ಡೋಕ್ಲಾಮ್ ಬಳಿಕ ಮತ್ತೊಂದು ಮಿಲಿಟರಿ ಮುಖಾಮುಖಿಗೆ ಚೀನಾ ಕುಮ್ಮಕ್ಕು?: 'ಗಡಿ'ಬಿಡಿ ಡ್ರ್ಯಾಗನ್!

ಲಡಾಖ್: ಭಾರತದೊಂದಿಗೆ ಗಡಿ ತಂಟೆ ತೆಗೆಯದಿದ್ದರೆ ಚೀನಾಗೆ ತಿಂದ ಅನ್ನ ಮೈಗೆ ಹತ್ತುವುದಿಲ್ಲ ಎಂದೆನಿಸುತ್ತದೆ. ಆಗಾಗಾ ಭಾರತದ ಗಡಿ ದಾಟಿ ಬಂದು ಉಪಟಳ ನೀಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ , ಇದೀಗ ಲಡಾಖ್‌ನಲ್ಲಿ ಸಮಸ್ಯೆ ಸೃಷ್ಟಿಸಿದೆ. ಸಿಕ್ಕಿಂ ಗಡಿಯಲ್ಲಿ ಭಾರತೀಯ ಸೈನಿಕರೊಂದಿಗೆ ಕೈ ಕೈ ಮಿಲಾಯಿಸಿದ ಚೀನಿ ಸೈನಿಕರು, ಇದೀಗ ಲಡಾಖ್ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದಾರೆ. ಮೂಲಗಳ ಪ್ರಕಾರ ಗಲ್ವಾನ್ ನದಿಪಾತ್ರದ ಗುಂಟ ಸುಮಾರು 5,000 ಚೀನಿ ಸೈನಿಕರು ಬೀಡು ಬಿಟ್ಟಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಕೂಡ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದೆ. ಪ್ರಮುಖವಾಗಿ ಪ್ಯಾಂಗ್ಯಾಂಗ್ ತ್ಸೋ ಸರೋವರದ ಬಳಿ ಚೀನಿ ಸೈನಿಕರ ಚಟುವಟಿಕೆಗಳು ಅಧಿಕವಾಗಿರುವುದರಿಂದ ಆ ಪ್ರದೇಶಕ್ಕೆ ಹೆಚ್ಚಿನ ಸೈನಿಕರನ್ನು ರವಾನಿಸಲಾಗಿದೆ. ಇತ್ತ ಗಲ್ವಾನ್ ನದಿಪಾತ್ರದಲ್ಲೂ ಹೆಚ್ಚುವರಿ ಸೇನೆಯನ್ನು ನಿಯೋಜಿಸಿರುವ ಭಾರತ, ಚೀನಿ ಸೈನಿಕರ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಿದೆ. ಆದರೆ ಚೀನಾದ ಗಡಿ ಉಪಟಳಕ್ಕೆ ಬೇರೆಯದ್ದೆ ಕಾರಣ ಇದೆ ಎಂದು ಅಂದಾಜಿಸಿರುವ ಭಾರತೀಯ ಮಿಲಿಟರಿ ಅಧಿಕಾರಿಗಳು, 2017ರಲ್ಲಿ ಸಂಭವಿಸಿದ್ದ ಮಿಲಿಟರಿ ಮುಖಾಮುಖಿಯಂತಹ ಘಟನೆಯನ್ನು ಮರುಕಳಿಸಲು ಚೀನಾ ಬಯಸಿದೆ ಎಂದು ಅನುಮಾನಿಸಿದ್ದಾರೆ. 2017ರಲ್ಲಿ ಕ್ಲಾಮ್ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ಭಾರೀ ಸಂಘರ್ಷವೇರ್ಪಟ್ಟಿತ್ತು. ಕೈ ಕೈ ಮಿಲಾಯಿಸಿದ್ದ ಉಭಯ ಸೈನಿಕರು ಪರಸ್ಪರರ ವಿರುದ್ಧ ಗಡಿ ದಾಟಿ ಬಂದ ಆರೋಪ ಹೊರಿಸಿದ್ದರು. ಇದೀಗ ಡೋಕ್ಲಾಮ್ ಸಂಘರ್ಷವನ್ನು ಮರುಕಳಿಸುವ ಯೋಜನೆಯಲ್ಲಿರುವ ಚೀನಾ, ಇದೇ ಕಾರಣಕ್ಕೆ ಲಡಾಖ್ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಸೈನಿಕರನ್ನು ಜಮಾವಣೆಗೊಳಿಸಿದೆ. ಆದರೆ ಚೀನಾದ ಈ ಕುತಂತ್ರ ಅರಿತಿರುವ ಭಾರತೀಯ ಸೇನೆ, ಪ್ರತ್ಯುತ್ತರವಾಗಿ ಗಡಿಯಲ್ಲಿ ಸೈನ್ಯ ಬಲವರ್ಧನೆ ಮಾಡಿದೆ. ಇದೇ ಕಾರಣಕ್ಕೆ ಚೀನಾ ಇದುವರೆಗೂ ಆಕ್ರಮಣಕಾರಿ ಪ್ರವೃತ್ತಿ ತೋರಿಲ್ಲ ಎನ್ನಲಾಗಿದೆ.


from India & World News in Kannada | VK Polls https://ift.tt/3c0k3Ht

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...