ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ಇಂಗ್ಲೆಂಡ್‌ನ ವೇಗಿ ಜೋಫ್ರಾ ಆರ್ಚರ್‌ ಡೌಟ್‌!

ಕೇಪ್‌ಟನ್‌: ಆತಿಥೇಯ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅಚ್ಚರಿಯ ಸೋಲುಂಡ ತಂಡಕ್ಕೆ, ಇದೀಗ ಸರಣಿಯ 2ನೇ ಪಂದ್ಯದ ಆರಂಭಕ್ಕೂ ಮೊದಲೇ ಭಾರಿ ಆಘಾತ ಎದುರಾಗುವ ಸಾಧ್ಯತೆ ಇದೆ. ಇಂಗ್ಲೆಂಡ್‌ ತಂಡದ ಮುಖ್ಯ ವೇಗದ ಬೌಲರ್‌ ಮೊಣಕೈ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಜ.3ರಂದು ಇಲ್ಲಿ ಆರಂಭವಾಗಲಿರುವ 4 ಪಂದ್ಯಗಳ ಸರಣಿಯ 2ನೇ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ಗಳನ್ನು ಅಲ್ಪ ಮೊತ್ತಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ದಕ್ಷಿಣ ಆಫ್ರಿಕಾ ತಂಡ 107 ರನ್‌ಗಳ ಅಮೋಘ ಜಯದೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ತನ್ನ ಸತತ ಸೋಲಿನ ಕೊಂಡಿಯನ್ನು ಕಳಚಿಟ್ಟಿತು. ಇದೀಗ 2ನೇ ಪಂದ್ಯದಲ್ಲೂ ಗೆದ್ದು 2-0 ಅಂತರದಲ್ಲಿ ಸರಣಿ ಮುನ್ನಡೆ ಪಡೆಯುವತ್ತ ಎದುರು ನೋಡುತ್ತಿದೆ. ಇಎಸ್‌ಪಿಎನ್‌ ಕ್ರಿಕ್‌ ಇನ್ಫೋ ವರದಿ ಮಾಡಿರುವ ಪ್ರಕಾರ, ಬಲಗೈ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ನೆಟ್ಸ್‌ನಲ್ಲಿ ಕೇವಲ 6 ಎಸೆತಗಳನ್ನು ಮಾತ್ರವೇ ಎಸೆಯಲು ಶಕ್ತರಾಗಿದ್ದಾರೆ. ಬಳಿಕ ಮೊಣಕೈ ನೋವಿನ ಸಮಸ್ಯೆಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಆದರೆ, ಶುಕ್ರವಾರ ಆರಂಭವಾಗಲಿರುವ 2ನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಆರ್ಚರ್‌ ಚೇತರಿಸುತ್ತಾರೆಯೇ ಇಲ್ಲವೆ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ. ಸೆಂಚೂರಿಯನ್‌ನಲ್ಲಿ ನಡೆದ ಪ್ರಥಮ ಟೆಸ್ಟ್‌ ಪಂದ್ಯಕ್ಕೆ ಹೋಲಿಸಿದರೆ ಕೇಪ್‌ ಟೌನ್‌ನಲ್ಲಿ ಇರುವ ಪಿಚ್‌ ಕಡಿಮೆ ಹಸಿರು ಹುಲ್ಲು ಹೊಂದಿದೆ. ಹೀಗಾಗಿ ಮೂರು ಪ್ರಮುಖ ವೇಗಿಗಳ ಬದಲಿಗೆ ಇಬ್ಬರಿಗಷ್ಟೇ ಸ್ಥಾನ ನೀಡಲು ಎದುರು ನೋಡುತ್ತಿದೆ. ಅಥವಾ ಜೇಮ್ಸ್‌ ಆಂಡರ್ಸನ್‌ ಅವರನ್ನು ಆಡುವ 11ರ ಬಳಗದಿಂದ ಕೈಬಿಡಲು ಇಂಗ್ಲೆಂಡ್‌ ಆಲೋಚನೆಯಲ್ಲಿದೆ. ಆದರೀಗ ಜೋಫ್ರಾ ಆರ್ಚರ್‌ ಗಾಯಗೊಂಡರೆ ಸ್ಟುವರ್ಟ್‌ ಮತ್ತು ಆಂಡರ್ಸನ್‌ ಇಬ್ಬರನ್ನೂ ತಂಡದಲ್ಲಿ ಆಡಿಸುವಂತಾಗುತ್ತದೆ. ಮೊದಲ ಪಂದ್ಯದಲ್ಲಿ ಸಾಧಾರಣ ಬೌಲಿಂಗ್‌ ಪ್ರದರ್ಶನ ನೀಡಿರುವ ಇಂಗ್ಲೆಂಡ್‌ ಕೇಪ್‌ ಟೌನ್‌ ಪಂದ್ಯದಲ್ಲಿ ಗೆದ್ದು 1-1 ಅಂತರದಲ್ಲಿ ಸರಣಿ ಸಮಬಲ ಸಾಧಿಸುವ ಗುರಿ ಹೊಂದಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/35e1Nag

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...