ಕೊಳ್ಳೆಗಾಲ: ವಿಕಾರಿ ಸಂವತ್ಸರದ ಮಾಘ ಮಾಸದ ಪೂರ್ಣಿಮೆಯಂದು ಆರಂಭಗೊಳ್ಳುವ ನೀಲಗಾರರ ಸಂಪ್ರದಾಯದಂತೆ ಜರಗುತ್ತದೆ. ಜ.10ರ ಶುಕ್ರವಾರ ಚಂದ್ರಮಂಡಲೋತ್ಸವದ ಮೂಲಕ ಜಾತ್ರೆ ಆರಂಭಗೊಂಡು ಜ.15ರ ಬುಧವಾರ ಮುತ್ತುರಾಯನ ಸೇವೆಯೊಂದಿಗೆ ಸಮಾಪ್ತಿಗೊಳ್ಳುತ್ತದೆ. ರಾಜ್ಯದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಇಲ್ಲಿಗೆ ಅಗಮಿಸಿ ತಮ್ಮ ಅರಿಕೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಜಾತ್ರೆಯ ವಿವರ: ಜ.10ರಂದು ಚಂದ್ರಮಂಡಲೋತ್ಸವ, ಜ 11ರಂದು ಹುಲಿ ವಾಹನೋತ್ಸವ, ಕಂಡಾಯ ಮತ್ತು ಪರಂಜ್ಯೋತಿ ಉತ್ಸವ, 12ರಂದು ರುದ್ರಾಕ್ಷಿ ಮಂಟಪೋತ್ಸವ ಹಾಗೂ ಮುಡಿ ಸೇವೆ, 13ರಂದು ಗಜವಾಹನೋತ್ಸವ, ಉಯ್ಯಾಲೋತ್ಸ, ಪಲ್ಲಕ್ಕಿ ಉತ್ಸವ, 14ರಂದು ಪಂಕ್ತಿ ಸೇವೆ, ಜ 15ರಂದು ಮುತ್ತುರಾಯನ ಸೇವೆ ನಡೆಯಲಿದೆ. ಮಾರ್ಗ ಯಾವುದು?: ಕೊಳ್ಳೇಗಾಲದಿಂದ ಸುಮಾರು 26 ಕಿ.ಮೀ ದೂರದಲ್ಲಿ ಕಾವೇರಿ ನದಿ ಬಲ ದಂಡೆಯ ಮೇಲೆ ಇದೆ. ಕೊಳ್ಳೇಗಾಲದಿಂದ ಸರಗೂರು, ಪಾಳ್ಯ ಗ್ರಾಮದ ಮಾರ್ಗವಾಗಿ ಚಿಕ್ಕಲ್ಲೂರು ಹಾಗೂ ಕೊಳ್ಳೇಗಾಲ ದಿಂದ ಸಿಂಗಾನಲ್ಲೂರು ಮಾರ್ಗ ದೊಡ್ಡಿದಂದವಾಡಿಗೆ ಹೋಗಿ ಇಕ್ಕಡಹಳ್ಳಿ ಪಾಳ್ಯ ಮಾರ್ಗವಾಗಿ ಚಿಕ್ಕಲ್ಲೂರಿಗೆ. ಬೆಂಗಳೂರು ಕಡೆಯಿಂದ ಬರುವವರು ಸತ್ತೇಗಾಲದ ಬಳಿ ಕ್ರಾಸ್ ಮಾಡಿದರೆ ಉಗನಿಯ ಮೂಲಕ ಪಾಳ್ಯ ಸೇರಿ ಕೊತ್ತನೂರು ಮಾರ್ಗವಾಗಿ ಚಿಕ್ಕಲ್ಲೂರಿಗೆ ಹೋಗಬಹುದು. ಮೈಸೂರು, ನರಸಿಪುರ, ಚಾಮರಾಜನಗರ, ಯಳಂದೂರು ಕಡೆಯಿಂದ ಬರುವವರಿಗೆ ಕೊಳ್ಳೇಗಾಲ ಬಸ್ ನಿಲ್ದಾಣದಿಂದ ಚಿಕ್ಕಲ್ಲೂರಿಗೆ ಹೋಗಲು 150 ಬಸ್‌ಗಳ ವ್ಯವಸ್ಥೆ ಇದೆ. ಈ ಬಾರಿ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿರುವುದರಿಂದ ಚಿಕ್ಕಲ್ಲೂರು ಕಡೆಗೆ ಹೋಗುವ ಜನರು ಬೆಂಗಳೂರು ರಸ್ತೆಯಲ್ಲಿ ತಾತ್ಕಾಲಿಕ ಬಸ್ ನಿಲ್ದಾಣದಿಂದ ಹೊರಡಬಹುದು.
from India & World News in Kannada | VK Polls https://ift.tt/2QFlZxO