ಹೊಸದಿಲ್ಲಿ: ರಾಷ್ಟ್ರೀಯ ಯೋಜನೆ (ಎನ್‌ಎಂಪಿ) ಕುರಿತು ಕಾಂಗ್ರೆಸ್ ಸಾಂಸದ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಕಳವಳಕಾರಿ ಸನ್ನಿವೇಶ ಮತ್ತು ಲಸಿಕೀಕರಣದ ನಿಧಾನಗತಿಯ ಬಗ್ಗೆ ಸರ್ಕಾರ ಚಿಂತಿಸುತ್ತಿಲ್ಲ. ಆದರೆ ದೇಶದ ಆಸ್ತಿಗಳನ್ನು ಮಾರುವುದರತ್ತ ಗಮನ ಹರಿಸಿದೆ ಎಂದು ಗುರುವಾರ ಟೀಕಿಸಿದ್ದಾರೆ. 'ಹೆಚ್ಚುತ್ತಿರುವ ಕೋವಿಡ್ ಸಂಖ್ಯೆ ಕಳವಳಕಾರಿಯಾಗಿದೆ. ಮುಂದಿನ ಅಲೆಯಲ್ಲಿ ಗಂಭೀರ ಪರಿಣಾಮ ಉಂಟಾಗದಂತೆ ತಪ್ಪಿಸಲು ಲಸಿಕೀಕರಣವನ್ನು ತ್ವರಿತಗೊಳಿಸಬೇಕಿದೆ. ದಯವಿಟ್ಟು ನಿಮ್ಮ ಕಾಳಜಿಯನ್ನು ನೀವೇ ನೋಡಿಕೊಳ್ಳಿ. ಏಕೆಂದರೆ ಭಾರತ ಸರ್ಕಾರ ಮಾರಾಟದಲ್ಲಿ ಮಗ್ನವಾಗಿದೆ' ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. 'ಈ ದೇಶ ಕಳೆದ 70 ವರ್ಷಗಳಲ್ಲಿ ನಿರ್ಮಿಸಿದ್ದೆಲ್ಲವನ್ನೂ ಮಾರಲಾಗುತ್ತಿದೆ. ನಾವು ಇವುಗಳನ್ನು ಭೋಗ್ಯಕ್ಕೆ ನೀಡುತ್ತಿದ್ದೇವೆ ಎಂಬ ಸಮರ್ಥನೆಯನ್ನು ನೀಡುತ್ತಿದ್ದಾರೆ. ಸರ್ಕಾರ ಆರ್ಥಿಕತೆಯನ್ನು ಕೆಟ್ಟದಾಗಿ ನಿರ್ವಹಿಸಿದೆ ಮತ್ತು ಅದಕ್ಕೆ ಏನು ಮಾಡುವುದೆಂಬುದೇ ತಿಳಿದಿಲ್ಲ' ಎಂದು ಅವರು ಬುಧವಾರ ಆರೋಪಿಸಿದ್ದರು. 'ಮೊದಲು ಅವರು ನಂಬಿಕೆಯನ್ನು ಮಾರಿದ್ದರು. ಈಗ ಭಾರತವೇ ಮಾರಾಟಕ್ಕಿದೆ' ಎಂದು ಟೀಕಿಸಿದ್ದರು. 'ಕಳೆದ 70 ವರ್ಷಗಳಲ್ಲಿ ಏನೂ ಅಭಿವೃದ್ಧಿ ನಡೆದಿಲ್ಲ ಎಂದು ಬಿಜೆಪಿ ಮತ್ತು ಮೋದಿ ಹೇಳುತ್ತಾರೆ. ಆದರೆ ನಿನ್ನೆ ಹಣಕಾಸು ಸಚಿವರು ಕಳೆದ 70 ವರ್ಷಗಳಲ್ಲಿ ನಿರ್ಮಿಸಿದ್ದ ಎಲ್ಲ ಆಸ್ತಿಗಳನ್ನೂ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಅವರು ಮೊದಲು ಯುಪಿಎ ಕಟ್ಟಿದ್ದೆಲ್ಲವನ್ನೂ ನಾಶ ಮಾಡಿದ್ದರು. ಈಗ ಕೊನೆಯ ಹಂತವಾಗಿ ನಾವು ಸೃಷ್ಟಿಯಾಗಲು ಸಹಾಯ ಮಾಡಿದ್ದೆಲ್ಲವನ್ನೂ ಮಾರಾಟ ಮಾಡುತ್ತಿದ್ದಾರೆ. ಇದು ದೊಡ್ಡ ದುರಂತ' ಎಂದು ಹೇಳಿದ್ದರು. ರಾಹುಲ್ ಗಾಂಧಿ ಹೇಳಿಕೆಗೆ ಬುಧವಾರ ತಿರುಗೇಟು ನೀಡಿದ್ದ ಹಣಕಾಸು ಸಚಿವೆ , ರಾಹುಲ್ ಗಾಂಧಿಗೆ ನಗದೀಕರಣ ಅಂದರೆ ಏನು ಎಂದು ತಿಳಿದಿದೆಯೇ? ದೇಶದ ಆಸ್ತಿಗಳನ್ನು ಮಾರಿ ಅದರಿಂದ ಕಿಕ್ ಬ್ಯಾಕ್ ಪಡೆದಿದ್ದು ಕಾಂಗ್ರೆಸ್ ಎಂದು ಆರೋಪಿಸಿದ್ದರು.
from India & World News in Kannada | VK Polls https://ift.tt/3DmxOPF