ಪಾಕ್‌ ಸೇನೆಗೆ ಚೀನಾ ನಿರ್ಮಿತ ಜೆಎಫ್‌-17 ಯುದ್ಧ ವಿಮಾನ: ಆದ್ರೆ ಭಾರತದ ರಫೇಲ್‌ಗೆ ಸರಿಸಾಟಿ ಅಲ್ಲ..!

ಇಸ್ಲಾಮಾಬಾದ್‌ (): ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಕೆಲವು ದಿನಗಳ ಹಿಂದೆ ಚೀನಾ ಜತೆ ಮಾತುಕತೆ ನಡೆಸಿದ ಬೆನ್ನಲ್ಲೇ, ಮುಂದಿನ ತಿಂಗಳು 50 ಜೆಎಫ್‌-17 ಬ್ಲಾಕ್‌ 3 ಯುದ್ಧ ವಿಮಾನಗಳು ಪಾಕ್‌ ಸೇರಲಿವೆ ಎಂದು ತಿಳಿದು ಬಂದಿದೆ. ಭಾರತಕ್ಕೆ ತಿರುಗೇಟು ನೀಡಲೆಂದೇ ಜೆಎಫ್‌-17 ಬ್ಲಾಕ್‌3 ಯುದ್ಧ ವಿಮಾನಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಭಾರತದ ರಫೇಲ್‌ ಯುದ್ಧ ವಿಮಾನ ಹಾಗೂ ಎಸ್‌-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯದ ಮುಂದೆ ಎಫ್‌-17 ಯುದ್ಧ ವಿಮಾನಗಳ ಸಾಮರ್ಥ್ಯ ನಗಣ್ಯ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ನೆರೆ ರಾಷ್ಟ್ರದ ವಾಯುಪಡೆ ಸೇರಲಿರುವ 50 ಜೆಎಫ್‌-17 ಬ್ಲಾಕ್‌ 3 ಯುದ್ಧ ವಿಮಾನಗಳು ಒಂದೇ ಎಂಜಿನ್‌ ಹೊಂದಿದ್ದರೆ, ಭಾರತದ ರಫೇಲ್‌ ಹಾಗೂ ಎಸ್‌-400 ಕ್ಷಿಪಣಿ ವ್ಯವಸ್ಥೆಯು ಎರಡು ಎಂಜಿನ್‌ಗಳನ್ನು ಹೊಂದಿವೆ. ಪಾಕ್‌ ಯುದ್ಧ ವಿಮಾನವು ರಷ್ಯಾದ ಆರ್‌ಡಿ 33 ಮಾದರಿಯ ಎಂಜಿನ್‌ ಹೊಂದಿದ್ದು, ಇದು ನಮ್ಮ ದೇಶದ ಮಿಗ್‌-29 ಯುದ್ಧ ವಿಮಾನಗಳಲ್ಲೇ ಇದೆ. ಎಸ್‌-400 ವ್ಯವಸ್ಥೆಯು ಅಕಾಶದಿಂದಲೇ ವೈರಿ ರಾಷ್ಟ್ರಗಳ ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಜತೆಗೆ, 300 ಕಿ. ಮೀ. ದೂರದಲ್ಲಿರುವ ವಿಮಾನಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ. ರಫೇಲ್‌ ಸಹ 140 - 160 ಕಿ. ಮೀ. ವ್ಯಾಪ್ತಿಯ ವೈರಿಗಳನ್ನು ಪತ್ತೆ ಹಚ್ಚಲಿದೆ. ಕೂಡಲೇ ಆ ಯುದ್ಧ ವಿಮಾನಗಳನ್ನು ಎಸ್‌-400 ಹೊಡೆದುರುಳಿಸಲಿವೆ. ಹಾಗೆ ನೋಡಿದರೆ, ಪಾಕಿಸ್ತಾನದ ವಾಯು ಪಡೆಗೇ ಜೆಎಫ್‌-17 ಯುದ್ಧ ವಿಮಾನಗಳ ಮೇಲೆ ಹೆಚ್ಚಿನ ನಂಬಿಕೆ ಇದ್ದಂತಿಲ್ಲ. ಹಾಗಾಗಿಯೇ, 2019ರ ಫೆಬ್ರವರಿಯಲ್ಲಿ ಪುಲ್ವಾಮ ದಾಳಿಗೆ ಬದಲಾಗಿ ಬಾಲಾಕೋಟ್‌ ವಾಯು ದಾಳಿ ನಡೆಸಿದ ಬಳಿಕ ಗಡಿಯಲ್ಲಿ ಪಾಕಿಸ್ತಾನದ ಒಂದೇ ಒಂದು ಜೆಎಫ್‌-17 ಮಾದರಿಯ ಯುದ್ಧ ವಿಮಾನಗಳನ್ನು ಹಾರಾಡಿಸಿಲ್ಲ. ಹಾಗಾಗಿ, ಭಾರತದ ಯುದ್ಧ ವಿಮಾನ ಹಾಗೂ ಕ್ಷಿಪಣಿ ವ್ಯವಸ್ಥೆ ಎದುರು ಜೆಎಫ್‌-17 ಯುದ್ಧ ವಿಮಾನಗಳದ್ದು ತೋರಿಕೆಯ ಪ್ರದರ್ಶನ ಎನ್ನಲಾಗುತ್ತಿದೆ. ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ಭಾರತವು ಫ್ರಾನ್ಸ್‌ ಜತೆ ಒಪ್ಪಂದ ಮಾಡಿಕೊಂಡಿದ್ದು, ಒಟ್ಟು 36 ಯುದ್ಧ ವಿಮಾನಗಳ ಪೈಕಿ ಈಗಾಗಲೇ 35 ಯುದ್ಧ ವಿಮಾನ ಭಾರತಕ್ಕೆ ಆಗಮಿಸಿವೆ. ಇನ್ನು ರಷ್ಯಾ ಜತೆ ಎಸ್‌-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದೇ ವರ್ಷಾಂತ್ಯಕ್ಕೆ ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಯಾವುದರ ಸಾಮರ್ಥ್ಯ ಎಷ್ಟು? ಜೆಎಫ್‌-17 ಬ್ಲಾಕ್‌ 3 - ಒಂದು ಎಂಜಿನ್‌ - ವೇಗ 1,910 ಕಿ.ಮೀ (ಗಂಟೆಗೆ) - ಹಾರಾಟ ವ್ಯಾಪ್ತಿ 3,482 ಕಿ.ಮೀ ರಫೇಲ್‌ - ಎರಡು ಎಂಜಿನ್‌ - ವೇಗ 1,912 ಕಿ.ಮೀ (ಗಂಟೆಗೆ) - ಹಾರಾಟ ವ್ಯಾಪ್ತಿ 3,700 ಕಿ.ಮೀ ಎಸ್‌-400 - ಎರಡು ಎಂಜಿನ್‌ - ವೇಗ 17,000 ಕಿ.ಮೀ (ಗಂಟೆಗೆ) - 300 ಕಿ. ಮೀ. ದೂರದಲ್ಲಿನ ವಿಮಾನ ಗುರುತಿಸಬಲ್ಲದು


from India & World News in Kannada | VK Polls https://ift.tt/WCOZLuF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...