್ರೀಂಕೋರ್ಟ್‌ನಲ್ಲಿ ಪೈಲಟ್ ಬಣವನ್ನು ಮಣಿಸಲು ಸಜ್ಜಾಗಿದೆ. ಆದರೆ ನ್ಯಾಯಾಲಯದಲ್ಲಿ ಪಕ್ಷಕ್ಕೆ ಹಿನ್ನಡೆಯಾದರೆ ಸಾವರ್ಜನಿಕವಾಗಿ ಮುಜುಗರ ಅನುಭವಿಸಬೇಕಾಗುತ್ತದೆ ಎಂಬುದು ಮತ್ತೊಂದು ಬಣದ ವಾದವಾಗಿದ್ದು, ಪೈಲಟ್ ಬಣವನ್ನು ಮಣಿಸಲು ದಾರಿ ಕಂಡುಹಿಡಯುವಲ್ಲಿ ಇಬ್ಭಾಗವಾದಂತಾಗಿದೆ.
from India & World News in Kannada | VK Polls https://ift.tt/2P02ZbK