ಕಠ್ಮಂಡು: ಭಾರತದ ಐತಿಹಾಸಿಕ ಕಸಹೋದರ ರಾಷ್ಟ್ರ ಚೀನಾದ ಕುಮ್ಮಕ್ಕಿನಿಂದ ಹಿರಿಯ ಸಹೋದರನಿಂದ ದೂರವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಇತ್ತೀಚಿಗಷ್ಟೇ ಭಾರತದ ಪ್ರದೇಶಗಳನ್ನೂ ಸೇರಿಸಿ ಹೊಸ ಗಡಿ ನಕ್ಷೆ ಬಿಡುಗಡೆ ಮಾಡಿದ್ದ ನೇಪಾಳ, ಲಿಪುಲೇಖ್ ಹಾಗೂ ಕಾಲಾಪಾನಿ ತನ್ನದೆಂದು ವಾದಿಸತೊಡಗಿದೆ. ಕೈಲಾಸ ಮಾನಸ ಸರೋವರದ ಸುಗಮ ಯಾತ್ರೆಗಾಗಿ ನಿರ್ಮಿಸಿರುವ 80 ಕಿ.ಮೀ ಉದ್ದದ ನೂತನ ರಸ್ತೆಗೆ ನೇಪಾಳ ಕ್ಯಾತೆ ತೆಗೆದಿದೆ. ತನನ ಭೂಭಾಗದಲ್ಲಿ ಭಾರತ ರಸ್ತೆ ನಿರ್ಮಿಸಿದೆ ಎಂದು ನೇಪಾಳ ಗಂಭೀರ ಆರೋಪ ಹೊರಿಸುವ ಹಂತಕ್ಕೂ ತಲುಪಿದೆ. ಈ ಮಧ್ಯೆ ಚೀನಾಗೆ ಹತ್ತಿರವಾಗುವ ತನ್ನ ನೀತಿಗೆ ಮತ್ತೆ ವೇಗ ನೀಡಿರುವ ನೇಪಾಳ, 12 ವರ್ಷಗಳ ಬಳಿಕ ಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ. ಹೌದು, ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ ಡಾರ್ಚುಲಾ-ಟಿಂಕರ್ 83 ಕಿ.ಮೀ ಉದ್ದದ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ನೇಪಾಳ ಮರುಚಾಲನೆ ನೀಡಿದೆ. ಚೀನಾದೊಂದಿಗೆ ವ್ಯಾಪಾರ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ 12 ವರ್ಷಗಳ ಬಳಿಕ ಕಾರ್ಯವನ್ನು ಪುನರಾರಂಭಿಸಿರುವುದಾಗಿ ನೇಪಾಳ ಹೇಳಿದೆ. 2008 ರಲ್ಲಿ ಮಂಜೂರಾಗಿದ್ದ ರಸ್ತೆ ನಿರ್ಮಾಣ ಯೋಜನೆ, ಕಠಿಣ ಭೂಪ್ರದೇಶ ಹಾಗೂ ಹವಾಮಾನ ಪರಿಸ್ಥಿತಿಯಿಂದ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಆದರೆ ಈ ಹೆದ್ದಾರಿ ನಿರ್ಮಾಣಕ್ಕೆ ನೇಪಾಳ ಮತ್ತೆ ಚಾಲನೆ ನೀಡಿದೆ. ಚೀನಾದೊಂದಿಗೆ ಸುಗಮ ವ್ಯಾಪಾರಕ್ಕಾಗಿ ಈ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ನೇಪಾಳ ಮೇಲ್ನೋಟಕ್ಕೆ ಹೇಳುತ್ತಿದೆಯಾದರೂ, ಭಾರತಕ್ಕೆ ತಾನು ಚೀನಾಗೆ ಹತ್ತಿರವಾಗುತ್ತಿರುವ ಸಂದೇಶ ರವಾನಿಸಲು ನೇಪಾಳ ಬಯಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಒಟ್ಟಿನಲ್ಲಿ ಸಕಾರಣವಿಲ್ಲದೇ ಭಾರತದೊಂದಿಗೆ ಗಡಿ ಕ್ಯಾತೆ ತೆಗೆದಿರುವ ನೇಪಾಳ, ಈ ಕಾರಣಕ್ಕೆ ಚೀನಾಗೆ ಹತ್ತಿರವಾಗಲು ಬಯಿಸಿರುವುದು ತನ್ನ ಭವಿಷ್ಯಕ್ಕೆ ಮಾರಕ ಎಂಬುದುನ್ನು ಅರಿಯಬೇಕಿದೆ.
from India & World News in Kannada | VK Polls https://ift.tt/2ZwKDpi