ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ‘ರಕ್ಷಾ ಬಂಧನ’ ಕಟ್ಟಿದ ಬಿಜೆಪಿ ಕಾರ್ಯಕರ್ತೆಯರು

ಬೆಳಗಾವಿ: ಅನ್ನೋದು ಸಹೋದರ ಸಹೋದರಿಯರ ಭ್ರಾತೃತ್ವದ ಸಂಕೇತ. ಅನೇಕ ಸಹೋದರಿಯರು ರಕ್ಷಾ ಬಂಧನ ಬರಲೆಂದೇ ಕಾಯುವವರಿದ್ದಾರೆ. ಆ ಮೂಲಕ ತಮ್ಮ ಪ್ರೀತಿಯ ಅಣ್ಣನಿಗೆ ರಾಖಿ ಕಟ್ಟಿ ಹಬ್ಬವನ್ನು ಸಂಭ್ರಮಿಸ್ತಾರೆ. ಇನ್ನೊಂದೆಡೆ ಕೆಲವು ಹುಡುಗರ ಕೀಟಲೆಯಿಂದ ಪಾರಾಗಲು ಕೂಡ ರಾಖಿ ಕಟ್ಟುವ ಸ್ತ್ರೀಯರಿದ್ದಾರೆ. ಈ ಮಧ್ಯೆ ರಾಖಿ ಹಬ್ಬದ ಹಿನ್ನೆಲೆ ಮಾಜಿ ಸಚಿವ, ಅವರಿಗೆ ಬಿಜೆಪಿ ಕಾರ್ಯಕರ್ತೆಯರು ರಾಖಿ ಕಟ್ಟಿ ರಕ್ಷಾಬಂಧನ ಮಾಡಿದ್ದಾರೆ. ಗೋಕಾಕ ಶಾಸಕರಾಗಿರುವ ರಮೇಶ್ ಜಾರಕಿಹೊಳಿ ಅವರಿಗೆ ದೀಪದ ಆರತಿ ಮಾಡಿ ರಾಖಿ ಕಟ್ಟಿರುವ ಬಿಜೆಪಿ ಕಾರ್ಯಕರ್ತೆಯರೂ ಹಾಗೂ ಅವರ ಸಾಮಾಜಿಕ ಜೀವನದ ಸಹೋದರಿಯರು ರಾಖಿ ಹಬ್ಬವನ್ನು ಆಚರಿಸಿದ್ದಾರೆ. ಅಶ್ಲೀಲ ಸಿಡಿ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕಳೆದ ಕೆಲ ತಿಂಗಳಿನಿಂದ ಸಿಡಿ ಪ್ರಕರಣದ ದೆಸೆಯಿಂದ ರಾಜಕೀಯವಾಗಿ ಹಿನ್ನೆಲೆಗೆ ಅವರು ಸರಿದಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ಜೀವನದ ಪುನರುಜ್ಜೀವನದ ಕನಸು ಹೆಣೆಯುತ್ತಿರುವ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಬಿಜೆಪಿಯ ಕಾರ್ಯಕರ್ತೆಯರು ರಾಖಿ ಕಟ್ಟಿದ್ದಾರೆ.


from India & World News in Kannada | VK Polls https://ift.tt/3y3LsDC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...