ಬೀಜಿಂಗ್: ಭಾರತದೊಂದಿಗೆ ನೆರೆ ರಾಷ್ಟ್ರಗಳ ಸಂಬಂಧದಲ್ಲಿ ತುಸು ಬಿರುಕು ಮೂಡಿರುವುದನ್ನೇ ತನ್ನ ಲಾಭಕ್ಕಾಗಿ ಬಳಸಿಕೊಳ್ಳಲು ಹವಣಿಸುತ್ತಿರುವ ಚೀನಾ, ಇದೀಗ ಕೊರೊನಾ ವೈರಸ್ ಹಾವಳಿಯ ಹೆಸರಲ್ಲಿ ಈ ರಾಷ್ಟ್ರಗಳಲ್ಲಿ ತನ್ನ ಪ್ರಭಾವ ವೃದ್ಧಿಸಿಕೊಳ್ಳಲು ಮುಂದಾಗಿದೆ. ಅದರಂತೆ ಮಾರಕ ಕೊರೊನಾ ವೈರಸ್ ಹಾವಳಿಯನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಚೀನಾ, ನೆರೆಯ , ಹಾಗೂ ಅಫ್ಘಾನಿಸ್ತಾನ್ ರಾಷ್ಟ್ರಗಳೊಂದಿಗೆ ಮೊದಲ ವರ್ಚುವಲ್ ಸಭೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಕೊರೊನಾ ವೈರಸ್ ಹಾವಳಿ ವಿರುದ್ಧ ಜಂಟಿ ಹೋರಾಟಕ್ಕೆ ಸಜ್ಜಾಗಬೇಕು ಎಂದು ಚೀನಾ ಕರೆ ಕೊಟ್ಟಿದ್ದು, ಚೀನಾದ ಈ ಆಹ್ವಾನವನ್ನು ನೇಪಾಳ, ಪಾಕ್ ಹಾಗೂ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಹೇಳಲಾಗಿದೆ. ಪ್ರಮುಖವಾಗಿ ವೈರಾಣು ಹಾವಳಿಯನ್ನು ತಡೆಗಡ್ಡಲು ನಾಲ್ಕು ಅಂಶದ ಯೋಜನೆಯನ್ನು ಈ ರಾಷ್ಟ್ರಗಳಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ಜಂಟಿ ಹೋರಾಟದ ಪ್ರಯತ್ನದಿಂದ ಕೊರೊನಾ ವೈರಸ್ ನಿರ್ಮೂಲನೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಘೋಷಿಸಲಾಗಿದೆ. ಸಭೆಯಲ್ಲಿ ಭಾಗವಹಿಸಿದ ನಾಲ್ಕು ರಾಷ್ಟ್ರಗಳ ಪ್ರತಿನಿಧಿಗಳು:
- ವಾಂಗ್ ವೈ-ಚೀನಾ ವಿದೇಶಾಂಗ ಸಚಿವ.
- ಮೊಹ್ಮದ್ ಹನೀಫ್ ಅತ್ಮಾರ್- ಅಫ್ಘಾನಿಸ್ತಾನ ವಿದೇಶಾಂಗ ಸಚಿವ.
- ಪ್ರದೀಪ್ ಕುಮಾರ್ ಗ್ಯಾವಲಿ- ನೇಪಾಳ ವಿದೇಶಾಂಗ ಸಚಿವ.
- ಮಕ್ತೂಮ್ ಖುಸ್ರೋ ಭಕ್ತಿಯಾರ್- ಪಾಕಿಸ್ತಾನ ಆರ್ಥಿಕ ವ್ಯವಹಾರಗಳ ಸಚಿವ.
from India & World News in Kannada | VK Polls https://ift.tt/3f2I8iF