ಕಾಶ್ಮೀರ ಕಣಿವೆಯಲ್ಲಿ ಉಗ್ರ ನಾಯಕ ಖಾನ್ ಮಟಾಷ್..! ಭಯೋತ್ಪಾದಕರಿಗೆ ಸಾಥ್ ನೀಡ್ತಿದ್ದ ಪೊಲೀಸ್ ಅಧಿಕಾರಿ ಅರೆಸ್ಟ್‌..!

ಶ್ರೀನಗರ (ಜಮ್ಮು-ಕಾಶ್ಮೀರ): ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್‌ ಬಳಿಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹಿಜ್ಬುಲ್‌ ಕಮಾಂಡರ್‌ ಹಮ್ಮದ್‌ ಖಾನ್‌ನನ್ನು ಹತ್ಯೆಗೈಯಲಾಗಿದೆ. ಖಾನ್‌ ಜತೆಗೆ ಮತ್ತಿಬ್ಬರು ಉಗ್ರರನ್ನು ಕೂಡ ಹೊಡೆದುರುಳಿಸಲಾಗಿದೆ. 2017ರಲ್ಲಿ ಕಣಿವೆಯಲ್ಲಿ ಹಿಜ್ಬುಲ್‌ ಸಂಘಟನೆಯ ಮುಂದಾಳತ್ವ ವಹಿಸಿದ್ದ ಸಬ್ಜರ್‌ ಅಹ್ಮದ್‌ನನ್ನು ಭಾರತೀಯ ಸೇನಾ ಪಡೆಗಳು ಹತ್ಯೆಗೈದಿದ್ದವು. ಬಳಿಕ ಹಮ್ಮದ್‌ ಖಾನ್‌ಗೆ ಕಮಾಂಡರ್‌ ಪಟ್ಟ ನೀಡಿ ಭಯೋತ್ಪಾದನೆ ವಿಸ್ತರಿಸುವ ಹೊಣೆ ವಹಿಸಲಾಗಿತ್ತು. ಖಾನ್‌ ಹತ್ಯೆಯಿಂದಾಗಿ ಅನಂತ್‌ನಾಗ್‌, ಬುಡ್ಗಾಮ್‌, ಗಂದೇರ್‌ಬಾಲ್‌ ಹಾಗೂ ಪುಲ್ವಾಮದ ಕೆಲವೆಡೆ ಸ್ಥಳೀಯ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಇತ್ತೀಚೆಗೆ ಮೂವರು ಹಿಜ್ಬುಲ್‌ ಮುಜಾಹಿದೀನ್‌ ಉಗ್ರರನ್ನು ಭದ್ರತಾ ಪಡೆಗಳು ಸೆರೆಹಿಡಿದಿದ್ದವು. ಇವರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಉಗ್ರರಿಗೆ ಸಾಥ್‌ ನೀಡಿದ ಆರೋಪದ ಮೇರೆಗೆ ಡಿಎಸ್‌ಪಿ ದೇವಿಂದರ್‌ ಸಿಂಗ್‌ ಅವರನ್ನು ಪೊಲೀಸರು ಬಂಧಿಸಿದ್ದರು.


from India & World News in Kannada | VK Polls https://ift.tt/39Vt44S

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...