ಇಸ್ಲಾಮಾಬಾದ್: ಭಾರತದಲ್ಲಿ ಟಿಕ್‌ಟ್ಯಾಕ್ ಬ್ಯಾನ್ ಆಗಿ ಒಂದು ತಿಂಗಳು ಆಗುತ್ತಿರೋವಾಗಲೇ ಇದೀಗ ಕೂಡ ಭಾರತದ ಹಾದಿಯನ್ನೇ ಅನುಸರಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇದರ ಭಾಗವಾಗಿ ಟಿಕ್‌ಟಾಕ್‌ಗೆ ಪಾಕಿಸ್ತಾನ ಖಡಕ್ ವಾರ್ನ್ ಕೂಡ ಕೊಟ್ಟಿದೆ. ಇತ್ತೀಚೆಗೆ ಸಿಂಗಾಪೂರ್ ಮೂಲದ ಆಪ್‌ನ್ನು ಬ್ಯಾನ್ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ಟಿಕ್‌ಟಾಕ್ ಸಂಸ್ಥೆಗೂ ಎಚ್ಚರಿಕೆ ಕೊಟ್ಟಿದ್ದು, ಅಶ್ಲೀಲ ಮತ್ತು ಅನೈತಿಕತೆಯನ್ನು ಪ್ರತಿಬಿಂಬಿಸುವ ವಿಡಿಯೋಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಈ ನಿರ್ಧಾರಕ್ಕೆ ಬರಲಾಗಿದೆ. ಈ ಸಂಬಂಧ ಇದಕ್ಕೂ ಮೊದಲು ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಟಿಕ್‌ಟಾಕ್‌ಗೆ ಪ್ರಶ್ನೆ ಕೇಳಿ ನೋಟಿಸ್ ನೀಡಿತ್ತು. ಆದರೆ ಇದಕ್ಕೆ ಉತ್ತರ ಸಮರ್ಪಕವಾಗಿಲ್ಲದ ಕಾರಣ ಮತ್ತೊಮ್ಮೆ ಕೊನೆಯ ಎಚ್ಚರಿಕೆಯನ್ನು ನೀಡಲಾಗಿದೆ. ಭಾರತ ಭದ್ರತೆಯ ಕಾರಣಗಳನ್ನು ನೀಡಿ ಟಿಕ್‌ಟಾಕ್ ಸೇರಿದಂತೆ ಒಟ್ಟು 59 ಆಪ್‌ಗಳನ್ನು ನಿಷೇಧ ಮಾಡಿತ್ತು. ಆದ್ರೆ ಪಾಕಿಸ್ತಾನಕ್ಕೆ ಚೀನಾ ಮಿತ್ರರಾಷ್ಟ್ರ ಆಗಿರೋದ್ರಿಂದ ಭದ್ರತೆಯ ನೆಪದಲ್ಲಿ ಚೀನಾ ಮೂಲದ ಆಪ್‌ಗಳನ್ನು ನಿಷೇಧ ಮಾಡುವಂತಿಲ್ಲ. ಅಲ್ಲದೇ ಪಾಕಿಸ್ತಾನದ ರಕ್ಷಣೆ ಮತ್ತು ಮೂಲ ಸೌಕರ್ಯ ವಿಚಾರದಲ್ಲಿ ಈಗಾಗಲೇ ಚೀನಾ ಲಕ್ಷಾಂತರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಚೀನಾ ಮೂಲದ ಮತ್ತು ಸಿಂಗಾಪೂರ್ ಮೂಲದ ಬಿಗೋ ಲೈವ್ ಆಪ್‌ಗಳನ್ನು ಪಾಕಿಸ್ತಾನದಲ್ಲಿ ಯುವಜನತೆ ಅತೀ ಹೆಚ್ಚಾಗಿ ಉಪಯೋಗಿಸುತ್ತಿದ್ದರು.
from India & World News in Kannada | VK Polls https://ift.tt/3hsSF8r