21ನೇ ಕಾರ್ಗಿಲ್ ವಿಜಯ್ ದಿವಸ್: ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ರಾಜನಾಥ್ ಪುಷ್ಪ ನಮನ

ನವದೆಹಲಿ: ಇಂದು(ಭಾನುವಾರ) ದೇಶದಾದ್ಯಂತ 21ನೇ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದ್ದು, ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಭಾರತೀಯ ಯೋಧರನ್ನು ಸ್ಮರಿಸಲಾಗುತ್ತಿದೆ. ಅದರಂತೆ ನವದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ರಕ್ಷಣಾ ಸಚಿವ , ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮೂರೂ ಸೇನಾಪಡೆಗಳ ಮುಖ್ಯಸ್ಥರೊಂದಿಗೆ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಕಾರ್ಗಿಲ್ ವೀರರನ್ನು ಸ್ಮರಿಸಿದ ರಾಜನಾಥ್ ಸಿಂಗ್, ದೇಶ ರಕ್ಷಣೆಗಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಹುತಾತ್ಮರನ್ನು ದೇಶ ಎಂದಿಗೂ ಮರೆಯವುದಿಲ್ಲ ಎಂದು ಹೇಳಿದರು. ಕಾರ್ಗಿಲ್ ವಿಜಯ ದೇಶದ ಸೇನಾ ಶಕ್ತಿಯ ಪ್ರತೀಕ ಎಂದ ರಾಜನಾಥ್ ಸಿಂಗ್, ನಮ್ಮ ನೆಲದ ಮೇಲೆ ವಕ್ರದೃಷ್ಟಿ ಬೀರುವ ಯಾರೇ ಆದರೂ ಅವರಿಗೆ ಇದೇ ಗತಿ ಎಂದು ಎಚ್ಚರಿಸಿದರು. ಭಾರತದ ಗಡಿಗಳು ಸುರಕ್ಷಿತವಾಗಿದ್ದು, ದೇಶ ರಕ್ಷಣೆಗೆ ನಮ್ಮ ಸೇನಾ ಪಡೆಗಳು ಸದಾ ಸರ್ವ ಸನ್ನದ್ಧವಾಗಿವೆ ಎಂದು ರಾಜನಾಥ್ ಸಿಂಗ್ ಈ ವೇಳೆ ಭರವಸೆ ನೀಡಿದರು.


from India & World News in Kannada | VK Polls https://ift.tt/32RvIaV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...