ಹೈದರಾಬಾದ್: ಸುಮಾರು 43 ಸಾವಿರ ಕೋಟಿ ರೂ. ಮೌಲ್ಯದ ಆದಾಯ ಮೀರಿದ ಆಸ್ತಿ ಹೊಂದಿರುವ ಪ್ರಕರಣದಲ್ಲಿ ಜನವರಿ 10ರ ಒಳಗೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಮುಖ್ಯಮಂತ್ರಿ ವೈಎಸ್ ಹಾಗೂ ವೈಎಸ್ಸಾರ್ ಕಾಂಗ್ರೆಸ್ ಸಂಸದ ವಿ ವಿಜಯ ಸಾಯಿ ರೆಡ್ಡಿ ಅವರಿಗೆ ಕೋರ್ಟ್ ಸಮನ್ಸ್ ನೀಡಿದೆ. ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿ ಜಗನ್ ಮೋಹನ್ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಸಮನ್ಸ್ ಜಾರಿಗೊಳಿಸಿದೆ. ಈ ಹಿಂದೆ ಕೋರ್ಟ್ ಖುದ್ದು ಹಾಜರಾತಿಗೆ ವಿನಾಯಿತಿ ನೀಡಿದ್ದಾಗ ಸಿಬಿಐ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. 2011ರಲ್ಲಿ ದಾಖಲಾದ ಈ ಪ್ರಕರಣ ಸಂಬಂಧ 2012ರ ಮೇನಲ್ಲಿ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರನ್ನು ಬಂಧಿಸಲಾಗಿತ್ತು. 15 ದಿನಗಳ ಸೆರೆಮನೆವಾಸದ ಬಳಿಕ 2013ರ ಸೆಪ್ಟೆಂಬರ್‌ನಲ್ಲಿ ಚಂಚಲಗುಡ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. ಜಗನ್ ವಿರುದ್ಧ ಸಿಬಿಐ 11 ಆರೋಪಪಟ್ಟಿ ಮತ್ತು ಒಂದು ಪೂರಕ ಆರೋಪಪಟ್ಟಿ ಸಲ್ಲಿಸಿದೆ.
from India & World News in Kannada | VK Polls https://ift.tt/2SSu4kk