ರೋಹಿತ್ ಶರ್ಮಾ, ಮೊಹಮ್ಮದ್ ಶಮಿ ವಾಪಸ್; ಸಂಜು ಸ್ಯಾಮ್ಸನ್‌ಗೆ ಗೇಟ್ ಪಾಸ್

ಮುಂಬಯಿ: ಉಪನಾಯಕ ಭಾನುವಾರ ನ್ಯೂಜಿಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಲಾದ 16 ಸದಸ್ಯರ ಭಾರತ ಟಿ20 ತಂಡಕ್ಕೆ ವಾಪಸಾಗಿದ್ದಾರೆ. ಆದರೆ, ಎಂಎಂಸ್‌ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಎಳೆಯ ವಿಕೆಟ್ ಕೀಪರ್ ಸಂಜು ಸ್ಯಾಮ್ಸ‌ನ್‌ ಅವರನ್ನು ಟಿ20 ತಂಡದಿಂದ ಕೈಬಿಟ್ಟಿದೆ. ಪ್ರವಾಸಿ ಶ್ರೀಲಂಕಾ ವಿರುದ್ಧ ಜನವರಿ 10ರಂದು ಪುಣೆಯಲ್ಲಿ ನಡೆದ 3ನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಸ್ಯಾಮ್ಸನ್ ಕೇವಲ 6 ರನ್ ಗಳಿಸಿದ್ದರು. ನಾಲ್ಕು ವರ್ಷಗಳ ಬಳಿಕ ಅಂದರೆ 73 ಪಂದ್ಯಗಳ ಬಳಿಕ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಭಾರತ ತಂಡ ಜನವರಿ 20ರಂದು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಐದು ಟಿ20, ಮೂರು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಲಿದೆ. ಜನವರಿ 24ರಂದು ಆಕ್ಲೆಂಡ್‌ನಲ್ಲಿ ಸರಣಿ ಆರಂಭಗೊಳ್ಳಲಿದೆ. ಭಾನುವಾರ ಕೇವಲ ಟಿ20 ತಂಡವನ್ನು ಪ್ರಕಟಿಸಲಾಗಿದೆ. ಏಕದಿನ ಮತ್ತು ಟೆಸ್ಟ್ ಸರಣಿಗಳಿಗೆ ತಂಡ ಪ್ರಕಟಿಸಲಾಗಿಲ್ಲ. ನ್ಯೂಜಿಲೆಂಡ್ ಪ್ರವಾಸಕ್ಕೆ ಲಭ್ಯವಾಗಬಹುದೆಂದು ನಿರೀಕ್ಷಿಸಲಾಗಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರ ಫಿಟ್ನೆಸ್ ಪರೀಕ್ಷೆ ಸಾಬೀತಾಗದ ಕಾರಣ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಲಿಲ್ಲ. ರೋಹಿತ್ ಶರ್ಮಾ ಜೊತೆಗೆ ವಿಶ್ರಾಂತಿಯಲ್ಲಿದ್ದ ಕೂಡಾ ಕಮ್‌ಬ್ಯಾಕ್ ಮಾಡಿದ್ದಾರೆ. ಇನ್ನುಳಿದಂತೆ ಲಂಕಾ ವಿರುದ್ಧದ ಟಿ20 ತಂಡದಲ್ಲಿ ಯಾವುದೇ ಬದಲವಾವಣೆ ತರಲಾಗಿಲ್ಲ. ತಂಡ ಇಂತಿದೆ: 1. ವಿರಾಟ್ ಕೊಹ್ಲಿ (ನಾಯಕ), 2. ರೋಹಿತ್ ಶರ್ಮಾ (ಉಪನಾಯಕ) 3. ಕೆಎಲ್ ರಾಹುಲ್ 4. ಶಿಖರ್ ಧವನ್ 5. ಶ್ರೇಯಸ್ ಅಯ್ಯರ್ 6. ರಿಷಬ್ ಪಂತ್ (ವಿಕೆಟ್ ಕೀಪರ್) 7. ಕುಲ್‌ದೀಪ್ ಯಾದವ್ 8. ಯುಜ್ವೇಂದ್ರ ಚಹಲ್ 9. ಮನೀಶ್ ಪಾಂಡೆ 10. ಶಿವಂ ದುಬೆ 11. ಜಸ್ಪ್ರೀತ್ ಬುಮ್ರಾ 12. ಶಾರ್ದೂಲ್ ಠಾಕೂರ್ 13. ನವದೀಪ್ ಸೈನಿ 14. ವಾಷಿಂಗ್ಟನ್ ಸುಂದರ್ 15. ರವೀಂದ್ರ ಜಡೇಜಾ 16. ಮೊಹಮ್ಮದ್ ಶಮಿ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/35OXZwx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...