ರಾಜ್ಯದ ಮೂರು ಜಿಲ್ಲೆಗಳು ಮತ್ತೆ ರೆಡ್‌ ಜೋನ್‌ಗೆ..! ನಿಮ್ಮ ಜಿಲ್ಲೆ ಯಾವ ವಲಯಕ್ಕೆ..?

ಬೆಂಗಳೂರು: ಕೇಂದ್ರ ಸರಕಾರ ಗುರುವಾರ ಪ್ರಕಟಿಸಿರುವ ಕೊರೊನಾ ವಲಯಗಳ ಪಟ್ಟಿಯಲ್ಲಿ ರಾಜ್ಯದ 3 ಜಿಲ್ಲೆಗಳು ಮತ್ತೆ ರೆಡ್‌ ಜೋನ್‌ ವ್ಯಾಪ್ತಿಯಲ್ಲಿ ಸಿಲುಕಿಕೊಂಡಿವೆ. ಇಲ್ಲಿ ಲಾಕ್‌ಡೌನ್‌‌ ವಿಸ್ತರಣೆಯಾಗುವುದು ಖಚಿತವಾಗಿರುವುದಲ್ಲದೇ, ಮತ್ತಷ್ಟು ಕಟ್ಟುನಿಟ್ಟಾಗಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು ಜಿಲ್ಲೆಗಳು ಮತ್ತೆ ರೆಡ್‌ ಜೋನ್‌ನಲ್ಲಿವೆ. ಕಳೆದ ಬಾರಿ ಈ ಪಟ್ಟಿಯಲ್ಲಿದ್ದ 5 ಜಿಲ್ಲೆಗಳು ಆರೆಂಜ್‌ ಜೋನ್‌ ಪಟ್ಟಿಯಲ್ಲಿ ಸ್ಥಾನಪಡೆದಿವೆ. ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ರೆಡ್‌ ಜೋನ್‌ಗೆ ಬಂದಿರುವುದು ಎಲ್ಲರನ್ನು ಅಚ್ಚರಿ ಮೂಡಿಸಿದೆ. 13 ಜಿಲ್ಲೆಗಳು ಆರೆಂಜ್‌ ಜೋನ್‌ನಲ್ಲಿದ್ದು, 14 ಜಿಲ್ಲೆಗಳು ಹಸಿರು ವಲಯದಲ್ಲಿವೆ. ಆದರೆ, ಎರಡು ದಿನದಿಂದ ಸತತವಾಗಿ ಪಾಸಿಟಿವ್‌ ಪ್ರಕರಣಗಳು ಕಂಡುಬರುತ್ತಿರುವ ದಾವಣಗೆರೆ ಜಿಲ್ಲೆಯೂ ಗ್ರೀನ್‌ ಜೋನ್‌ನಲ್ಲಿರುವುದು ಅಲ್ಲಿನ ಜನರಿಗೆ ಖುಷಿ ನೀಡಿದೆ. ಇನ್ನು, ಬೆಳಗಾವಿ, ಕಲಬುರಗಿಯಲ್ಲಿಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಅವುಗಳನ್ನು ರೆಡ್‌ಜೋನ್‌ಗೆ ಕೇಂದ್ರ ಏಕೆ ಸೇರಿಸಿಲ್ಲ ಎಂಬುದು ಮಾತ್ರ ನಿಗೂಢ. ಇನ್ನು, ಕಳೆದ ಬಾರಿ 11 ಜಿಲ್ಲೆಗಳಿಗೆ ಮೀಸಲಾಗಿದ್ದ ಹಸಿರು ವಲಯಕ್ಕೆ ಈಗ ಮತ್ತೆ 3 ಜಿಲ್ಲೆಗಳು ಸೇರಿಕೊಂಡಿವೆ. ದಾವಣಗೆರೆ, ಉಡುಪಿ ಹಾಗೂ ಕೊಡಗು ಜಿಲ್ಲೆಗಳು ಹೊಸದಾಗಿ ಹಸಿರು ಪಟ್ಟಿಗೆ ಸೇರಿಕೊಂಡಿವೆ. ಯಾವ ಜಿಲ್ಲೆ..? ಯಾವ ವಲಯಕ್ಕೆ..?
ಕೆಂಪು ವಲಯ‌ ಆರೆಂಜ್‌ ಜೋನ್‌ ಹಸಿರು ವಲಯ
1. ಬೆಂಗಳೂರು2. ಬೆಂ. ಗ್ರಾಮಾಂತರ3. ಮೈಸೂರು 1. ಬೆಳಗಾವಿ2. ವಿಜಯಪುರ3. ಕಲಬುರಗಿ4. ಬಾಗಲಕೋಟೆ5. ಮಂಡ್ಯ6. ಬಳ್ಳಾರಿ7. ಧಾರವಾಡ8. ದಕ್ಷಿಣ ಕನ್ನಡ9. ಬೀದರ್‌10. ಚಿಕ್ಕಬಳ್ಳಾಪುರ11. ಗದಗ12. ಉತ್ತರ ಕನ್ನಡ13. ತುಮಕೂರು 1. ದಾವಣಗೆರೆ2. ಉಡುಪಿ3. ಚಾಮರಾಜನಗರ4. ಚಿತ್ರದುರ್ಗ5. ಹಾಸನ6. ಹಾವೇರಿ7. ಕೊಡಗು8. ಕೋಲಾರ9. ಕೊಪ್ಪಳ10. ರಾಯಚೂರು11. ಶಿವಮೊಗ್ಗ12. ಚಿಕ್ಕಮಗಳೂರು13. ರಾಮನಗರ14. ಯಾದಗಿರಿ


from India & World News in Kannada | VK Polls https://ift.tt/2YmjLYv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...