ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶೀಯ ವಿಮಾನ ಸಂಚಾರಕ್ಕೆ ಅನುಮತಿ ನೀಡಿದ್ದ , ಇದೀಗ ದೇಶೀಯ ಖಾಸಗಿ ಲಘು ವಿಮಾನಗಳ ಹಾರಾಟಕ್ಕೂ ಸೈ ಎಂದಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಕೇಂದ್ರ ವಿಮಾನಯಾನ ಸಚಿವಾಲಯ, ದೇಶದ ಖಾಸಗಿ ಲಘು ವಿಮಾನ ಸೇವಾ ಸಂಸ್ಥೆಗಳು ಹಾಗೂ ನಿಗದಿತವಲ್ಲದ ಖಾಸಗಿ ಜೆಟ್ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ದೇಶದ ಕೆಲವು ಪ್ರಮುಖ ಉದ್ಯಮಿಗಳು ತಮ್ಮ ವ್ಯಾವಹಾರಿಕ ಅನುಕೂಲಕ್ಕಾಗಿ ಖಾಸಗಿ ವಿಮಾನಗಳ ಹಾರಾಟಕ್ಕೆ ಅನುಮತಿ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಖಾಸಗಿ ಲಘು ವಿಮಾನಗಳು ಹಾಗೂ ನಿಗದಿತವಲ್ಲದ ಖಾಸಗಿ ಜೆಟ್ ವಿಮಾನಗಳ ಹಾರಾಟಕ್ಕೆ ವಿಮಾನಯಾನ ಸಚಿವಾಲಯ ಅನುಮತಿ ನೀಡಿದೆ. ನಿನ್ನೆ(ಮೇ. 25)ಯಿಂದಲೇ ದೇಶದಾದ್ಯಂತ ದೇಶೀಯ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಅದರಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ದೇಶೀಯ ವಿಮಾನಗಳು ಹಾರಾಟ ಆರಂಭಿಸಿವೆ. ದೇಶೀಯ ವಿಮಾನ ಸಂಚಾರಕ್ಕೆ ವಿಮಾನ ಸಂಸ್ಥೆಗಳಿಗೆ ಹಾಗೂ ಪ್ರಯಾಣಿಕರಿಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಕೇಂದ್ರ ವಿಮಾನಯಾನ ಸಚಿವಾಲಯ ಈ ಮಾರ್ಗಸೂಚಿಗಳ ಪಾಲನೆ ಕಡ್ಡಾಯ ಎಂದು ಸ್ಪಷ್ಟಪಡಿಸಿದೆ.
from India & World News in Kannada | VK Polls https://ift.tt/3d4chOb