ಹೊಸದಿಲ್ಲಿ: ಆಫ್ ಸ್ಪಿನ್ನರ್ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಎಂಬ ಖ್ಯಾತಿ ಗಳಿಸಿದ್ದರು. ಕಳಪೆ ಫಾರ್ಮ್ನಿಂದ ಹೆಣಗಾಡುತ್ತಿದ್ದ ಹರಭಜನ್ ಸಿಂಗ್, ಟೆಸ್ಟ್ ತಂಡದಲ್ಲಿಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಇವರ ಸ್ಥಾನಕ್ಕೆ ಮೊದಲನೇ ಆಯ್ಕೆ ಆರ್. ಅಶ್ವಿನ್ ಅವರನ್ನು ಪರಿಗಣಿಸಲಾಗಿತ್ತು. 2011ರಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಅಶ್ವಿನ್, ನಿಯಮಿತವಾಗಿ ಟೆಸ್ಟ್ ತಂಡದಲ್ಲಿ ಆಡಿರಲಿಲ್ಲ. ಮತ್ತೊಂದೆಡೆ ಇದ್ದ ಹರಭಜನ್ ಸಿಂಗ್ 2016ರ ಬಳಿಕ ಯಾವುದೇ ಸ್ವರೂಪದ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. 39ರ ಪ್ರಾಯದ ಸ್ಪಿನ್ನರ್ 103 ಟೆಸ್ಟ್ ಪಂದ್ಯಗಳಾಡಿದ್ದಾರೆ. 2011ರಲ್ಲಿ ಚೊಚ್ಚಲ ಪಂದ್ಯವಾಡಿದ್ದ ಅಶ್ವಿನ್ 71 ಟೆಸ್ಟ್ ಪಂದ್ಯಗಳಾಡಿದ್ದಾರೆ. ತಂಡದಲ್ಲಿ ಹರಭಜನ್ ಸಿಂಗ್ ಅವರ ಸ್ಥಾನಕ್ಕೆ ಆಯ್ಕೆಯಾದ ಬಗೆಯನ್ನು ಇತ್ತೀಚಿನ ಸಂದರ್ಶನದಲ್ಲಿ ಆರ್.ಅಶ್ವಿನ್ ಬಹಿರಂಗಪಡಿಸಿದ್ದಾರೆ. ಸ್ಪಿನ್ ದಿಗ್ಗಜ ಸ್ಥಾನ ತುಂಬಲು ಯಾವುದೇ ಒತ್ತಡಕ್ಕೆ ಒಳಗಾಗಲಿಲ್ಲ ಎಂದು ಚೆನ್ನೈ ಮೂಲದ ಸ್ಪಿನ್ನರ್ ತಿಳಿಸಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಬೆಂಬಲಕ್ಕೆ ನಿಂತಿದ್ದರು ಎಂಬ ವಿಷಯವನ್ನು ಅಶ್ವಿನ್ ಬಹಿರಂಗಪಡಿಸಿದರು. "ನಿಮ್ಮ ದೇಶಕ್ಕಾಗಿ ಆಡುವುದು ಯಾವಾಗಲೂ ದೊಡ್ಡದಾಗಿದೆ. ಕನಸು ನನಸಾದ ಪ್ರತಿಯೊಬ್ಬ ಕ್ರಿಕೆಟಿಗನಿಗೂ ಇದು ನಿಜವಾದ ಹೆಗ್ಗುರುತು ಹಾಗೂ ಗೌರವ. ಇದು ಆರಂಭದಲ್ಲಿ ನನಗೆ ಸಹಾಯ ಮಾಡಿತು ಮತ್ತು ನಾನು ಪಾತ್ರದಲ್ಲಿ ಚೆನ್ನಾಗಿ ನೆಲೆಸಿದೆ. ನಾನು ಆಗಲೇ ದೇಶೀಯ ಕ್ರಿಕೆಟ್ನಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ ”ಎಂದು ಅವರು ಹಿಂದೂಸ್ತಾನ್ ಟೈಮ್ಸ್ಗೆ ತಿಳಿಸಿದರು. "ನನ್ನ ಮೇಲೆ ಯಾವುದೇ ಒತ್ತಡವಿರಲಿಲ್ಲ. ಭಾರತ ತಂಡಕ್ಕೆ ಆಡಲು ಅವಕಾಶ ಸಿಕ್ಕಾಗ ತುಂಬಾ ಆಹ್ಲಾದಿಸಿದ್ದೇನೆ. ಬೇರೊಬ್ಬ ಆಟಗಾರನ ಸ್ಥಾನ ತುಂಬುತ್ತಿದ್ದೇನೆಂಬ ಭಾವನೆ ಎಂದೂ ಮೂಡಿರಲಿಲ್ಲ. ಆ ವೇಳೆ ನನ್ನದೆ ಆದ ವರ್ಚಸ್ಸು ತಂಡದಲ್ಲಿ ಮೂಡಿಸಿದ್ದೆ. ನನ್ನ ಧೋನಿ ಇಟ್ಟಿದ್ದ ಬೆಂಬಲ ನನ್ನಲ್ಲಿ ಹೆಚ್ಚಿನ ವಿಶ್ವಾಸವನ್ನು ಮೂಡಿಸಿತು," ಎಂದು ಅಶ್ವಿನ್ ಹೇಳಿದರು. ಇದರ ನಡುವೆ ಹರಭಜನ್ ಸಿಂಗ್ ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಅಲಂಕೃತ ಆಫ್ ಸ್ಪಿನ್ನರ್ ಆಗಿದ್ದಾರೆ. ದೀರ್ಘಾವಧಿ ಕ್ರಿಕೆಟ್ನಲ್ಲಿ ಅವರು 417 ವಿಕೆಟ್ಗಳನ್ನು ಪಡೆದಿದ್ದು, ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಪಡೆದ ಆಫ್ ಸ್ಪಿನ್ನರ್ ಎಂಬ ಖ್ಯಾತಿ ಅವರ ಹೆಸರಿನಲ್ಲಿದೆ. ಸದ್ಯ 365 ವಿಕೆಟ್ಗಳನ್ನು ಕಬಳಿಸಿರುವ ಅಶ್ವಿನ್ ಕೂಡ ಭಜ್ಜಿ ಸನಿಹದಲ್ಲಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3g55XaU