ಪ್ರಧಾನಿ ಮೋದಿ ಭಾಷಣ ಮಕ್ಕಳಿಗೆ ಉಪಯುಕ್ತವಾಗಿದೆ: ಸಿದ್ಧಲಿಂಗ ಶ್ರೀ

ತುಮಕೂರು: ಪ್ರಧಾನಿ ಮಕ್ಕಳ ಕುರಿತಾಗಿ ಪ್ಲಾಸ್ಟಿಕ್ ನಿಷೇಧ, ಬಯಲು ಶೌಚ ಮುಕ್ತ, ಜಲ ಸಂರಕ್ಷಣೆ ಕುರಿತು ಮಾತನಾಡಿದ್ದು ತುಂಬಾ ಉಪಯುಕ್ತವಾಗಿದೆ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮಿಜಿ ಪ್ರತಿಕ್ರಿಯಿಸಿದರು. ಸಿದ್ಧಗಂಗಾ ಮಠದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ಮಠದಲ್ಲಿ ನಡೆದ ಮೋದಿ ಅವರ ಕಾರ್ಯಕ್ರಮ ಯಶಸ್ವಿಯಾಗಿದೆ. ಪ್ರಧಾನಿ ಮೋದಿಯವರೇ ಸ್ವಪ್ರೇರಣೆಯಿಂದ ಬಂದು ಪೂಜ್ಯರ ಗದ್ದುಗೆ ದರ್ಶನ ಪಡೆದಿದ್ದಾರೆ. ಮಕ್ಕಳಿಗೆ ಉಪಯುಕ್ತವಾಗುವ ರೀತಿಯಲ್ಲಿ ಪಾಸ್ಟಿಕ್ ನಿಷೇಧ, ಬಯಲು ಶೌಚಾಲಯ ಮುಕ್ತ ಕನಸು, ಜಲಸಂರಕ್ಷಣೆ ಕುರಿತು ಮಾತನಾಡಿದ್ದಾರೆ. ಜತೆಗೆ ನಾಡಿನ ಸಂತರು ಮೂರು ಸಂಕಲ್ಪ ತೊಟ್ಟು ದೇಶದ ಬದಲಾವಣೆಗೆ ಶ್ರಮಿಶಬೇಕು ಎಂದು ಕರೆ ಕೊಟ್ಟಿದ್ದಾರೆ ಎಂದರು. ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ಇತ್ತು ಎಂದು ಮಾಧ್ಯಮದಲ್ಲಿ ತಪ್ಪಾಗಿ ಪ್ರಸಾರವಾಗಿತ್ತು. ಪ್ರಧಾನಿ ಕಾರ್ಯಕ್ರಮದ ಪಟ್ಟಿಯಲ್ಲಾಗಲಿ, ಮಠದ ವತಿಯಿಂದಾಗಲಿ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಿರಲಿಲ್ಲ. ಹಾಗಾಗಿ ಮಕ್ಕಳೊಂದಿಗೆ ಮಾತಾಡಿಲ್ಲ ಎಂಬ ವಿಚಾರ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಧಾನಿ ಮೋದಿಯವರಿಗೆ ಸಮಯದ ಅಭಾವ ಇತ್ತು. ಹಾಗಾಗಿ ಚುಟುಕಾಗಿ ಮಾತನಾಡಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಮಾತನಾಡುವವರಿದ್ದರು. ಸಮಯದ ಅಭಾವದಿಂದ ಸಾಧ್ಯವಾಗಲಿಲ್ಲ ಎಂದು ತಿಳಿಸಿದರು. ಬೇಬಿ ಶ್ರೀ ಎಂಬ ಬಾಲನಟಿ ಪ್ರಧಾನಿ ಮೋದಿಯವರಿಗೆ ಪ್ರಶ್ನೆ ಕೇಳುವ ಇಂಗಿತ ವ್ಯಕ್ತಡಿಸಿದ್ದು ನಿಜ. ಆದರೆ, ನಾವು ಅವರಿಗೆ ಅವಕಾಶ ನೀಡುತ್ತೆವೆ ಎನ್ನುವುದನ್ನು ಖಾತ್ರಿ ಮಾಡಿರಲಿಲ್ಲ. ಪ್ರಶ್ನೆ ಕೇಳುವ ಸಂದರ್ಭ ಬಂದರೇ ಚೀಟಿ ಕೊಟ್ಟರೆ ಅನುಕೂಲ ಮಾಡಿಕೊಡುತ್ತೆವೆ ಎಂದಿದ್ದೆ ಅಷ್ಟೇ ಹೊರತು ಪ್ರತ್ಯೇಕವಾಗಿ ಸಂವಾದ ಕಾರ್ಯಕ್ರಮ ಏರ್ಪಡಿಸಿರಲಿಲ್ಲ ಎಂದು ಒತ್ತಿ ಹೇಳಿದರು.


from India & World News in Kannada | VK Polls https://ift.tt/2ZS9XEf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...