ಮೈ ಲಾರ್ಡ್‌... 10 ತಿಂಗಳಿನಿಂದ ಸಂಬಳವೇ ಆಗಿಲ್ಲ! ರಾಜ್ಯದ 250 ಸರಕಾರಿ ವಕೀಲರಿಗೆ 9 ಕೋಟಿ ಬಾಕಿ!

ಎಸ್‌.ಜಿ. ಕುರ್ಯ ಉಡುಪಿ ಬೆಂಗಳೂರು: ರಾಜ್ಯದ 250ಕ್ಕೂ ಅಧಿಕ ಸರಕಾರಿ ವಕೀಲರು ಕಳೆದ 10 ತಿಂಗಳಿನಿಂದ ವೇತನ ಬಾರದಿದ್ದರೂ ಅಸಹಾಯಕತೆ ಮಧ್ಯೆ ವಾದಿಸಲಾಗದೆ ಗಪ್‌ಚುಪ್‌ ಆಗಿದ್ದಾರೆ. ಅನ್ಯಾಯಕ್ಕೊಳಗಾದವರು, ಶೋಷಿತರು, ವಂಚಿತರು, ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಪರ ವಾದಿಸುವ ಸರಕಾರಿ ವಕೀಲರಿಗೆ ವೇತನ ಸಿಗದಿರಲು ನಾನಾ ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿದೆ. ಸರಕಾರಿ ವಕೀಲರು ಈ ಕೋವಿಡ್‌-19 ಸಂಕಷ್ಟ ಕಾಲದಲ್ಲಿ ಉದ್ಯೋಗಕ್ಕೆಲ್ಲಿ ಸಂಚಕಾರ ಬರುತ್ತದೋ ಎನ್ನುವ ಆತಂಕದಿಂದ ಸುಮ್ಮನಿದ್ದಾರೆ. ಮನೆ/ವಾಹನ ಸಾಲ, ಮಕ್ಕಳ ಶಿಕ್ಷಣ, ಸಂಸಾರ ನಿರ್ವಹಣೆಗೆ ದುಡ್ಡಿಲ್ಲದೆ ಪರದಾಡುತ್ತಿದ್ದಾರೆ. 2019ರ ಸೆಪ್ಟೆಂಬರ್‌ನಿಂದ ವಕೀಲರ ವೇತನ 9 ಕೋಟಿ ರೂ. ಬಾಕಿಯಾಗಿದ್ದು, 10 ಜಿಲ್ಲೆಗಳಿಂದಷ್ಟೇ ವೇತನ ಬಟವಾಡೆ ನಿಟ್ಟಿನಲ್ಲಿ ದಾಖಲೆಗಳನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ. ಇನ್ನೂ 20 ಜಿಲ್ಲೆಗಳಿಂದ ದಾಖಲೆಗಳು ಬಂದಿಲ್ಲ. ಮೂರು ವರ್ಷ ಅವಧಿ: ಸರಕಾರದ ಪರವಾಗಿ, ಸರಕಾರದ ಹಿತಾಸಕ್ತಿ ಕಾಪಾಡಲು 3 ವರ್ಷಗಳ ಅವಧಿಗೆ ಸರಕಾರಿ ವಕೀಲರನ್ನು ನೇಮಿಸಲಾಗುತ್ತಿದೆ. ಸರಕಾರ ಬದಲಾದರೆ, ಮುಂದಿನ ಆದೇಶದ ತನಕ ಎರಡು ಅವಧಿಗೆ ನೇಮಕ ಅವಕಾಶವಿದೆ. ಖಾಸಗಿ ವಕೀಲಿಯನ್ನು ಸರಕಾರದ ವಿರುದ್ಧ ಮಾಡುವಂತಿಲ್ಲ. ಜಿಲ್ಲಾ ಸರಕಾರಿ ವಕೀಲರು(30): 40 ಸಾವಿರ ರೂ. ಅಪರ ಜಿಲ್ಲಾಸರಕಾರಿ ವಕೀಲರು(220): 35 ಸಾವಿರ ರೂ. ಉಡುಪಿ ಜಿಲ್ಲೆಯಲ್ಲಿ 4 ಸರಕಾರಿ ವಕೀಲರಿದ್ದು, ಸರಕಾರದ ಪರ ವಕಾಲತ್ತಿನ ಒತ್ತಡದ ನಡುವೆ ಖಾಸಗಿ ವಕೀಲಿ ವಿರಳವಾಗಿದೆ. ಕೋವಿಡ್‌-19 ಸಂಕಷ್ಟದ ನಡುವೆ ಸರಕಾರಿ ವಕೀಲರಿಗೆ ಕೂಡಲೇ ವೇತನ ಬಿಡುಗಡೆ ಮಾಡಬೇಕು. -ಮೊಹಮ್ಮದ್‌ ಸುಹಾನ್‌, ಅಪರ ಜಿಲ್ಲಾಸರಕಾರಿ ವಕೀಲರು, ಉಡುಪಿ ತಾಂತ್ರಿಕ ಕಾರಣಗಳಿಗಾಗಿ ಸರಕಾರಿ ವಕೀಲರಿಗೆ ವೇತನ ಪಾವತಿಯಾಗಿಲ್ಲ. ಜಿಲ್ಲಾಧಿಕಾರಿಗಳಿಂದ ದಾಖಲೆ ಸಹಿತ ಪ್ರಸ್ತಾವನೆ ಹಣಕಾಸು ಇಲಾಖೆಗೆ ಸಲ್ಲಿಕೆಯಾದ ಕೂಡಲೇ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. -ಜೆ.ಸಿ. ಮಾಧುಸ್ವಾಮಿ, ಕಾನೂನು ಸಚಿವರು, ಕರ್ನಾಟಕ ಸರಕಾರ


from India & World News in Kannada | VK Polls https://ift.tt/2EdDSQp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...