ಉಕ್ರೇನ್‌ ವಿಮಾನ ಹೊಡೆದುರುಳಿಸಿದ್ದು ನಾವೇ, ಇದು ಅಚಾತುರ್ಯದಿಂದ ಆಗಿದ್ದು: ಇರಾನ್‌ ತಪ್ಪೊಪ್ಪಿಗೆ

ಟೆಹರಾನ್‌: ಕಳೆದ ಬುಧವಾರ ಬೆಳಗ್ಗೆ ಇರಾನ್ ಸಂಭವಿಸಿದ ಭೀಕರ ವಿಮಾನ ಅಪಘಾತಕ್ಕೆ ಕಾರಣ ಗೊತ್ತಾಗಿದೆ. ಈ ವಿಮಾನವನ್ನು ಕ್ಷಿಪಣಿಯಿಂದ ಹೊಡೆದುರುಳಿಸಿದ್ದು ನಾವೇ ಎಂದು ಇರಾನ್ ಒಪ್ಪಿಕೊಂಡಿದೆ. ಅಲ್ಲದೇ, ಇದು ಅಚಾತುರ್ಯದಿಂದ ಆಗಿದ್ದು ಎಂದೂ ಹೇಳಿದೆ. ಘಟನೆಯಲ್ಲಿ ಮೃತಪಟ್ಟ ಕುಟುಂಬದವರನ್ನು ಕ್ಷಮೆ ಕೋರುತ್ತೇವೆ ಎಂದು ಸೇನಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇರಾನ್‌ನ ಅತ್ಯುನ್ನತ ಸೇನಾ ದಂಡನಾಯಕ ಖಾಸಿಮ್‌ ಸುಲೇಮಾನಿ ಅಮೆರಿಕ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ನಂತರ ಉಭಯ ದೇಶಗಳ ನಡುವೆ ಬಿಕ್ಕಟ್ಟು ಉಲ್ಬಣಿಸಿದೆ. ಅಮೆರಿಕ ನೆಲೆಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಇರಾನ್ ಎಚ್ಚರಿಸಿದ್ದು, ಬುಧವಾರ ಕ್ಷಿಪಣಿ ದಾಳಿ ಕೂಡ ನಡೆಸಿತ್ತು. ಆ ಸಂದರ್ಭದಲ್ಲಿಯೇ ವಿಮಾನ ಕೂಡ ಕ್ಷಿಪಣಿ ದಾಳಿಗೆ ನೆಲಕ್ಕುರುಳಿದೆ. ಬುಧವಾರ ಬೆಳಗ್ಗೆ ಟೆಹರಾನ್‌ನಿಂದ ವಿಮಾನ ಟೇಕಾಫ್‌ ಆಗುತ್ತಿದ್ದಂತೆ ಅಪಘಾತಕ್ಕೀಡಾಯಿತು. ವಿಮಾನದಲ್ಲಿ ಇದ್ದ 167 ಪ್ರಯಾಣಿಕರು ಮೃತಪಟ್ಟಿದ್ದರು. ಈ ಪೈಕಿ 63 ಮಂದಿ ಕೆನಡಾ ಪ್ರಯಾಣಿಕರಿದ್ದಾರೆ.


from India & World News in Kannada | VK Polls https://ift.tt/39WUdo4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...