ಬೆಂಗಳೂರು: ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಆಲ್‌ರೌಂಡ್ ಆಟವಾಡಿ ಗೆಲುವಿನ ರೂವಾರಿಯಾದ ಯುವ ಆಲ್‌ರೌಂಡರ್ , ವಿಶೇಷ ದಾಖಲೆ ಒಂದನ್ನು ಬರೆದಿದ್ದಾರೆ. ಈ ಮೂಲಕ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ದಾಖಲೆ ಸರಿಗಟ್ಟಿದ್ದಾರೆ. ಆಂಟಿಗಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲಿಗೆ 5 ವಿಕೆಟ್ ಕಿತ್ತು ಎದುರಾಳಿ ತಂಡವನ್ನು 189 ರನ್‌ಗಳಿಗೆ ಔಲ್‌ಔಟ್ ಮಾಡುವಲ್ಲಿ ಮುಖ್ಯ ಪಾತ್ರ ವಹಿಸಿದ ರಾಜ್ ಬಾವಾ, ಬಳಿಕ ಗುರಿ ಬೆನ್ನತ್ತಿದ್ದ ಭಾರತ ತಂಡದ ಪರ 54 ಎಸೆತಗಳಲ್ಲಿ 2 ಫೋರ್ ಮತ್ತೊಂದು ಸಿಕ್ಸರ್ ಒಳಗೊಂಡ ಅತ್ಯಮೂಲ್ಯ 35 ರನ್‌ಗಳ ಕೊಡುಗೆ ಕೊಟ್ಟು ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು. ರವಿ ಬಾವಾ ತಮ್ಮ ಅದ್ಭುತ ಬೌಲಿಂಗ್ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ. ಐಸಿಸಿ ಟೂರ್ನಿಗಳ ಫೈನಲ್‌ನಲ್ಲಿ 5 ವಿಕೆಟ್‌ಗಳನ್ನು ಕಿತ್ತ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆ ಸಂಪಾದಿಸಿದ್ದಾರೆ. ಈ ಮೂಲಕ ಟೂರ್ನಿಯ ಇತಿಹಾಸದ ಫೈನಲ್‌ಗಳಲ್ಲಿ ಈ ಮೊದಲು ನಾಲ್ಕು ವಿಕೆಟ್‌ಗಳ ಸಾಧನೆ ಮಾಡಿದ್ದ ಪಿಯೂಶ್ ಚಾವ್ಲಾ, ರವಿ ಬಿಷ್ಣೋಯ್ ಮತ್ತು ಸಂದೀಪ್ ಶರ್ಮಾ ಅವರ ದಾಖಲೆ ಮುರಿದಿದ್ದಾರೆ. ನಾಲ್ಕು ವಿಕೆಟ್ ಸಾಧನೆಯ ಪಟ್ಟಿಗೆ ಯಂಗ್ ಇಂಡಿಯಾದ ಮತ್ತೊಬ್ಬ ವೇಗಿ ರವಿ ಕುಮಾರ್ ಕೂಡ ಸೇರಿದ್ದಾರೆ. ರವಿ 9 ಓವರ್‌ಗಳಲ್ಲಿ 34 ರನ್ ನೀಡಿ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ್ದರು. ಕಿರಿಯರ ವಿಶ್ವಕಪ್ ಫೈನಲ್‌ನಲ್ಲಿ ನಾಲ್ಕಕ್ಕೂ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ಸ್
- ರಾಜ್ ಬಾವಾ (2012): 31ಕ್ಕೆ 5
- ಪಿಯೂಶ್ ಚಾವ್ಲಾ (2006): 8ಕ್ಕೆ 4
- ರವಿ ಬಿಷ್ಣೋಯ್ (2020): 30ಕ್ಕೆ 4
- ರವಿ ಕುಮಾರ್ (2022): 34ಕ್ಕೆ 4
- ಸಂದೀಪ್‌ಶರ್ಮಾ (2012): 54ಕ್ಕೆ 4
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/N31Wkv0