ಕಾರ್ಮಿಕರ ಮುಷ್ಕರ Live: ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆ ಅಬಾಧಿತ

ಬೆಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಮೇಲೆ ಕಾರ್ಮಿಕರ ಮುಷ್ಕರದ ಬಿಸಿ ತಟ್ಟಿದೆ. ಬಸ್‌ ಸಂಚಾರ ಎಂದಿನಂತೆ ಇದ್ದರೂ, ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಮಡಿಕೇರಿಯಲ್ಲಿ ಬಸ್‌ಗೆ ಕಲ್ಲು ಮಡಿಕೇರಿ ನಗರದ ಹೊರ ವಲಯದ ಚೈನ್‌ ಗೇಟ್‌ ಬಳಿ ಮೈಸೂರಿನತ್ತ ಹೊರಟಿದ್ದ ಬಸ್‌ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಲಾಗಿದೆ. ಸುಮಾರು ಬೆಳಗ್ಗೆ 7.30ಕ್ಕೆ ಈ ಘಟನೆ ನಡೆದಿದೆ. ಹೋಟೆಲ್‌ ಸೇವೆಗಳು ಅಬಾಧಿತಮೈಸೂರಿನ ಹೋಟೆಲ್‌ ಮಾಲೀಕರು ಕಾರ್ಮಿಕ ಮುಷ್ಕರಕ್ಕೆ ಬಾಹ್ಯ ಬೆಂಬಲ ನೀಡಿದ್ದು, ಹೋಟೆಲ್‌ಗಳನ್ನು ಎಂದಿನಂತೆ ತೆರೆಯಲಾಗಿದೆ. ಪ್ರವಾಸಿಗರಿಗೆ, ಗ್ರಾಹಕರಿಗೆ ಹೋಟೆಲ್‌ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಬ್ಯುಸಿನೆಸ್‌ ಎಂದಿನಂತೆ ನಡೆಯುತ್ತಿದೆ. ರಾಜ್ಯದ ಇತರೆಡೆಗಳಲ್ಲು ಹೋಟೆಲ್‌ಗಳನ್ನು ತೆರೆಯಲಾಗಿದ್ದು ಎಂದಿನಂತೆ ಉಪಹಾರಗಳನ್ನು ನೀಡಲಾಗುತ್ತಿದೆ. ಆಸ್ಪತ್ರೆ ಸೇವೆಗಳು ಅಬಾಧಿತ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಎಂದಿನಂತೆ ಚಿಕಿತ್ಸೆ ಲಭ್ಯವಿದೆ. ಮುಷ್ಕರದ ಹಿನ್ನೆಲೆ ಆಸ್ಪತ್ರೆಗಳು ಬಂದ್‌ ಇರುವುದಿಲ್ಲ. 9 ಗಂಟೆ ನಂತರ ಹೊರರೋಗಿಗಳ ವಿಭಾಗ (ಒಪಿಡಿ) ಎಂದಿನಂತೆ ಕಾರ್ಯ ನಿರ್ವಹಿಸುತ್ತದೆ. ಜನಸಾಮಾನ್ಯರು ಯಾವುದೇ ಗೊಂದಲವಿಲ್ಲದೆ ಅಗತ್ಯ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಭೇಟಿ ನೀಡಬಹದು. ರೋಗಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ನಿಗಾ ವಹಿಸಬೇಕು ಎಂದು ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಸಿಪಿಐಎಂ ಕಾರ್ಯಕರ್ತರ ಗೂಂಡಾಗಿರಿ ಚಿಕ್ಕಬಳ್ಳಾಪುರದಲ್ಲಿ ಸಿಪಿಐಎಂ ಕಾರ್ಯಕರ್ತರ ಗೂಂಡಾಗಿರಿ. ಗುಡಿಬಂಡೆಯಲ್ಲಿ ಟೀ ಮಾರುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಿದ ಸಿಪಿಐಎಂ ಕಾರ್ಯಕರ್ತರು ಹಾಲು ಚೆಲ್ಲಿ ಅಂಗಡಿ ಮುಚ್ಚುವಂತೆ ಬಲವಂತ ಮಾಡಿದ್ದಾರೆ. ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ, ಪೆಟ್ರೋಲ್‌ ಬಂಕ್‌ಗಳು ಎಂದಿನಂತೆ ಕಾರ್ಯಾರಂಭ ಮಾಡಿವೆ. ಪ್ರಯಾಣಿಕರ ಸಂಖ್ಯೆ ಕೊಂಚ ಕಡಿಮೆ ಇದ್ದಂತೆ ಕಂಡು ಬರುತ್ತಿದೆ. ಇಂದು 'ಭಾರತ್‌ ಬಂದ್‌' ಎಂದೇ ಬಿಂಬಿಸಲ್ಪಟ್ಟಿರುವುದರಿಂದ ಜನರಲ್ಲಿ ಮೂಡಿರುವ ಗೊಂದಲದಿಂದ ದೂರ ಪ್ರಯಾಣಕ್ಕೆ ಹಿಂದೇಟು ಹಾಕಿದ್ದಾರೆ. ಕಾರ್ಮಿಕ ಸಂಘಟನೆಗಳ ಮುಷ್ಕರಕೇಂದ್ರ ಸರಕಾರದ ಕಾರ್ಮಿಕ ನೀತಿ ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಬುಧವಾರ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿವೆ. 21 ಸಾವಿರ ರೂ. ಕನಿಷ್ಠ ವೇತನ ನಿಗದಿ ಮಾಡಬೇಕು. ಎಲ್ಲರಿಗೂ ಮಾಸಿಕ 10 ಸಾವಿರ ರೂ. ಪಿಂಚಣಿ ನಿಗದಿಪಡಿಸಬೇಕು. ಗುತ್ತಿಗೆ ಪದ್ಧತಿ ನಿಯಂತ್ರಿಸಿ, ಸಮಾನ ವೇತನ ನೀಡಬೇಕು. ರಕ್ಷಣಾ ವಲಯದ ಉದ್ದಿಮೆಗಳು, ರೈಲ್ವೆ ಇಲಾಖೆ ಖಾಸಗೀಕರಣ ಕೈಬಿಡಬೇಕು. ರಕ್ಷಣೆ, ಕಲ್ಲಿದ್ದಲು, ಬ್ಯಾಂಕಿಂಗ್‌, ವಿಮೆ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಬೇಡ ಮತ್ತು ಪೌರತ್ವ ತಿದ್ದುಪಡಿ ಕಾಯಿದೆಯನ್ನು ಕೈಬಿಡಬೇಕು ಎಂಬಿತ್ಯಾದಿ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಲಾಗುತ್ತಿದೆ.


from India & World News in Kannada | VK Polls https://ift.tt/36wo3xK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...