ಅಮೆರಿಕ ಮೇಲೆ ಇರಾನ್ ಪ್ರತೀಕಾರ..! ಡಜನ್‌ಗಟ್ಟಲೆ ಕ್ಷಿಪಣಿ ದಾಳಿಗೆ ‘ಆಲ್‌ ಈಸ್ ವೆಲ್‌’ ಎಂದ ಟ್ರಂಪ್..!

ಬಾಗ್ದಾದ್ (ಇರಾಕ್‌): ಇರಾನ್‌ನ ಸೇನಾ ಮುಖ್ಯಸ್ಥ ಖಾಸಿಂ ಸುಲೇಮಾನ್‌ ಹತ್ಯೆಗೈದ ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿರುವ , ಕ್ಷಿಪಣಿ ದಾಳಿಯ ಮೂಲಕ ಉತ್ತರ ಕೊಟ್ಟಿದೆ. ಇರಾಕ್‌ನಲ್ಲಿರುವ ಅಮೆರಿಕ ವಾಯು ನೆಲೆಗಳ ಮೇಲೆ ಡಜನ್‌ಗಟ್ಟಲೆ ನಡೆಸಿದ ಇರಾನ್‌ಗೆ, ಅಮೆರಿಕ ಅಧ್ಯಕ್ಷ ಟ್ರಂಪ್‌ ಟ್ವೀಟ್ ಮಾಡಿ ಕಾಲೆಳೆದಿದ್ಧಾರೆ..! ‘ಆಲ್‌ ಈಸ್‌ ವೆಲ್‌’ ಎಂದು ತಮ್ಮ ಟ್ವೀಟ್ ಆರಂಭಿಸಿರುವ ಟ್ರಂಪ್, ಇರಾಕ್‌ನಲ್ಲಿರುವ ಅಮೆರಿಕದ ಎರಡು ಸೇನಾ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ ಮಾಡಿದೆ. ನಾವು ಇದೀಗ ಸಾವು ನೋವು ಹಾಗೂ ಹಾನಿಯ ಲೆಕ್ಕಾಚಾರ ಹಾಕುತ್ತಿದ್ದೇವೆ ಎಂದು ಮಾಹಿತಿ ನೀಡಿದ್ಧಾರೆ. ಈವರೆಗೆ ಎಲ್ಲವೂ ನಿಯಂತ್ರಣದಲ್ಲಿದೆ ಎಂದಿರುವ ಟ್ರಂಪ್, ನಾವು ವಿಶ್ವದಲ್ಲಿ ಈವರೆಗಿನ ಅತ್ಯಂತ ಶಕ್ತಿಯುತ ಹಾಗೂ ಶಸ್ತ್ರಾಸ್ತ್ರ ಸುಸಜ್ಜಿತ ರಾಷ್ಟ ಎಂದು ಹೇಳಿಕೊಂಡಿದ್ಧಾರೆ. ಅಷ್ಟೇ ಅಲ್ಲ, ಇನ್ನು ಮಿಕ್ಕೆಲ್ಲಾ ವಿಚಾರಗಳ ಬಗ್ಗೆ ನಾಳೆ ಬೆಳಗ್ಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ. ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಕೂಡಾ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಭಾರತೀಯ ಪ್ರಜೆಗಳಿಗೆ ಇರಾಕ್‌ಗೆ ತೆರಳದಂತೆ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಸಲಹೆ ನೀಡಿದ್ಧಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಇರಾಕ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳಿಗೂ ಸುರಕ್ಷಿತವಾಗಿ ಇರುವಂತೆ ಸಲಹೆ ನೀಡಿದ್ಧಾರೆ. ಇರಾಕ್‌ನಲ್ಲಿ ಪ್ರವಾಸ ಕೈಗೊಳ್ಳದಂತೆ ಮನವಿ ಮಾಡಿದ್ದಾರೆ. ಇರಾನ್‌ ಹಾಗೂ ಅಮೆರಿಕ ನಡುವಣ ಉದ್ವಿಗ್ನತೆ ತೀವ್ರಗೊಳ್ಳುತ್ತಿದ್ದು, ಇದೀಗ ಖಂಡಾಂತರ ಕ್ಷಿಪಣಿಗಳು ಅಬ್ಬರಿಸುತ್ತಿವೆ. ಮುಂದಿನ ದಿನಗಳಲ್ಲಿ ಈ ಘರ್ಷಣೆ ಯಾವ ಹಂತಕ್ಕೆ ಬಂದು ನಿಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.


from India & World News in Kannada | VK Polls https://ift.tt/2QT9ca1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...