ಬೆಂಗಳೂರು: ಜುಲೈ 26 ಕಾರ್ಗಿಲ್ ವಿಜಯ ದಿವಸವಾಗಿದೆ. ತಮ್ಮ ಸೈನಿಕರು ದೇಶಕ್ಕಾಗಿ ಹುತಾತ್ಮರಾದ ದಿನವಿಂದು. ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೇಶಕ್ಕಾಗಿ ಪ್ರಾಣತೆತ್ತ ನಮ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು “ಈ ಕಾರ್ಗಿಲ್ ವಿಜಯ ದಿವಸದಂದು ದೇಶಕ್ಕಾಗಿ ಹುತಾತ್ಮರಾದ ಎಲ್ಲ ಭಾರತೀಯ ಸೈನಿಕರಿಗೂ ನಮ್ಮ ಗೌರವ ನಮನಗಳನ್ನು ಸಲ್ಲಿಸೋಣ. ಭಾರತದ ಏಕತೆ, ಸಾರ್ವಭೌಮತೆಗಳನ್ನು ಸಂಭ್ರಮಿಸುವ ಜೊತೆಗೆ ಭಾರತೀಯ ಸೇನಾಪಡೆಗಳ ವೀರಯೋಧರಿಗೆ ಮತ್ತು ಅವರ ಕುಟುಂಬದವರಿಗೆ ಬೆಂಬಲ ಹಾಗು ಹೆಮ್ಮೆಯ ಅಭಿನಂದನೆಗಳನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ” ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಕಾರ್ಗಿಲ್ ವಿಜಯ್ ದಿವಸ ಅಂಗವಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಬಿಎಸ್ ವೈ ಪಾಲ್ಗೊಂಡಿದ್ದರು. ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದರು.
from India & World News in Kannada | VK Polls https://ift.tt/3jGoo7R