ಗಡಿ ಪೊಲೀಸ್ ಚೆಕ್‌ಪೋಸ್ಟ್‌ಗಳಿಗೆ ಸೆಲ್ಕೊ ಲೈಟ್ಸ್ ಬೆಂಗಳೂರು: ಕೊರೊನಾ ನಿಯಂತ್ರಿಸಲು ರಾಯಚೂರಿನ ಗಡಿಯಲ್ಲಿ ಸ್ಥಾಪಿಸಲಾಗಿರುವ ಪೊಲೀಸ್ ಚೆಕ್‌ಪೋಸ್ಟ್‌ಗೆ ಸೆಲ್ಕೋ ಸಂಸ್ಥೆ ವತಿಯಿಂದ ಸೋಲಾರ್ ಚಾಲಿತ ಲೈಟು, ಫ್ಯಾನ್ ಹಾಗೂ ಮೊಬೈಲ್ ಚಾರ್ಜರ್ಗಳನ್ನು ಅಳವಡಿಸಲಾಗಿದೆ. ರಾಯಚೂರಿನ ಎಸ್‌ಪಿ ವೇದಮೂರ್ತಿ ಕೋರಿಕೆಯಂತೆ 10 ತನಿಖಾ ಕೇಂದ್ರಗಳಿಗೆ ಸೋಲಾರ್ ಅಳವಡಿಸಲು ಸಂಸ್ಥೆ ಸಿದ್ಧವಿದೆ. ಇದುವರೆಗೆ ತೆಲಂಗಾಣ ಹಾಗೂ ಗಡಿ ಭಾಗದ ಸಿಂಗನೋಡಿ ಮತ್ತು ಸಾತ್‌ಮೈಲ್ ಪೊಲೀಸ್ ಚೆಕ್ ಪೋಸ್ಟ್‌ನಲ್ಲಿ ಸೋಲಾರ್ ಅಳವಡಿಸಲಾಗಿದೆ ಎಂದು ಸೆಲ್ಕೋ ಸಂಸ್ಥೆ ತಿಳಿಸಿದೆ.
from India & World News in Kannada | VK Polls https://ift.tt/2wM3mRT