ನಮ್ಮ ಇತಿಹಾಸವನ್ನು ಭಾರತೀಯ ಸೇನಾಧ್ಯಕ್ಷ ಅಪಹಾಸ್ಯ ಮಾಡಿದ್ದಾರೆ: ನೇಪಾಳ ರಕ್ಷಣಾ ಸಚಿವ!

ಕಠ್ಮಂಡು: ಭಾರತದೊಂದಿಗೆ ಗಡಿ ಸಮಸ್ಯೆ ಉದ್ಭವಕ್ಕೆ ತಮ್ಮದೇ ಆದ ಕಾರಣ ನೀಡಿರುವ ಈಶ್ವರ್ ಪೋಖ್ರೆಲ್, ಭಾರತೀಯ ಭೂಸೇನಾ ಅಧ್ಯಕ್ಷರು ನಮ್ಮ ಇತಿಹಾಸವನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕೈಲಾಸ ಮಾನಸ ಸರೋವರದ ಸುಗಮ ಯಾತ್ರೆಗಾಗಿ ಭಾರತ ನಿರ್ಮಿಸಿರುವ ನೂತನ ರಸ್ತೆ ನಮ್ಮ ಗಡಿಯಲ್ಲೂ ಹಾದು ಹೋಗುತ್ತದೆ ಎಂದು ನೇಪಾಳ ಆಪಾದಿಸಿತ್ತು. ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಿದ್ದ ಜನರಲ್ ಮುಕುಂದ್ ನರವಣೆ, ನೇಪಾಳ ಯಾರದ್ದೋ ಕುಮ್ಮಕ್ಕಿನಿಂದ ಭಾರತದೊಂದಿಗೆ ಗಡಿ ತಂಟೆ ತೆಗೆದಿದೆ ಎಂದು ಚೀನಾದ ಹೆಸರು ಉಲ್ಲೇಖಿಸದೇ ಹರಿಹಾಯ್ದಿದ್ದರು. ಕಾಳಿ ನದಿಯ ಪೂರ್ವದ ಭಾಗ ನೇಪಾಳಕ್ಕೂ ಹಾಗೂ ಪಶ್ಚಿಮದ ಭಾಗ ಭಾರತಕ್ಕೂ ಸೇರಿದೆ. ಅಲ್ಲದೇ ಹೊಸ ಮಾರ್ಗ ಪಶ್ಚಿಮ ಕಾಳಿ ನದಿಯ ಗುಂಟ ಹಾದುಹೋಗುತ್ತದೆ ಎಂದು ಜನರಲ್ ನರವಣೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಹೊಸ ಗಡಿ ನಕ್ಷೆ ಬಿಡುಗಡೆ ಮಾಡಿದ ನೇಪಾಳ ಲೀಪುಲೇಕ್ ಹಾಗೂ ಕಾಲಾಪಾನಿ ಪ್ರದೇಶಗಳನ್ನು ತನ್ನದೆಂದು ವಾದಿಸಿತು. ಆದರೆ ಭಾರತ ನೇಪಾಳದ ಹೊಸ ನಕ್ಷೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಈ ಎಲ್ಲ ಬೆಳವಣಿಗೆಗಳಿಗೆ ಭಾರತೀಯ ಭೂ ಸೇನಾಧ್ಯಕ್ಷ ಜನರಲ್ ನರವಣೆ ನೇಪಾಳದ ಕುರಿತು ನೀಡಿದ್ದ ಹೇಳಿಕೆಯೇ ಕಾರಣ ಎಂದು ನೇಪಾಳದ ರಕ್ಷಣಾ ಸಚಿವ ಈಶ್ವರ್ ಪೋಖ್ರೆಲ್ ಇದೀಗ ಆರೋಪಿಸಿದ್ದಾರೆ. ನೇಪಾಳದ ಕುರಿತು ಕ್ಷುಲ್ಲಕವಾಗಿ ಮಾತನಾಡಿರುವ ಜನರಲ್ ನರವಣೆ, ಉಭಯ ದೇಶಗಳ ನಡುವೆ ಗಡಿ ತಂಟೆ ಉದ್ಭವಿಸಲು ಕಾರಣ ಎಂದು ಪೋಖ್ರೆಲ್ ಕಿಡಿಕಾರಿದ್ದಾರೆ. ಭಾರತವನ್ನು ರಕ್ಷಿಸುವಲ್ಲಿ ನೇಪಾಳದ ಗೂರ್ಖಾ ಸೈನಿಕರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದು, ಇದರ ಅರಿವಿದ್ದೂ ಜನರಲ್ ನರವಣೆ ನೇಪಾಳದ ಇತಿಹಾಸವನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಪೋಖ್ರೆಲ್ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಭಾರತದೊಂದಿಗೆ ಗಡಿ ತಂಟೆಗೆ ಭಾರತೀಯ ಭೂಸೇನಾ ಅಧ್ಯಕ್ಷರ ಹೇಳಿಕೆಯೇ ಕಾರಣ ಎಂದಿರುವ ನೇಪಾಳ ರಕ್ಷಣಾ ಸಚಿವ, ಈ ಮೂಲಕ ಹೊಸದೊಂದು ವಿವಾದ ಸೃಷ್ಟಿಗೆ ಕಾರಣರಾಗಿದ್ದಾರೆ.


from India & World News in Kannada | VK Polls https://ift.tt/3el0fAo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...