'ಕಾಫಿ ವಿತ್ ಕರಣ್' ವಿವಾದದ ಬಗ್ಗೆ ಕೊನೆಗೂ ಬಾಯಿ ತೆರೆದ ಹಾರ್ದಿಕ್ ಪಾಂಡ್ಯ

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಕೊನೆಗೂ '' ವಿವಾದದ ಬಗ್ಗೆ ಕೊನೆಗೂ ಬಾಯಿ ತೆರೆದಿದ್ದಾರೆ. ಅಲ್ಲದೆ ಓರ್ವ ಕ್ರಿಕೆಟಿಗನಾಗಿ ಇಂತಹ ವಿವಾದಗಳನ್ನು ಬಯಸುವುದಿಲ್ಲ ಎಂದಿದ್ದಾರೆ. ಖಾಸಗಿ ಟಿವಿ ಚಾನೆಲ್‌ವೊಂದರಲ್ಲಿ ಬಾಲಿವುಡ್ ನಿರ್ಮಾಪಕ ಹಾಗೂ ನಿರೂಪಕ ಕರಣ್ ಜೋಹನ್ ನಡೆಸಿಕೊಟ್ಟ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಸಿಕ್ಕಿಬಿದಿದ್ದರು. ಬಳಿಕ ತಾತ್ಕಾಲಿಕ ನಿಷೇಧಕ್ಕೊಳಗಾದ ಹಾರ್ದಿಕ್ ಪಾಂಡ್ಯ ಮೇಲೆ ಬಿಸಿಸಿಐ ದಂಡ ವಿಧಿಸಿತ್ತು. "ನಾವು ಕ್ರಿಕೆಟಿಗರಾಗಿ ಮುಂದೇನು ನಡೆಯಲಿದೆ ಎಂಬುದರ ಬಗ್ಗೆ ಅರಿವು ಇರುವುದಿಲ್ಲ. ಚೆಂಡು ನನ್ನ ಕೋರ್ಟ್‌ನಲ್ಲಿರಲಿಲ್ಲ. ಅದು ಬೇರೊಬ್ಬರ ಕೋರ್ಟ್‌ನಲ್ಲಿದ್ದು, ಅವರೇ ಶಾಟ್ ಹೊಡೆಯಬೇಕಿತ್ತು. ಅದು ನೀವು ಇರಲು ಬಯಸದ ಅತ್ಯಂತ ಕೆಟ್ಟ ಪರಿಸ್ಥಿತಿಯಾಗಿದೆ" ಎಂದರು. ಅಲ್ಲಿಂದ ಬಳಿಕ ಹಾರ್ದಿಕ್ ಪಾಂಡ್ಯ ಕ್ರಿಕೆಟ್‌ಗೆ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದರು. ಆದರೆ ಪದೇ ಪದೇ ಗಾಯದ ಸಮಸ್ಯೆ ಕಾಡಿದ್ದರಿಂದ ಟೀಮ್ ಇಂಡಿಯಾದಿಂದ ದೂರವುಳಿಯಬೇಕಾಯಿತು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬೆನ್ನು ನೋವಿಗೊಳಗಾಗಿರುವ ಹಾರ್ದಿಕ್ ಪಾಂಡ್ಯ ಶಸ್ತ್ರ ಚಿಕಿತ್ಸೆಗೊಳಗಾದರು. ಇದೀಗ ಪುನಶ್ಚೇತನ ಹಂತದಲ್ಲಿರುವ ಪಾಂಡ್ಯ, ಕಮ್‌ಬ್ಯಾಕ್ ಗುರಿಯಾಗಿಸಿದ್ದಾರೆ. ಪ್ರತಿ ಬಾರಿಯೂ ಇಂತಹ ಪರಿಸ್ಥಿತಿಗಳು ಎದುರಾದಾಗ ಕಮ್ ಬ್ಯಾಕ್ ಮಾಡಲು ಸಾಧ್ಯವಾಗಿರುವುದು ನನ್ನ ಅದೃಷ್ಟವಾಗಿದೆ. ಮಗದೊಂದು ಬಾರಿ ಪುನರಾಗಮನವನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದರು. ಮುಂಬರುವ ನ್ಯೂಜಿಲೆಂಡ್ ಸರಣಿಗೆ ಪಾಂಡ್ಯ ಕಮ್‌ಬ್ಯಾಕ್ ಮಾಡುವ ಸಾಧ್ಯತೆಯಿದೆ. ಇದಕ್ಕೂ ಮೊದಲು ಭಾರತ ಎ ತಂಡದಲ್ಲಿ ಕಾಣಿಸಿಕೊಳ್ಳಲಿರುವ ಪಾಂಡ್ಯ, ನ್ಯೂಜಿಲೆಂಡ್ ಎ ತಂಡದ ವಿರುದ್ಧ ಏಕದಿನ ಸರಣಿಯಲ್ಲಿ ಭಾಗವಹಿಸಲಿದ್ದಾರೆ. ಇದು ಹಾರ್ದಿಕ್ ಪಾಂಡ್ಯ ಪಾಲಿಗೆ ಫಿಟ್ನೆಸ್ ಪರೀಕ್ಷೆಯಾಗಿರಲಿದೆ. ಜಸ್ಪ್ರೀತ್ ಬುಮ್ರಾ ತರಹನೇ ಹಾರ್ದಿಕ್ ಪಾಂಡ್ಯ ಕೂಡಾ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಲಿರಲಿಲ್ಲ. ಇದರ ಬದಲು ತಮ್ಮದೇ ಖಾಸಗಿ ತರಬೇತುದಾರರ ಅಡಿಯಲ್ಲಿ ಅಭ್ಯಾಸಿಸಿದ್ದರು. ಈ ಹಿನ್ನೆಲೆಯಲ್ಲಿ ಪಾಂಡ್ಯ ಫಿಟ್ನೆಸ್ ಸಾಧಿಸಿದ್ದಾರೆಯೇ ಎಂಬುದರ ಬಗ್ಗೆ ಪೂರ್ಣ ಚಿತ್ರಣ ಲಭಿಸಿಲ್ಲ. ಏತನ್ಮಧ್ಯೆ ಹಾರ್ದಿಕ್ ಪಾಂಡ್ಯ ಹೊಸ ವರ್ಷದಂದು ಸೆರ್ಬಿಯಾ ಮೂಲದ ನಟಿ ನತಾಶಾ ಸ್ಟ್ಯಾನ್ಕೊವಿಚ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/35BD00f

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...