ವೆಲ್ಲಿಂಗ್ಟನ್: ತಮ್ಮ ಗಟ್ಟಿ ನಿರ್ಧಾರಗಳಿಂದಲೇ ಖ್ಯಾತರಾಗಿರುವ ಪ್ರಧಾನಿ , ಭೂಕಂಪನದ ನಡುವೆಯೂ ತಮ್ಮ ಮುಂದುವರೆಸಿ ಗಮನ ಸೆಳೆದಿದ್ದಾರೆ. ನ್ಯೂಜಿಲ್ಯಾಂಡ್ ರಾಜಧಾನಿ ವೆಲ್ಲಿಂಗ್ಟನ್‌ನಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ವೇಳೆ ಸುದ್ದಿವಾಹಿನಿಗೆ ಸಂದರ್ಶನ ನೀಡುತ್ತಿದ್ದ ಜೆಸಿಂಡಾ ಅರ್ಡೆರ್ನ್ ಕೊಂಚವೂ ವಿಚಲಿತರಾಗದೇ ಸಂದರ್ಶನವನ್ನು ಮುಂದುವರೆಸಿದ್ದಾರೆ. ಸುದ್ದಿವಾಹಿನಿಯ ಸಿಬ್ಬಂದಿ ಭೂಕಂಪ ಸಂಭವಿಸುತ್ತಿರುವುದರಿಂದ ಸಂದರ್ಶನವನ್ನು ಮೊಟಕುಗೊಳಿಸಬೇಕೆ ಎಂದು ಕೇಳಿದ ಪ್ರಶ್ನೆಗೆ ನಗುತ್ತಲೇ ಅವಶ್ಯಕತೆಯಿಲ್ಲ ಎಂದು ಹೇಳಿದ ಜೆಸಿಂಡಾ ಸಂದರ್ಶವನ್ನು ಮುಂದುವರೆಸಿದ್ದಾರೆ. ಸಂಭವಿಸುತ್ತಿದ್ದರೂ ಜೆಸಿಂಡಾ ಅರ್ಡೆರ್ನ್ ಸಹಜವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರೀ ವೈರಲ್ ಆಗಿದೆ. ಭೂಕಂಪನಿಂದ ಸಕ್ರೀಯವಾಗಿರುವ ಪ್ರದೇಶಗಳನ್ನು ಒಳಗೊಂಡಿರುವ ನ್ಯೂಜಿಲ್ಯಾಂಡ್, ಪೆಸಿಫಿಕ್ ಮಹಾಸಾಗರವನ್ನು ಸುತ್ತುವರೆದಿರುವ ಜ್ವಾಲಾಮುಖಿಗಳು ಹಾಗೂ ಸಾಗರ ಕಂದಕಗಳನ್ನು ಒಳಗೊಂಡ ಭೂಭಾಗಗಳನ್ನು ಹೊಂದಿದೆ. 2011ರಲ್ಲಿ ನ್ಯೂಜಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ಸಂಭವಿಸಿದ್ದ 6.3 ತೀವ್ರತೆಯ ಭಾರೀ ಭೂಕಂಪನದಲ್ಲಿ 185 ಜನ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
from India & World News in Kannada | VK Polls https://ift.tt/2LTuVwr