ರೋಹಿತ್ ಶರ್ಮಾ ಅಲ್ಲ ಇವರೇ ನೋಡಿ ವಿರಾಟ್ ಕೊಹ್ಲಿ ಅವರ ಬೆಸ್ಟ್ ಜೊತೆಗಾರ!

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ತಮ್ಮ ಸಹ ಆಟಗಾರ ಜೊತೆ ಸೇರಿ ಅನೇಕ ಜೊತೆಯಾಟದ ದಾಖಲೆಗಳನ್ನು ಬರೆದಿದ್ದಾರೆ. ಆಧುನಿಕ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಜೋಡಿ ಎನಿಸಿರುವ ಇವರಿಬ್ಬರು ಅನೇಕ ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಹಾಗಿರಬೇಕೆಂದರೆ ತಮ್ಮ ಬೆಸ್ಟ್ ಜೊತೆಗಾರನ ಕುರಿತಾಗಿ ಮಾತನಾಡಿದಾಗ ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರ ರೋಹಿತ್ ಶರ್ಮಾ ಅವರ ಹೆಸರನ್ನು ಹೆಸರಿಸದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಹೌದು, ಕೊರೊನಾ ವೈರಸ್‌ನಿಂದಾಗಿ ಮನೆಯಲ್ಲೇ ಕ್ವಾರಂಟೈನ್ ಸಮಯವನ್ನು ಕಳೆಯುತ್ತಿರುವ ಟೀಮ್ ಇಂಡಿಯಾ ನಾಯಕ, ಇಂಗ್ಲೆಂಡ್ ಮಾಜಿ ಆಟಗಾರ ಹಾಗೂ ವಿಶ್ಲೇಷಣೆಗಾರ ಕೆವಿನ್ ಪೀಟರ್ಸನ್ ಜೊತೆಗೆ ನಡೆಸಿದ ಲೈವ್ ಇನ್‌ಸ್ಟಾಗ್ರಾಂ ಚರ್ಚೆಯ ಸಂದರ್ಭದಲ್ಲಿ ಈ ವಿವರವನ್ನು ಬಹಿರಂಗಪಡಿಸಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಅತ್ಯುತ್ತಮ ಜೊತೆಗಾರನ ಸ್ಥಾನಕ್ಕೆ ಇಬ್ಬರ ಹೆಸರುಗಳನ್ನು ಹೆಸರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಜಿ ನಾಯಕ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ20 ಕ್ರಿಕೆಟ್ ಲೀಗ್‌ನಲ್ಲಿ ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್‌ಮನ್ ಖ್ಯಾತಿಯ ಎಬಿಡಿ ವಿಲಿಯರ್ಸ್ ಹೆಸರುಗಳನ್ನು ವಿರಾಟ್ ಕೊಹ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ''ಅತ್ಯುತ್ತಮ ಒಡನಾಟವನ್ನು ಹಂಚಿಕೊಂಡಿರುವ ವಿರಾಟ್ ಇವರೊಂದಿಗೆ ಬ್ಯಾಟಿಂಗ್ ಮಾಡುವಾಗ ಮಾತನಾಡುವ ಮಾಡುವ ಅಗತ್ಯವೇ ಇರುವುದಿಲ್ಲ'' ಎಂದಿದ್ದಾರೆ. ಇಲ್ಲಿ ಪ್ರಮುಖವಾಗಿಯೂ ವಿರಾಟ್ ನೀಡಿರುವ ಕಾರಣ ಏನೆಂದರೆ ನನ್ನ ಜೊತೆಗೆ ವೇಗವಾಗಿ ಓಡುವ ಬ್ಯಾಟ್ಸ್‌ಮನ್‌ಗಳನ್ನು ನಾನು ಇಷ್ಟಪಡುತ್ತೇನೆ. ಈ ಮೂಲಕ ಫಿಟ್ನೆಸ್‌ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಹಾಗಾಗಿ ಭಾರತಕ್ಕಾಗಿ ಆಡುವಾಗ ಎಂಎಸ್ ಧೋನಿ ಮತ್ತು ಐಪಿಎಲ್‌ನಲ್ಲಿ ಆರ್‌ಸಿಬಿಗಾಗಿ ಆಡುವಾಗ ಎಬಿಡಿ ವಿಲಿಯರ್ಸ್ ತಮ್ಮ ಪಾಲಿಗೆ ನೆಚ್ಚಿನ ಜೊತೆಗಾರ ಎಂದಿದ್ದಾರೆ. ವಿರಾಟ್ ಕೊಹ್ಲಿ 2008ನೇ ಇಸವಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಶ್ರೀಲಂಕಾ ವಿರುದ್ಧ ಡೆಬ್ಯು ಮಾಡಿದ್ದರು. ಹಾಗೆಯೇ ಧೋನಿ ನಾಯಕತ್ವದಲ್ಲಿ 19 ಶತಕಗಳ ದಾಖಲೆಯನ್ನು ಹೊಂದಿದ್ದರು. ಇದು ಕಪ್ತಾನರೊಬ್ಬರ ಅಡಿಯಲ್ಲಿ ಬ್ಯಾಟ್ಸ್‌ಮನ್ ಗಳಿಸಿದ ಗರಿಷ್ಠ ಶತಕಗಳ ದಾಖಲೆಯಾಗಿದೆ. ಹಾಗೆಯೇ 2011 ಐಪಿಎಲ್‌ನಲ್ಲಿ ಎಬಿಡಿ ವಿಲಿಯರ್ಸ್ ಆರ್‌ಸಿಬಿ ತೆಕ್ಕೆಗೆ ಸೇರಿದ್ದರು. ಅಲ್ಲಿಂದ ಬಳಿಕ ಕಳೆದ ಒಂಬತ್ತು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಜೊತೆಗಾರನಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಅನೇಕ ಸ್ಮರಣೀಯ ಗೆಲುವುಗಳನ್ನು ದಾಖಲಿಸಿದ್ದಾರೆ. ಅದೇ ಹೊತ್ತಿಗೆ ಎಬಿ ಡಿ ವಿಲಿಯರ್ಸ್‌ಗೆ ಸ್ಲೆಡ್ಜಿಂಗ್ ಮಾಡಲು ಬಯಸುವುದಿಲ್ಲ. ಇದು ತಮ್ಮ ವೈಯಕ್ತಿಕೆ ಸಂಬಂಧಕ್ಕೆ ಧಕ್ಕೆಯನ್ನುಂಟು ಮಾಡಲಿದೆ ಎಂದರು. ಏತನ್ಮಧ್ಯೆ ಟೀಮ್ ಇಂಡಿಯಾದ ಫೀಲ್ಡಿಂಗ್ ಪರಿವರ್ತನೆಯ ಭಾಗವಾಗಲು ಸಾಧ್ಯವಾಗಿರುವುದು ತಮ್ಮ ಅದೃಷ್ಟ ಎಂದರು. ''ಇಡೀ ವಿಶ್ವವೇ ಮಾಡುತ್ತಿರುವುದು ನಮ್ಮ ಕೊರೆತೆಯಾಗಿತ್ತು. ಹಾಗಾಗಿ ಆದಷ್ಟು ಬೇಗನೇ ನಾವು ಫೀಲ್ಡಿಂಗ್ ಗುಣಮಟ್ಟವನ್ನು ಹೆಚ್ಚಿಸಬೇಕಿತ್ತು. ನನ್ನ ಅದೇ ಚಿಂತನೆಯನ್ನು ಹೊಂದಿದ ಆಟಗಾರರೊಂದಿಗೆ ಆಡಲು ಸಾಧ್ಯವಾಗಿರುವುದು ನನ್ನ ಅದೃಷ್ಟ'' ಎಂದರು. ಅಂದ ಹಾಗೆ 2009-10ನೇ ಸಾಲಿನಲ್ಲಿ ಕೆವಿನ್ ಪೀಟರ್ಸ್ ಜೊತೆಗೆ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಒಂದೇ ಡ್ರೆಸ್ಸಿಂಗ್ ಕೊಠಡಿಯನ್ನು ಹಂಚಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2R6BSwS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...