ಮೈಸೂರಿನಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿ ಸೇರಿ ಇಬ್ಬರ ಅಂಗಾಂಗ ದಾನ: ಐವರಿಗೆ ಹೊಸ ಬದುಕು..!

: ನಿವೃತ್ತ ಪೊಲೀಸ್‌ ಅಧಿಕಾರಿ ಸೇರಿ ಇಬ್ಬರ ದಾನದಿಂದ ಐವರು ಹೊಸ ಬದುಕು ಕಂಡುಕೊಳ್ಳಲು ಸಾಧ್ಯವಾಗಿದೆ. ನಿವೃತ್ತ ಪೊಲೀಸ್‌ ಅಧಿಕಾರಿ 66 ವರ್ಷದ ನಾಗರಾಜಾಚಾರಿ ಹಾಗೂ 43 ವರ್ಷದ ರಘು ಎಂಬುವರು ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಮೆದುಳು ನಿಷ್ಕ್ರಿಯವಾಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬದವರು ಅವರ ಅಂಗಾಂಗಗಳನ್ನು ದಾನ ಮಾಡಲು ಮುಂದೆ ಬಂದರು. ನಗರದ ಬಿಜಿಎಸ್‌ ಅಪೋಲೋ ಆಸ್ಪತ್ರೆಯಲ್ಲಿ ಇವರ ಅಂಗಾಂಗಗಳನ್ನು ಐವರಿಗೆ ಯಶಸ್ವಿಯಾಗಿ ಕಸಿ ಮಾಡಲಾಯಿತು. ನಾಗಾಚಾರಿ ಹಾಗೂ ರಘು ಅವರ ಯಕೃತ್‌ ಅನ್ನು ಅಪೋಲೋ ಆಸ್ಪತ್ರೆಯಲ್ಲಿ, ರಘು ಅವರ ಹೃದಯ ಕವಾಟಗಳನ್ನು ನಾರಾಯಣ ಹೃದಯಾಲಯದಲ್ಲಿ ಕಸಿ ಮಾಡಲಾಯಿತು. ಇಬ್ಬರ ಕಾರ್ನಿಯಾವನ್ನು ಐ ಬ್ಯಾಂಕ್‌ನಲ್ಲಿ ಇಡಲಾಗಿದೆ ಎಂದು ಆಸ್ಪತ್ರೆ ಉಪಾಧ್ಯಕ್ಷ ಹಾಗೂ ಘಟಕದ ಮುಖ್ಯಸ್ಥ ಎನ್‌. ಜಿ. ಭಾರತೀಶ್‌ ರೆಡ್ಡಿ ತಿಳಿಸಿದ್ದಾರೆ. 'ಬಿಜಿಎಸ್‌ ಅಪೋಲೋ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 2021ರಲ್ಲಿ 35 ಅಂಗಾಂಗ ಕಸಿಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಇವುಗಳಲ್ಲಿ ಏಕಕಾಲದಲ್ಲಿ ನೆರವೇರಿಸಿದ ಎರಡು ಮೂತ್ರ ಪಿಂಡ ಮತ್ತು ಮೇದೋಜೀರಕ ಗ್ರಂಥಿ ಕಸಿ ಸೇರಿವೆ. ಅಂಗಾಂಗ ಕಸಿಯು ಅತ್ಯಂತ ಸವಾಲಿನ ಶಸ್ತ್ರಚಿಕಿತ್ಸೆಯಾಗಿದೆ. ಅದರಲ್ಲಿಯೂ ಏಕಕಾಲದಲ್ಲಿ ಬಹು ಅಂಗಾಂಗ ಕಸಿಯನ್ನು ನೆರವೇರಿಸುವುದು ಅತ್ಯಂತ ಕ್ಲಿಷ್ಟಕರವಾಗಿದೆ. ಕಳೆದ ಒಂದು ದಶಕದಲ್ಲಿ ಅಂಗಾಂಗ ಕಸಿಯ ಹೊಸ ವಿಧಾನಗಳಿಂದಾಗಿ ಅಂಗಾಂಗ ಕಸಿಯ ಫಲಿತಾಂಶ ಗಣನೀಯವಾಗಿ ಸುಧಾರಿಸಿದ್ದು, ರೋಗಿಗಳಲ್ಲಿ ಹೊಸ ಆಶಾಭಾವ ಮೂಡಿದೆ' ಎಂದು ತಿಳಿಸಿದ್ದಾರೆ.


from India & World News in Kannada | VK Polls https://ift.tt/B5EKGAx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...