ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ಸ್; ಮಂಗಳೂರು ವಿವಿ ಸಮಗ್ರ ಚಾಂಪಿಯನ್‌

ಮಹೇಶ್ ಪಟ್ಟಾಜೆ ಮಂಗಳೂರು: ಆತಿಥೇಯ ವಿವಿ ತಂಡ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ 80ನೇ ಅಖಿಲ ಭಾರತ ಅಂತರ್‌ ವಿವಿ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ. ಜತೆಗೆ ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿಯೂ ಅಗ್ರಸ್ಥಾನ ಗಳಿಸಿದೆ. ಮಂಗಳೂರು ವಿವಿ ಸಮಗ್ರ ಪ್ರಶಸ್ತಿ ಪಡೆದಿರುವುದು ಇದು 4ನೇ ಬಾರಿ. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಬೆಂಗಳೂರು ಹಾಗೂ ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ಸಂಯೋಜನೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಮಂಗಳೂರು ವಿವಿ ತಂಡ ಒಟ್ಟು 170 ಅಂಕ ಗಳೊಂದಿಗೆ ಸಮಗ್ರ ಪ್ರಶಸ್ತಿ ಬಾಚಿಕೊಂಡಿದೆ. ಮದ್ರಾಸ್‌ ವಿವಿ ದ್ವಿತೀಯ ಮತ್ತು ಕೊಟ್ಟಾಯಂನ ಮಹಾತ್ಮ ಗಾಂಧಿ ವಿವಿ ತೃತೀಯ ಸಮಗ್ರ ಪ್ರಶಸ್ತಿ ಗೆದ್ದವು. ಪುರುಷರ ವಿಭಾಗದಲ್ಲಿ ಮಂಗಳೂರು ವಿವಿ 101 ಅಂಕ ಗಳಿಸಿ ಅಗ್ರಸ್ಥಾನಿಯಾದರೆ, ಮದ್ರಾಸ್‌ ವಿವಿ 56.5 ಅಂಕ ಹಾಗೂ ಮಹರ್ಷಿ ದಯಾನಂದ ವಿವಿ 34 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದವು. ಮಹಿಳೆಯರ ವಿಭಾಗದಲ್ಲಿ ಮಂಗಳೂರು ವಿವಿ 69 ಅಂಕಗಳೊಂದಿಗೆ ಅಗ್ರಸ್ಥಾನ ಗಳಿಸಿದರೆ, ಮಹಾತ್ಮ ಗಾಂಧಿ ವಿವಿ 47 ಅಂಕಗಳೊಂದಿಗೆ ದ್ವಿತೀಯ ಮತ್ತು ಮದ್ರಾಸ್‌ ವಿವಿ 42 ಅಂಕ ಗಳೊಂದಿಗೆ ತೃತೀಯ ಸ್ಥಾನ ಪಡೆದವು. ಪುರುಷರಲ್ಲಿ ಮಂಗಳೂರು ವಿವಿಯ ಜಯ್‌ ಶಾ ಪ್ರದೀಪ್‌ (ಟ್ರಿಪಲ್‌ ಜಂಪ್‌- 1115 ಅಂಕ) ಹಾಗೂ ಮಹಿಳೆಯರಲ್ಲಿ ಆಚಾರ್ಯ ನಾಗಾರ್ಜುನ ವಿವಿಯ ವೈ. ಜ್ಯೋತಿ (100 ಮೀ. ಹರ್ಡಲ್ಸ್‌- 1146 ಪಾಯಿಂಟ್ಸ್‌) ಕೂಟದ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಿದರು. ಜಯ್‌ ಶಾ ಪ್ರದೀಪ್‌ ದಾಖಲೆ: ಪುರುಷರ ಟ್ರಿಪಲ್‌ ಜಂಪ್‌ನಲ್ಲಿ ಮಂಗಳೂರು ವಿವಿ ಪ್ರತಿನಿಧಿಸಿದ ಆಳ್ವಾಸ್‌ ಕಾಲೇಜಿನ ಪ್ರದೀಪ್‌ ಜಯ್‌ ಶಾ 16.53 ಮೀ. ದೂರ ಜಿಗಿಯುವ ಮೂಲಕ ತನ್ನದೇ ಹಳೆ ದಾಖಲೆ(16.36 ಮೀ.)ಯನ್ನು ಅಳಿಸಿ, ಹೊಸ ಕೂಟ ದಾಖಲೆ ಬರೆದರು. ಮಹಾತ್ಮ ಗಾಂಧಿ ವಿವಿಯ ಅರುಣ್‌ ಎ.ಬಿ. (16.12 ಮೀ.) ಬೆಳ್ಳಿ ಪದಕ ಹಾಗೂ ಬೆಂಗಳೂರಿನ ರಾಜೀವ್‌ ಗಾಂಧಿ ವಿವಿಯ ಕಪಿಲ್‌ ಆನಂದ್‌ (16.01 ಮೀ.) ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37IdQOI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...