ಇಂದಿನ ಚುಟುಕು ಸುದ್ದಿಗಳು: ಧಾರವಾಡದಲ್ಲಿ ಲಾಕ್ ಡೌನ್ ಉಲ್ಲಂಘಿಸಿದ 10 ಜನರ ಬಂಧನ

ಸುಳ್ಯ ಗಡಿ ಭಾಗದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ಸುಳ್ಯ: ಕೇರಳ-ಕರ್ನಾಟಕ ಗಡಿಭಾಗ ಮುರೂರಿನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಮುರೂರು ಗಡಿಯಲ್ಲಿ ಎಎಸ್‌ಐ ಭಾಸ್ಕರ್‌ ಪ್ರಸಾದ್‌ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ ರಾಮನಾಯ್ಕ ಕರ್ತವ್ಯದಲ್ಲಿದ್ದರು. ಇದೇ ವೇಳೆ ಪರಪ್ಪೆಯ ಸಿನಾನ್‌ ಎಂಬ ಯುವಕ ಮುರೂರು ಗಡಿ ಭಾಗಕ್ಕೆ ಬಂದಿದ್ದು, ಗಡಿ ದಾಟದಂತೆ ಪೊಲೀಸರು ಹೇಳುತ್ತಿದ್ದಂತೆ ಆತ ಕಲ್ಲು ಹೆಕ್ಕಿ ಪೊಲೀಸರತ್ತ ತೂರಿದ. ಎಎಸ್‌ಐ ಭಾಸ್ಕರ ಪ್ರಸಾದ್‌, ಸಿಬ್ಬಂದಿ ರಾಮ ನಾಯ್ಕ ಅವರಿಗೆ ಗಾಯವಾಗಿದ್ದು, ಹೈವೆ ಪಟ್ರೋಲ್‌ ವಾಹನಕ್ಕೂ ಕಲ್ಲೆಸೆಯಲಾಗಿದೆ. ಎಸ್‌ಐ ಹರೀಶ್‌ ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ, ಸಾರ್ವಜನಿಕರ ಸಹಾಯದಿಂದ ಸಿನಾನ್‌ ಎಂಬಾತನನ್ನು ಹಿಡಿದು ಠಾಣೆಗೆ ಕರೆತರಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಗಳೂರು: ಕೊರೊನಾ ಲಾಕ್ ಡೌನ್ ಹಿನ್ನಲೆ ,ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾರುಕಟ್ಟೆಗಳಿಗೆ ಭೇಟಿ, ಪರಿಶೀಲನೆ ಬೆಂಗಳೂರು: ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಇಂದು ಬೆಳ್ಳಂಬೆಳಿಗ್ಗೆ ತರಕಾರಿ ಮತ್ತು ಈರುಳ್ಳಿ ಆಲೂಗಡ್ಡೆ ಮಾರುಕಟ್ಟೆಗಳಿಗೆ ಭೇಟಿ ನೀಡಿದರು. ಅಲ್ಲದೇ ಬ್ಯಾಟರಾಯನಪುರ ಹಾಗೂ ದಾಸನಪುರ ಮಾರುಕಟ್ಟೆ ಪ್ರಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಧಾರವಾಡದಲ್ಲಿ ಲಾಕ್ ಡೌನ್ ಉಲ್ಲಂಘನೆ, 10 ಜನರ ಬಂಧನ ಧಾರವಾಡ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಲಾಕಡೌನ್ ಘೋಷಿಸಲಾಗಿದ್ದು, ಜಿಲ್ಲೆಯಲ್ಲೂ ಕೂಡ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಆದರೂ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಗೆಳೆಯನ ಹುಟ್ಟು ಹಬ್ಬ ಮಾಡಿ, ತಿಂದ 10 ಜನ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.


from India & World News in Kannada | VK Polls https://ift.tt/2UB321g

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...