ಮುಂಬಯಿ: ಭಾರತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಶನಿವಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 35 ವರ್ಷದ ಇರ್ಫಾನ್ ಕಳೆದ ಆವೃತ್ತಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿಜ ಮ್ಮು-ಕಾಶ್ಮೀರ ತಂಡವನ್ನು ಪ್ರತಿನಿಧಿಸುವ ಮೂಲಕ ಕೊನೆಯದಾಗಿ ಸ್ಪರ್ಧಾತ್ಮಕ ಕ್ರಿಕೆಟಿನಲ್ಲಿ ಪಾಲ್ಗೊಂಡಿದ್ದರು. ಇರ್ಫಾನ್ 2018ರಲ್ಲಿ ಜಮ್ಮು-ಕಾಶ್ಮೀರ ತಂಡಕ್ಕೆ ವಲಸೆ ಹೋಗುವ ಮೊದಲು (ಆಟಗಾರ ಹಾಗೂ ಗುರುವಾಗಿ) ಬರೋಡಾ ತಂಡದ ಕಾಯಂ ಸದಸ್ಯರಾಗಿದ್ದರು. 2003ರಲ್ಲಿಆಸ್ಪ್ರೇಲಿಯಾ ತಂಡದ ವಿರುದ್ಧ ಅಡಿಲೇಡ್‌ನಲ್ಲಿ ಮೊದಲ ಪಂದ್ಯವಾಡಿದ್ದ ಇರ್ಫಾನ್ 2012ರ ಅಕ್ಟೋಬರ್ ತನಕ ಭಾರತ ತಂಡದಲ್ಲಿದ್ದರು. 29 ಟೆಸ್ಟ್ ಪಂದ್ಯಗಳಲ್ಲಿ100 ವಿಕೆಟ್ ಪಡೆದಿದ್ದು, 1105 ರನ್ ಗಳಿಸಿದ್ದಾರೆ. 120 ಒಡಿಐಗಳಲ್ಲಿ1544 ರನ್ ಪೇರಿಸಿದ್ದು, 173 ವಿಕೆಟ್ ಗಳಿಸಿದ್ದಾರೆ. 24 ಟಿ20 ಪಂದ್ಯಗಳಲ್ಲಿ28 ವಿಕೆಟ್ ಜತೆ 172 ರನ್ ಬಾರಿಸಿದ್ದಾರೆ. ಪಾಕಿಸ್ತಾನ ಪ್ರವಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿರುವುದು ಹಾಗೂ 2007ರ ಟಿ20 ವಿಶ್ವ ಕಪ್ ಫೈನಲ್‌ನಲ್ಲಿ ಪಂದ್ಯಶ್ರೇಷ್ಠರೆನಿಸಿಕೊಂಡಿರುವುದು ಪಠಾಣರ ಸ್ಮರಣೀಯ ಸಾಧನೆಗಳು. ಕಪಿಲ್ ದೇವ್ ಬಳಿಕ ಭಾರತ ಕಂಡ ಅತ್ಯಂತ ಶ್ರೇಷ್ಠ ಆಲ್‌ರೌಂಡರ್ ಆಟಗಾರರಲ್ಲಿ ಓರ್ವರಾಗಿದ್ದಾರೆ. ತಮ್ಮ ಮೆಚ್ಚಿನ ಆಟಗಾರ ಪಾಕಿಸ್ತಾನ ಮಾಜಿ ವೇಗಿ ವಾಸೀಂ ಅಕ್ರಂ ಅವರಂತೆ ಚೆಂಡನ್ನು ಇನ್ ಸ್ವಿಂಗ್ ಮಾಡುವ ಕೌಶಲ್ಯವನ್ನು ಕರಗತ ಮಾಡಿಕೊಂಡಿದ್ದರು. ಕ್ರಿಕೆಟ್ ಕೆರಿಯರ್ ಆರಂಭದ ಕೆಲವು ವರ್ಷಗಳಲ್ಲಿ ಯಶಸ್ಸು ಗಳಿಸಿರುವ ಪಠಾಣ್‌ಗೆ ಬಳಿಕ ಗಾಯದ ಸಮಸ್ಯೆ ಕಾಡಿತ್ತು. ಇದರಿಂದಾಗಿ ಬೌಲಿಂಗ್ ನಿಖರತೆಯನ್ನು ಕಳೆದುಕೊಂಡರು. ಬರ ಬರುತ್ತಾ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲವಾದರು. ಸೌರವ್ ಗಂಗೂಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಆಡಿರುವ ಇರ್ಫಾನ್ ಪಠಾಣ್, ಭಾರತದ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ಗಳ ಸ್ಥಾನಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300ಕ್ಕೂ ಹೆಚ್ಚು ವಿಕೆಟ್ ಸಾಧನೆ ಮಾಡಿರುವ ಪಠಾಣ್, ಐಪಿಎಲ್‌ನಲ್ಲೂ ತಮ್ಮ ಛಾಪನ್ನು ಒತ್ತಿದ್ದರು. 2007ರಲ್ಲಿ ನಡೆದ ಚೊಚ್ಚಲ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಗೆಲುವಿನಲ್ಲಿ ಪಠಾಣ್ ನಿರ್ಣಾಯಕ ಪಾತ್ರ ವಹಿಸಿದ್ದರು. ಶಾಹೀದ್ ಆಫ್ರಿದಿ ಸೇರಿದಂತೆ ಮೂರು ಪ್ರಮುಖ ವಿಕೆಟ್‌ಗಳನ್ನು ಪಡೆದು ಭಾರತಕ್ಕೆ ಐತಿಹಾಸಿಕ ಗೆಲುವನ್ನು ಒದಗಿಸಿಕೊಟ್ಟರು. ಅಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾದರು. ಮಿಸ್ ಮಾಡದೇ ನೋಡಿ; ಇರ್ಫಾನ್ ಪಠಾಣ್ ಕ್ರಿಕೆಟ್ ಪಯಣ
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37Cy8ct