"ಬಕ್ರೀದ್‌ಗೆ ಮಸೀದಿ ತೆರೆಯಿರಿ, ಕೊರೊನಾ ಅಂತ್ಯಕ್ಕೆ ದೇವರ ಪ್ರಾರ್ಥನೆಯಿಂದ ಸಾಧ್ಯ": ಎಸ್‌ಪಿ ಸಂಸದ

ಲಖನೌ: ಕೊರೊನಾ ನಿರ್ಮೂಲನೆಗೆ ದೇವರ ಪ್ರಾರ್ಥನೆಯಿಂದ ಸಾಧ್ಯ. ಹೀಗಾಗಿ ಹಬ್ಬದಂದು ಮಸೀದಿ ಹಾಗೂ ಈದ್ಗಾ ಮೈದಾನಗಳನ್ನ ತೆರೆದು ಪ್ರಾರ್ಥನೆಗೆ ಅವಕಾಶ ಕೊಡಬೇಕು ಎಂದು ಸಮಾಜವಾದಿ ಪಕ್ಷದ ಸಂಸದ ಶಫೀಕುರ್‌ ರಹಮಾನ್‌ ಬರ್ಕ್‌ ಆಗ್ರಹಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, ಈವರೆಗೆ ಕೊರೊನಾಗೆ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇದರರ್ಥ ಕೊರೊನಾ ಒಂದು ರೋಗವಲ್ಲ. ಅದು ಮನುಷ್ಯರು ಮಾಡಿದ ಪಾಪಗಳಿಗೆ ದೇವರು ಕೊಟ್ಟ ಶಿಕ್ಷೆ. ಹೀಗಾಗಿ ಬಕ್ರೀದ್‌ನಂದು ದೇವರ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು. ದೇವರು ನಮ್ಮ ಕಷ್ಟವನ್ನ ಆಲಿಸಬಹುದು. ಕೊರೊನಾಗೆ ಅಂತ್ಯ ಹಾಡಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ. ಅಲ್ಲದೆ ಕಳೆದ ವರ್ಷದಂತೆ ಈ ಬಾರಿಯು ಹಬ್ಬದ ಸಾಮಾನುಗಳನ್ನ ಖರೀದಿಸಲು ಅಂಗಡಿ ಮುಂಗಟ್ಟುಗಳನ್ನ ತೆರೆಯಲು ಅವಕಾಶ ನೀಡಬೇಕು ಅಂತಲೂ ಸಂಸದರು ಸರಕಾರವನ್ನು ಒತ್ತಾಯಿಸಿದ್ದಾರೆ. ಆಗಸ್ಟ್‌ 1 ರಂದು ದೇಶದಾದ್ಯಂತ ತ್ಯಾಗದ ಸಂಕೇತವಾಗಿರುವ ಬಕ್ರೀದ್‌ ಹಬ್ಬವನ್ನ ಆಚರಿಸಲಾಗುತ್ತದೆ. ಇತ್ತೀಚೆಗೆ ರಂಜಾನ್‌ ಹಬ್ಬಕ್ಕೆ ಕೇಂದ್ರ ಸರಕಾರ ಕಟ್ಟುನಿಟ್ಟಿನ ನಿಯಮಗಳ ಸುತ್ತೋಲೆ ಹೊರಡಿಸಿತ್ತು. ಕೇವಲ ಐದು ಮಂದಿಗೆ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ ನೀಡಿತ್ತು. ಬಕ್ರೀದ್‌ ಹಬ್ಬದ ಮಾರ್ಗದರ್ಶನ ಬರಬೇಕಿದೆ.


from India & World News in Kannada | VK Polls https://ift.tt/2CEIoHc

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...