‘ಪ್ರಯತ್ನಿಸಿದೆ, ಆದರೆ ಭದ್ರತೆ ಒದಗಿಸಲಾಗಿಲ್ಲ’: ಜೆಎನ್‌ಯು ಹಾಸ್ಟೆಲ್‌ ವಾರ್ಡನ್‌ ರಾಜೀನಾಮೆ

ಹೊಸದಿಲ್ಲಿ: ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು) ಭಾನುವಾರ ರಾತ್ರಿ ಮುಸುಕುಧಾರಿಗಳ ದಾಳಿಗೆ ಗುರಿಯಾಗಿದೆ. ಕಬ್ಬಿಣದ ರಾಡ್‌, ಸುತ್ತಿಗೆ, ಗಾಜಿನ ಬಾಟಲ್‌ಗಳು, ಬಡಿಗೆಯಿಂದ ದುಷ್ಕರ್ಮಿಗಳು ಸಾಬರಮತಿ ಹಾಸ್ಟೆಲ್‌ ಜಖಂಗೊಳಿಸಿದ್ದಾರೆ. ಭಯಭೀತಗೊಂಡ ಇಬ್ಬರು ವಿದ್ಯಾರ್ಥಿಗಳು ಮೊದಲ ಮಹಡಿಯಿಂದ ಹಾರಿ ಕಾಲು ಮುರಿದುಕೊಂಡಿದ್ದಾರೆ. ಈ ಎಲ್ಲಾ ಘಟನೆಗಳ ಬೆನ್ನಿಗೆ ಹಾಸ್ಟೆಲ್‌ನ ಹಿರಿಯ ವಾರ್ಡನ್‌ ರಾಜೀನಾಮೆ ನೀಡಿದ್ದಾರೆ. 'ಪ್ರಯತ್ನದ ನಂತರವೂ ವಿದ್ಯಾರ್ಥಿಗಳಿಗೆ ಭದ್ರತೆ ಒದಗಿಸಲಾಗಲಿಲ್ಲ' ಎಂಬುದಾಗಿ ಅವರು ರಾಜೀನಾಮೆ ಪತ್ರದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. ಸಾಬರಮತಿ ಜೆಎನ್‌ಯು ಕ್ಯಾಂಪಸ್‌ನಲ್ಲಿರುವ ಪ್ರಮುಖ ಹಾಸ್ಟೆಲ್ ಆಗಿದ್ದು, ಸುಮಾರು 400 ವಿದ್ಯಾರ್ಥಿಗಳಿಗೆ ಇಲ್ಲಿ ಉಳಿದುಕೊಂಡಿದ್ದರು. ದಾಳಿ ವೇಳೆ ಹಾಸ್ಟೆಲ್‌ಗೆ ಬಾರಿ ಹಾನಿಯಾಗಿದ್ದು, ಎಲ್ಲಾ ಮಹಡಿಯಲ್ಲೂ ಪುಡಿಯಾದ ಗಾಜುಗಳು, ಮುರಿದ ಬಾಗಿಲು, ಕಿಟಕಿ, ಪೀಠೋಪಕರಣಗಳು ಚೆಲ್ಲಾಪಿಲಿಯಾಗಿ ಬಿದ್ದಿವೆ. ಘಟನೆ ಬೆನ್ನಿಗೆ ವಿದ್ಯಾರ್ಥಿಗಳ ಡೀನ್‌ಗೆ ಸಾಬರಮತಿ ಹಾಸ್ಟೆಲ್‌ನ ವಾರ್ಡನ್‌ ಆರ್‌ ಮೀನಾ ರಾಜೀನಾಮೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅವರು, “ನಾವು ಪ್ರಯತ್ನಪಟ್ಟೆವು, ಹೀಗಿದ್ದೂ ಹಾಸ್ಟೆಲ್‌ಗೆ ಭದ್ರತೆ ನೀಡಲಾಗಲಿಲ್ಲ,” ಎಂದು ಅವರು ವಿವರಿಸಿದ್ದಾರೆ.

ಭಾನುವಾರ ಸಂಜೆ ಸುಮಾರು ಮೂರು ಗಂಟೆಗಳ ಕಾಲ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಸಂಘರ್ಷ ಏರ್ಪಟ್ಟಿತ್ತು. ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಮುಸುಕುಧಾರಿಗಳು ಯಾವುದೇ ಅಡೆತಡೆಯಿಲ್ಲದೆ ಓಡಾಡುತ್ತಾ ಸಿಕ್ಕ ಸಿಕ್ಕ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿದ್ದರು. ಪರಿಣಾಮ ವಿದ್ಯಾರ್ಥಿ ನಾಯಕಿ ಐಷ್‌ ಘೋಷ್‌ ಸೇರಿ 35 ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಗಾಯಗೊಂಡಿದ್ದರು. ಜೊತೆಗೆ ಕ್ಯಾಂಪಸ್‌ನ ಆಸ್ತಿಪಾಸ್ತಿಗೂ ಹಾನಿ ಮಾಡಿದ್ದರು. ಈ ಘಟನೆಗೆ ದೇಶದಾದ್ಯಂತ ಖಂಡನೆ ವ್ಯಕ್ತವಾಗಿದೆ.


from India & World News in Kannada | VK Polls https://ift.tt/2FqHJHs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...