ಬೆಂಗಳೂರು: ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಮುನಿಸು ಇನ್ನೂ ಶಮನವಾಗಿಲ್ಲ. ಬಯಸಿದ ಖಾತೆಯನ್ನು ನೀಡಲೇ ಬೇಕು ಎಂದು ಸಿಂಗ್ ಪಟ್ಟು ಮುಂದುವರಿಸಿದ್ದಾರೆ. ಆದರೆ ರಾಜ್ಯ ನಾಯಕರು ಈ ಬೇಡಿಕೆಗೆ ಮನ್ನಣೆ ನೀಡುತ್ತಿಲ್ಲ. ಇದರಿಂದ ಮುನಿಸಿಕೊಂಡಿರುವ ಆನಂದ್ ಸಿಂಗ್ ದೆಹಲಿಗೆ ತೆರಳಿದ್ದಾರೆ. ಇಂಧನ ಅಥವಾ ಅರಣ್ಯ ಖಾತೆಯತ್ತ ಆನಂದ್ ಸಿಂಗ್ ಚಿತ್ತ ನೆಟ್ಟಿದ್ದಾರೆ. ಆದರೆ ಬಯಸಿದ ಖಾತೆಯನ್ನು ಅವರಿಗೆ ನೀಡಿದ್ದಲ್ಲಿ ಅದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಲಿದೆ. ಈಗಾಗಲೇ ಖಾತೆ ಬದಲಾವಣೆಯ ಬಗ್ಗೆ ಅಸಮಾಧಾನಹೊಂದಿರುವ ಹಲವರು ಕ್ಯಾತೆ ತೆಗೆಯುವ ಸಾಧ್ಯತೆ ದಟ್ಟವಾಗಿದೆ. ಈ ನಿಟ್ಟಿನಲ್ಲಿ ಖಾತೆ ಬದಲಾವಣೆಗೆ ಬೇಡಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮತಿ ಸೂಚಿಸುತ್ತಿಲ್ಲ. portfolio tension new update ಈ ಕಾರಣಕ್ಕಾಗಿ ಆನಂದ್ ಸಿಂಗ್ ಮುನಿಸು ಮುಂದುವರಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಜೊತೆಗೆ ಮಾತುಕತೆ ನಡೆದರೂ ಅದು ವಿಫಲವಾಗಿದೆ. ಈ ನಡುವೆ ಸಿಕ್ಕ ಖಾತೆಯ ಉಸ್ತುವಾರಿಯನ್ನು ಆನಂದ್ ಸಿಂಗ್ ವಹಿಸಿಕೊಳ್ಳುತ್ತಿಲ್ಲ. ಈ ಎಲ್ಲ ಬೆಳವಣಿಗೆಗಳ ನಡುವೆ ಆನಂದ್ ಸಿಂಗ್ ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಆದರೆ ಮೂಲಗಳ ಪ್ರಕಾರ ಆನಂದ್ ಸಿಂಗ್ ಪ್ರಯತ್ನ ಯಶಸ್ವಿ ಆಗುವ ಸಾಧ್ಯತೆ ಇಲ್ಲ. ಸದ್ಯ ಖಾತೆ ಬದಲಾವಣೆಗೆ ವರಿಷ್ಠರೂ ಸಮ್ಮತಿ ಸೂಚಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಆನಂದ್ ಸಿಂಗ್ ದೆಹಲಿ ಮಟ್ಟದಲ್ಲಿ ಯಾರ ರೀತಿಯ ಪ್ರಯತ್ನವನ್ನು ಮುಂದುವರಿಸುತ್ತಾರೆ ಎಂಬವುದು ಸದ್ಯಕ್ಕೆ ಕುತೂಹಲಕ್ಕೆ ಕಾರಣವಾಗಿದೆ.
from India & World News in Kannada | VK Polls https://ift.tt/3iVIeOf