ಬೆಂಗಳೂರಲ್ಲಿ ಪೆಟ್ರೋಲ್‌ ದರ ಶೀಘ್ರದಲ್ಲೇ 80 ರೂ.ಗಳನ್ನು ದಾಟಿದರೂ ಅಚ್ಚರಿಯಿಲ್ಲ!

ಬೆಂಗಳೂರು: ನಗರದಲ್ಲಿ ಪ್ರತಿದಿನ 10 ಪೈಸೆಯಂತೆ ಹೆಚ್ಚಾಗುತ್ತಿದ್ದು, ಇಂದು 15 ಪೈಸೆ ಹೆಚ್ಚಳ ಕಂಡು ಬಂದಿದೆ. ಲೀಟರ್‌ ಪೆಟ್ರೋಲ್‌ಗೆ 78.22 ರೂ.ಗೆ ತಲುಪಿದೆ. ಏರುಗತಿಯನ್ನು ಗಮನಿಸಿದರೆ ಶೀಘ್ರದಲ್ಲೇ 80 ರೂ.ಗಳನ್ನು ದಾಟುವುದರಲ್ಲಿ ಅಚ್ಚರಿಯಿಲ್ಲ. ಕಳೆದ 10 ದಿನಗಳಲ್ಲಿ 2 ದಿನ ಯಥಾಸ್ಥಿತಿ ಕಂಡುಕೊಂಡಿದ್ದು ಬಿಟ್ಟರೆ ಒಂದು ದಿನವು ಇಳಿಕೆಯಾಗಿಲ್ಲ. 8 ಪೈಸೆಯಿಂದ 17 ಪೈಸೆ ವರೆಗೆ ಹೆಚ್ಚಳವಾಗಿದೆ. ಒಟ್ಟಾರೆ 10 ದಿನಗಳಲ್ಲಿ 92 ಪೈಸೆ ಏರಿಯಾಗಿದೆ. ಡಿಸೆಂಬರ್‌ 28ರಂದು ಪೆಟ್ರೋಲ್‌ ದರ 77.30 ರೂ. ಇತ್ತು. ರಾಷ್ಟ್ರದ ಎಲ್ಲ ಮೆಟ್ರೊ ನಗರಗಳಲ್ಲಿ 15 ಪೈಸೆ ಏರಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್‌ ದರ 75.69 ರೂ. ಇದೆ. ಚೆನ್ನೈನಲ್ಲಿ 78.64 ರೂ., ಕೋಲ್ಕತದಲ್ಲಿ 78.28 ರೂ. ಮತ್ತು ವಾಣಿಜ್ಯ ನಗರಿ ಮುಂಬಯಿನಲ್ಲಿ 81.28 ರೂ. ಇದೆ. ಡೀಸೆಲ್‌ ದರವು ನಾಗಾಲೋಟದಿಂದ ಏರಿಕೆಯಾಗುತ್ತಿದ್ದು ಸೋಮವಾರದಿಂದ ಮಂಗಳವಾರಕ್ಕೆ 18 ಪೈಸೆ ಹೆಚ್ಚಾಗಿದೆ. ಬೆಂಗಳೂರಲ್ಲಿ 70.97 ರೂ.ಗಳಿಗೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 68.68 ರೂ. ಇದೆ. ಚೆನ್ನೈನಲ್ಲಿ 72.58 ರೂ., ಕೋಲ್ಕತದಲ್ಲಿ 71.04 ರೂ. ಹಾಗೂ ವಾಣಿಜ್ಯ ನಗರಿ ಮುಂಬಯಿನಲ್ಲಿ 72.02 ರೂ. ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಬ್ಯಾರಲ್‌ ಒಂದಕ್ಕೆ 4,542 ರೂ. ಇದೆ. ಸೂಚನೆ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪೆಟ್ರೋಲ್ ವಿತರಣಾ ಕಂಪೆನಿಗಳು ಮತ್ತು ಸ್ಥಳದಿಂದ ಸ್ಥಳಕ್ಕೆ ಸ್ವಲ್ಪ ವ್ಯತ್ಯಾಸ ಇರುತ್ತದೆ ಎಂಬುದನ್ನು ಗಮನಿಸತಕ್ಕದ್ದು.


from India & World News in Kannada | VK Polls https://ift.tt/36vhOdt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...