ಮತ್ತೆ ರಣರಂಗವಾಯ್ತು ಜೆಎನ್‌ಯು..! ವಿದ್ಯಾರ್ಥಿಗಳ ಮೇಲೆ ಮುಸುಕುಧಾರಿ ಗೂಂಡಾಗಳ ದಾಳಿ..!

ಹೊಸ ದಿಲ್ಲಿ: ದಿಲ್ಲಿಯ ಜವಹರ್‌ಲಾಲ್ ನೆಹರೂ ವಿವಿ ಒಳಗೆ ವಿದ್ಯಾರ್ಥಿಗಳ ಬಡಿದಾಟ ನಡೆಯುತ್ತಿದೆ. ವಿವಿ ಒಳಗೆ ನುಗ್ಗಿರುವ ಗೂಂಡಾಗಳು ವಿದ್ಯಾರ್ಥಿಗಳನ್ನು ಥಳಿಸಿದ್ಧಾರೆ ಎಂಬ ಆರೋಪ ಕೇಳಿ ಬಂದಿದೆ. ವಿವಿ ಸಂಘಟನೆ ನಾಯಕ ಸೇರಿದಂತೆ ಹಲವು ವಿದ್ಯಾರ್ಥಿಗಳನ್ನು ಗೂಂಡಾಗಳು ಥಳಿಸಿದ್ಧಾರೆ ಎಂದು ಆರೋಪಿಸಲಾಗಿದೆ. ಭಾನುವಾರ ರಾತ್ರಿ ನಡೆದ ಈ ಘಟನೆ ಭಾರೀ ವಿವಾದವನ್ನು ಹುಟ್ಟು ಹಾಕಿದೆ. ವಿವಿ ಹೊರಭಾಗದಲ್ಲಿ, ಗೇಟ್‌ ಮುಂಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳ ಕಿತ್ತಾಟವಾದ ಕಾರಣ, ವಿವಿ ಒಳ ಪ್ರವೇಶಿಸಲು ಪೊಲೀಸರಿಗೆ ಅನುಮತಿ ಸಿಕ್ಕಿಲ್ಲ. ಈ ನಡುವೆ, ವಿವಿ ಒಳಗೆ ನುಗ್ಗಿರೋ ಗೂಂಡಾಗಳಿಗೆ ಎಬಿವಿಪಿ ನಂಟಿದೆ ಎಂದು ವಿದ್ಯಾರ್ಥಿ ಸಂಘಟನೆ ಆರೋಪಿಸಿದೆ. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಮೇಲೂ ನಡೆದಿದೆ ಎಂದು ವಿದ್ಯಾರ್ಥಿ ಸಂಘಟನೆ ಆರೋಪಿಸಿದೆ. ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಆರೋಪವನ್ನು ಎವಿಬಿಪಿ ಸರಾಸಗಟಾಗಿ ತಳ್ಳಿ ಹಾಕಿದೆ. ಘಟನೆಗೆ ಎಡಪಂಥೀಯ ಸಿದ್ದಾಂತವನ್ನು ನಂಬುವ ವಿದ್ಯಾರ್ಥಿ ಸಂಘಟನೆಗಳೇ ಇದಕ್ಕೆಲ್ಲಾ ಕಾರಣ ಎಂದು ಆಪಾದಿಸಿದೆ. ಈವರೆಗೆ 7 ಆಂಬುಲೆನ್ಸ್‌ಗಳನ್ನು ವಿವಿ ಒಳಗೆ ಕಳುಹಿಸಲಾಗಿದೆ. 10 ಆಂಬುಲೆನ್ಸ್‌ಗಳನ್ನು ಕಾಯ್ದಿರಿಸಲಾಗಿದೆ. ದಿಲ್ಲಿ ಪೊಲೀಸರು ವಿವಿ ಪ್ರವೇಶ ದ್ವಾರದಲ್ಲೇ ಮೊಕ್ಕಾ ಹೂಡಿದ್ಧಾರೆ. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈ ಘಟನೆಗೆ ಆಘಾತ ವ್ಯಕ್ತಪಡಿಸಿದ್ಧಾರೆ. ಪೊಲೀಸರು ಈ ಕೂಡಲೇ ಹಿಂಸಾಚಾರ ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ಧಾರೆ.


from India & World News in Kannada | VK Polls https://ift.tt/2Fn36cI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...