ತಪ್ಪು ಮುಚ್ಚಲು ಪೊಲೀಸರೇ ಸೃಷ್ಟಿಸಿರುವ ವಿಡಿಯೋ ಎಂದು ಮೊದಲೇ ಹೇಳಿದ್ದೆ: ಸಿದ್ದರಾಮಯ್ಯ

ಬಾಗಲಕೋಟೆ: ಪೊಲೀಸರು ನಕಲಿ ವಿಡಿಯೋ ಸೃಷ್ಠಿ ಮಾಡಿ ಅಮಾಯಕರ ಮೇಲೆ ಕೇಸ್ ಹಾಕಿದ್ದಾರೆ ಎಂದು ನಾನು ಮಂಗಳೂರಿಗೆ ಹೋಗಿದ್ದಾಗಲೇ ಹೇಳಿದ್ದೆ ಎಂದು ಮಾಜಿ ಸಿಎಂ ಅವರು ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮ್ಮನಕಟ್ಟಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಬಿಡುಗಡೆ ಮಾಡಿರುವ ಗಲಭೆ ಕುರಿತ ಸಿಡಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಗಳೂರಿನಲ್ಲಿ ಪ್ರತಿಭಟನೆಯಿಂದ ಯಾವುದೇ ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಿಲ್ಲ. ಪೊಲೀಸರು ಬಿಡುಗಡೆ ಮಾಡಿರುವುದೆಲ್ಲವೂ ಕೃತಕವಾಗಿ ಸೃಷ್ಠಿ ಮಾಡಿರುವಂಥವು. ಅವರು ತಪ್ಪು ಮಾಡಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಈ ರೀತಿ ಕೃತಕ ವಿಡಿಯೋ ಸೃಷ್ಟಿ ಮಾಡಿದ್ದಾರೆ ಎಂದು ಹೇಳಿದರು. ನೆರೆ ಪರಿಹಾರ ಅನುದಾನ ಬಿಡುಗಡೆ ವಿಚಾರ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನೆರೆ, ಮಳೆ ಹಾನಿ ರಸ್ತೆಗೆ ಬಿಜೆಪಿ ಮುಖಂಡರ ಖಾತೆಗೆ ಅನುದಾನ ಬಿಡುಗಡೆ ವಿಚಾರವಾಗಿ ಮಾತನಾಡಿ, ಆ ರೀತಿ ಬಿಡುಗಡೆ ಮಾಡೋದಕ್ಕೆ ಅವಕಾಶವಿಲ್ಲ. ಶಾಸಕರಿಗೇಕೆ ಅನುದಾನ ಕೊಡ್ಬೇಕು ಎಂದು ಪ್ರಶ್ನಿಸಿದ್ದಾರೆ. ನಿವಾಸ ತೊರೆಯುವಂತೆ ನೋಟಿಸ್ ವಿಚಾರ ಕಾವೇರಿ ನಿವಾಸ ತೊರೆಯುವಂತೆ ಸಿದ್ದರಾಮಯ್ಯಗೆ ನೋಟಿಸ್ ನೀಡಲಾಗಿದೆ ಎಂಬುದರ ಕರಿತು ಮಾತನಾಡಿ, ನನಗೆ ಕೋರ್ಟ್ ನಿಂದ ಯಾವುದೇ ನೊಟೀಸ್ ಬಂದಿಲ್ಲ. ನೀವೆ ಸುಮ್ಮನೆ ಏನೇನೋ ಹೇಳ್ತೀದ್ದೀರಿ ಎಂದರು.


from India & World News in Kannada | VK Polls https://ift.tt/2FBD6dB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...