ಅಂಗಾರಕನನ್ನೂ ಬಿಡದ ಅಮೆರಿಕ-ಚೀನಾ ಸ್ಪರ್ಧೆ..! ಮಂಗಳಕ್ಕೆ ಡ್ರ್ಯಾಗನ್‌ ರಾಷ್ಟ್ರದಿಂದ ರೋವರ್‌ ಉಡಾವಣೆ

ವೆನ್‌ಚಾಂಗ್‌ (): ಮತ್ತು ಚೀನಾ ನಡುವಿನ ಶೀತಲ ಸಮರ ಈಗ ಮಂಗಳನ ಅಂಗಳಕ್ಕೂ ಕಾಲಿಟ್ಟಿದೆ. ಹೌದು, ತಮ್ಮ ನಡುವಿನ ಸ್ಪರ್ಧೆಯನ್ನು ಉಭಯ ದೇಶಗಳು ಬಾಹ್ಯಾಕಾಶಕ್ಕೂ ವಿಸ್ತರಿಸಿದ್ದು, ಪರಿಣಾಮವಾಗಿ ಚೀನಾ ಗುರುವಾರ ಮಂಗಳಕ್ಕೆ ರೋವರ್‌ನ್ನು ಉಡಾವಣೆ ಮಾಡಿದೆ. ಎರಡು ದೇಶಗಳು ಭೂಮಿ ಮತ್ತು ಮಂಗಳನ ನಡುವಿನ ಅಂತರ ಕಡಿಮೆಯಾಗುವ ಸಮಯ ಸದುಪಯೋಗಪಡಿಸಿಕೊಳ್ಳಲು ಕಾಯುತ್ತಿದ್ದು, ಅಮೆರಿಕ ಕೂಡ ಮಂಗಳಕ್ಕೆ ಜುಲೈ 30ರಂದು ಬಾಹ್ಯಾಕಾಶ ನೌಕೆಯನ್ನು ಕಳಿಸಲಿದೆ. ಈ ಕಾರಣಕ್ಕಾಗಿ ಚೀನಾ ವಾರದ ಮುಂಚಿತವಾಗಿಯೇ ರೋವರ್‌ ಉಡಾವಣೆ ಮಾಡಿದೆ ಎನ್ನಲಾಗುತ್ತಿದೆ. ಚೀನಾದ ಮಂಗಳಯಾನಕ್ಕೆ ಟಿಯಾನ್‌ವೆನ್‌-1 ಎಂದು ಹೆಸರಿಡಲಾಗಿದೆ. ಚೀನಾದ ಹೈನಾನ್‌ನಲ್ಲಿರುವ ಉಡಾವಣಾ ಕೇಂದ್ರದಿಂದ ರೋವರ್‌ನ್ನು ಹೊತ್ತ ಚೀನಾದ ಅತಿದೊಡ್ಡ ಬಾಹ್ಯಾಕಾಶ ರಾಕೆಟ್‌ ಲಾಂಗ್‌ ಮಾರ್ಚ್‌ 5 ನಭಕ್ಕೆ ಜಿಗಿಯಿತು. ಸೈಟ್ ಕಮಾಂಡರ್ ಜಾಂಗ್ ಕ್ಸುಯೆಯು ಮಿಷನ್‌ ಯಶಸ್ವಿಯಾಗಿದೆ ಎಂದು ಘೋಷಿಸಿದ್ದಾರೆ. ಐದು ಟನ್‌ ತೂಕ ಹೊಂದಿರುವ ಟಿಯಾನ್‌ವೆನ್‌-1 ಫೆಬ್ರವರಿ 2021ಕ್ಕೆ ಮಂಗಳನ ಅಂಗಳದಲ್ಲಿ ಇಳಿಯಲಿದೆ ಎಂದು ಅಂದಾಜು ಮಾಡಲಾಗಿದೆ. 7 ತಿಂಗಳ ಪ್ರಯಾಣದಲ್ಲಿ 55 ಮಿಲಿಯನ್‌ ಕಿಲೋ ಮೀಟರ್‌ ಅಂತರವನ್ನು ರೋವರ್‌ ಕ್ರಮಿಸಲಿದೆ. ಮಾರ್ಸ್‌ ಆರ್ಬಿಟರ್‌, ಲ್ಯಾಂಡರ್‌ ಮತ್ತು ರೋವರ್‌ ಅನ್ನು ರಾಕೆಟ್‌ ಒಳಗೊಂಡಿದ್ದು, ಅಲ್ಲಿನ ಮಣ್ಣನ್ನು ಅಧ್ಯಯನ ನಡೆಸುತ್ತವೆ ಎಂದು ಹೇಳಲಾಗಿದೆ. "ಚೀನಾಕ್ಕೆ ಇದು ಮೊದಲ ಪ್ರಯತ್ನವಾಗಿದೆ. ಅಮೆರಿಕ ಈಗಾಗಲೇ ಮಾಡಿದ್ದಕ್ಕಿಂತ ಹೆಚ್ಚಿನದನ್ನು ಈ ಮಿಷನ್‌ ಮಾಡಬಹುದೆಂದು ನಾನು ನಿರೀಕ್ಷಿಸುವುದಿಲ್ಲ" ಎಂದು ಹಾರ್ವರ್ಡ್-ಸ್ಮಿತ್ಸೋನಿಯನ್ ಸೆಂಟರ್ ಫಾರ್ ಆಸ್ಟ್ರೋಫಿಸಿಕ್ಸ್‌ನ ಖಗೋಳ ಶಾಸ್ತ್ರಜ್ಞ ಜೊನಾಥನ್ ಮೆಕ್ಡೊವೆಲ್ ಹೇಳಿದ್ದಾರೆ. ಮಂಗಳನ ಅಧ್ಯಯನಕ್ಕಾಗಿಯೇ ಸೋಮವಾರ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಕೂಡ ರೋವರ್‌ ಉಡಾವಣೆ ಮಾಡಿದ್ದು, ಅಂಗಾರಕನ ಅಧ್ಯಯನಕ್ಕೆ ಸ್ಪರ್ಧೆ ಹೆಚ್ಚಾಗಿದೆ. ಆದರೆ, ಚೀನಾ ಹಾಗೂ ಅಮೆರಿಕ ನಡುವೆ ಸ್ಪರ್ಧೆ ಇದ್ದು, ಬಾಹ್ಯಾಕಾಶದಲ್ಲಿ ವಾಷಿಂಗ್ಟನ್‌ ಪ್ರಾಬಲ್ಯವನ್ನು ಹಿಂದಿಕ್ಕುವ ಪ್ರಯತ್ನವನ್ನು ಬೀಜಿಂಗ್‌ ಮಾಡುತ್ತಿದೆ.


from India & World News in Kannada | VK Polls https://ift.tt/32JFvQc

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...