ಐದು ವರ್ಷ ಸ್ವತಂತ್ರ ಅಧಿಕಾರ ನೀಡಿದರೆ ಕ್ರಾಂತಿಕಾರಿ ಬದಲಾವಣೆ ಮಾಡುತ್ತೇನೆ; ಎಚ್‌ಡಿಕೆ

ದಾಬಸ್‌ಪೇಟೆ: ರಾಜ್ಯದ ಜನತೆ ಜೆಡಿಎಸ್‌ಗೆ ಐದು ವರ್ಷದ ಸ್ವತಂತ್ರ ಅಧಿಕಾರವನ್ನು ನೀಡಿದರೆ ರಾಜ್ಯದಲ್ಲಿ ಕ್ರಾಂತಿಕಾರಿ ಬೆಳವಣಿಗೆ ತಂದು ದೇಶದಲ್ಲೇ ಅಭಿವೃದ್ಧಿಯ ರಾಜ್ಯ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜನರಲ್ಲಿ ಮನವಿ ಮಾಡಿದರು. ಕೆಂಗಲ್‌ ಗ್ರಾಮದಲ್ಲಿ ನಡೆದ ಶ್ರೀಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಮತ್ತು ಶ್ರೀಕೃಷ್ಣರುಕ್ಮಿಣಿ ಅಮ್ಮನವರ ಜೀರ್ಣೊದ್ಧಾರಗೊಂಡ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ‘ನಾನು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ, ಮುಖ್ಯಮಂತ್ರಿಯಾದ್ದು ಆಕಸ್ಮಿಕ. ಆದರೂ ಅಧಿಕಾರದಲ್ಲಿದ್ದಾಗ ಜನರಿಗೆ ಮೋಸ ಮಾಡಿಲ್ಲ. ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಮೈತ್ರಿ ಸರಕಾರ ಸಹಕಾರ ನೀಡಿತ್ತು. ಆದರೆ ಎರಡನೇ ಬಾರಿ ಸಿಎಂ ಆದಾಗ ಮೈತ್ರಿ ಸರಕಾರದವರು ಇಲ್ಲಸಲ್ಲದ ಕಷ್ಟಗಳನ್ನು ನೀಡಿದರು. ಅದರ ನಡುವೆಯೂ ಜನರಿಗೆ ಉತ್ತಮವಾದ ಆಡಳಿತವನ್ನು ನೀಡಿದ್ದೇನೆ’ ಎಂದರು. ಸಾಲ ಮನ್ನಾ ಮಾಡುವುದರಿಂದ ರೈತರ ಕಷ್ಟಗಳು ನಿವಾರಣೆಯಾಗುವುದಿಲ್ಲ. ಶಾಶ್ವತ ಪರಿಹಾರವಾಗುವುದಿಲ್ಲ. ರೈತ ಸಾಲಗಾರನಾಗದೆ ಇರುವ ಹಾಗೆ ಸರಕಾರ ಚಿಂತನೆ ಮಾಡಬೇಕಾದ ಅನಿವಾರ್ಯತೆ ಇದೆ. ಕೆಎಂಎಫ್‌ ನೀಡುವ 26 ರೂ. ಹಣ ವನ್ನು ರೈತರಿಗೆ ನೀಡಿದ್ದರೆ ತುಂಬಾ ಕಷ್ಟವಾಗುತ್ತಿತ್ತು. ಸರಕಾರ 5ರೂ. ಪ್ರೋತ್ಸಾಹ ಸಹಾಯ ಧನ ನೀಡುತ್ತಿರುವುದರಿಂದ ಸ್ವಲ್ಪ ಸಹಕಾರಿಯಾಗಿದೆ ಎಂದರು. ವೇದಿಕೆ ಕಾರ್ಯಕ್ರಮದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಎತ್ತಿಹೊಳೆ ಯೋಜನೆ ರಾಜಕಾರಣಿಗಳ ಮತ್ತು ಅಧಿಕಾರಿಗಳಿಗೆ ಹಣ ಲೋಟಿ ಮಾಡುವ ಯೋಜನೆಯಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು. 8 ಕೋಟಿ ಸಾವಿರ ಕೋಟಿಯಿಂದ ಆರಂಭವಾದ ಎತ್ತಿನಹೊಳೆ ಯೋಜನೆ ಈಗ 23 ಸಾವಿರ ಕೋಟಿಗೆ ಬಂದಿದೆ. ಮುಂದೆ ಇದೇ ಯೋಜನೆ 50 ಸಾವಿರ ಕೋಟಿಗೆ ಬಂದರು ಆಶ್ಚರ್ಯವಿಲ್ಲ ಎಂದರು.


from India & World News in Kannada | VK Polls https://ift.tt/3keqBsf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...