ಜೈಲಲ್ಲಿದ್ದಾಗ ನೈತಿಕ ಬೆಂಬಲ ! ದೆಹಲಿಯಲ್ಲಿ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾದ ಡಿಕೆಶಿ

ಹೊಸದೆಹಲಿ: ಐಟಿ ವಿಚಾರಣೆಯ ವೇಳೆ ಪೊಲೀಸ್‌ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ನೈತಿಕ ಬೆಂಬಲ ನೀಡಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಮಾಜಿ ಸಚಿವ ಡಿ.ಕೆ ಶಿವಕುಮಾರ್ ದೆಹಲಿಯಲ್ಲಿ ಭಾನುವಾರ ಭೇಟಿಯಾಗಿ ಧನ್ಯವಾದ ಸಲ್ಲಿಸಿದ್ದಾರೆ. ಆದಾಯಕ್ಕೂ ಮೀರಿದ ಆಸ್ತಿ ಪ್ರಕರಣ ಹಾಗೂ ತೆರಿಗೆ ವಂಚನೆ ಸಂಬಧಿಸಿದಂತೆ ಡಿ.ಕೆ ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿಯಾಗಿತ್ತು. ಬಳಿಕ ದೆಹಲಿಯಲ್ಲಿ ಐಟಿ ಅಧಿಕಾರಿಗಳು ವಿಚಾರಣೆಗಾಗಿ ಡಿಕೆಶಿಯವರನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ 13 ದಿನಗಳ ಕಾಲ ಡಿಕೆಶಿ ದೆಹಲಿಯ ತುಘಲಕ್‌ ಪೊಲೀಸ್‌ ಠಾಣೆ ಹಾಗು ಖಾನ್‌ ಮಾರ್ಕೆಟ್‌ ಪೊಲೀಸ್‌ ಠಾಣೆಯ ಕಸ್ಟಡಿಯಲ್ಲಿದ್ದರು. ಬಂಧನದಲ್ಲಿದ್ದ ಸಂದರ್ಭದಲ್ಲಿ ಠಾಣೆಯ ಇಬ್ಬರು ಅಧಿಕಾರಿಗಳಾದ ಗೋವಿಂದ್‌ ಚೌಹಾಣ್ ಹಾಗೂ ಸುನೀಲ್ ಕುಮಾರ್‌ ನೈತಿಕ ಬೆಂಬಲ ಹಾಗೂ ಸಹಕಾರ ನೀಡಿದ್ದರಂತೆ. ಈ ಕಾರಣಕ್ಕಾಗಿ ಭಾನುವಾರ ದೆಹಲಿಯಲ್ಲಿ ಇಬ್ಬರು ಪೊಲೀಸ್ ಆಧಿಕಾರಿಗಳನ್ನು ಭೇಟಿ ಮಾಡಿದ ಡಿಕೆಶಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಹಾಗೂ ತೆರಿಗೆ ವಂಚನೆ ಆರೋಪದಡಿಯಲ್ಲಿ ಡಿಕೆಶಿ ವಿರುದ್ಧ ಐಟಿ ದಾಳಿ ನಡೆದಿತ್ತು. ಬಳಿಕ ಅಕ್ರಮ ಹಣಕಾಸುವ ವರ್ಗಾವಣೆ ಆರೋಪದಡಿಯಲ್ಲಿ ಡಿಕೆಶಿ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿ ಬಂಧಿನಕ್ಕೆ ಒಳಪಡಿಸಿತ್ತು. 49 ದಿನಗಳ ಕಾಲ ಡಿಕೆಶಿ ದೆಹಲಿಯ ತಿಹಾರ್‌ ಜೈಲಿನಲ್ಲಿ ಬಂಧನಲ್ಲಿದ್ದರು. ಬಳಿಕ ದೆಹಲಿ ಹೈ ಕೋರ್ಟ್ ಜಾಮೀನು ನೀಡಿತ್ತು.


from India & World News in Kannada | VK Polls https://ift.tt/30T2dlO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...