ಕೋಲ್ಕತ: ಬಂದ್ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಹೆಲ್ಮೆಟ್ ಹಾಕಿಕೊಂಡೇ ಬಸ್ ಚಲಾಯಿಸುವ ಮೂಲಕ ಸರಕಾರಿ ಬಸ್ ಡ್ರೈವರ್ ಗಮನ ಸೆಳೆದಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯ ಸರಕಾರಿಸಾರಿಗೆ ಸಂಸ್ಥೆಯಾದ 'ಉತ್ತರ ಬಂಗಾಳ ರಾಜ್ಯ ಸಾರಿಗೆ ಸಂಸ್ಥೆ (ಎನ್‌ಬಿಎಸ್‌ಟಿಸಿ)ಗೆ ಸೇರಿದ ಬಸ್ ಚಾಲಕ ಸಿಲಿಗುರಿಯಲ್ಲಿ ಹೆಲ್ಮೆಟ್ ಹಾಕಿಕೊಂಡೇ ಬಸ್ ಚಲಾಯಿಸಿದ್ದಾರೆ. ಪ್ರತಿಭಟನಾಕಾರರು ಎಲ್ಲಿ ಕಲ್ಲು ಹೊಡೆಯುತ್ತಾರೋ ಎಂಬ ಭಯದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೀಗೆ ಮಾಡಿದ್ದಾರೆ. ಶ್ಚಿಮ ಬಂಗಾಳದಲ್ಲಿ ಬುಧವಾರ ಬೆಳಗಿನಿಂದಲೇ ಬಂದ್ ಬಿಸಿ ಜೋರಾಗಿದೆ. ಪ್ರತಿಭಟನಾಕಾರರು ರಾಜ್ಯದ ಹಲವೆಡೆ ರೈಲು ತಡೆ ನಡೆಸಿದ್ದು, ಬಂದ್ ಆಚರಿಸುತ್ತಿದ್ದಾರೆ. ಹೌರಾ ಹಾಗೂ ಕಂಚರಾಪಾರಾಗಳಲ್ಲಿ ಬುಧವಾರ ಬೆಳಗ್ಗೆಯೇ ರೈಲು ತಡೆದ ಪ್ರತಿಭಟನಾಕಾರರು ಭಾರತ್ ಬಂದ್ ನಡೆಸಿದ್ದಾರೆ. ಉತ್ತರ ಪ್ರದೇಶದಾದ್ಯಂತ ಬಂದ್ ಬಿಸಿ ಜೋರಾಗಿದೆ.
from India & World News in Kannada | VK Polls https://ift.tt/36yTQ0X